ರೈತರು ತಮ್ಮ ಕೃಷಿ ಚಟುವಟಿಕೆ (agriculture activities) ಗಳನ್ನು ಸರಿಯಾಗಿ ನಿಭಾಯಿಸಲು ಅಂದರೆ ಉತ್ತಮ ಫಸಲು ಬರುವುದಕ್ಕೆ ತೋಟಕ್ಕೆ ಗೊಬ್ಬರ ಹಾಕುವುದು ಕೀಟನಾಶಕ ಬಳಸುವುದು ಹಾಗೂ ನೀರಾವರಿ ಮೊದಲಾದವುಗಳಿಗೆ ಬೇಕಾಗುವ ಪಂಪ್ಸೆಟ್ (pumpset) ಟ್ಯಾಕ್ಟರ್ ನಂತಹ ಉಪಕರಣ ಖರೀದಿ ಮಾಡಲು ದೊಡ್ಡ ಮೊತ್ತದಲ್ಲಿಯೇ ಹಣ ಖರ್ಚು ಮಾಡಬೇಕು.
ಇಷ್ಟೆಲ್ಲಾ ನಿರ್ವಹಣೆ ಮಾಡಿದರೆ ಮಾತ್ರ ಉತ್ತಮ ಫಸಲು ಬರಲು ಸಾಧ್ಯ ಅಂತಹ ಸಂದರ್ಭದಲ್ಲಿ ರೈತರು ಸಾಲ (loan for farmers) ಮಾಡುವುದು ಸಹಜ ಇದಕ್ಕಾಗಿ ಸರ್ಕಾರವೂ ಕೂಡ ರೈತರಿಗೆ ಕಡಿಮೆ ಬಡ್ಡಿ ದರ (low interest loan) ದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ.
ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗೆ ಸಂಪೂರ್ಣ ಶ್ರಮ ವಹಿಸುತ್ತಿದ್ದು, ಅತಿ ಕಡಿಮೆ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಇದಕ್ಕಾಗಿ ಕಿಸಾನ್ ಕ್ರೆಡಿಟ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಒಂದು ಕಾರ್ಡ್ ಇರುವ ರೈತರು ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇದನ್ನ ಪಡೆದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಈ ದಾಖಲೆ ಇದ್ರೆ ಮಹಿಳೆಯರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ
ಪ್ರಧಾನ ಮಂತ್ರಿ ಕಿಸಾನ್ ಕಾರ್ಡ್ ಯೋಜನೆ (Pradhanmantri Kisan credit card Yojana)
ಇದು ರೈತರಿಗಾಗಿಯೇ ಆರಂಭಿಸಲಾಗಿರುವ ಯೋಜನೆ ಆಗಿದ್ದು, ಈ ಯೋಜನೆಯ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಹೊಂದಿರುವ ರೈತರು ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಮೂರು ಲಕ್ಷ, ಕಡಿಮೆ ಬಡ್ಡಿ ದರದ ಸಾಲ ಪಡೆದುಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಯಾರು ಅರ್ಹರು!
* ಸ್ಥಿರ ಆದಾಯದ ಮೂಲ ಹೊಂದಿರುವ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
* ಕೃಷಿ ಭೂಮಿ ಹೊಂದಿರಬೇಕು
* ಕನಿಷ್ಠ ಒಂದು ಎಕರೆ ಹಾಗೂ ಗರಿಷ್ಠ 10 ಹೆಕ್ಟರ್ ಕೃಷಿ ಜಮೀನು ಹೊಂದಿರಬೇಕು.
* 18ರಿಂದ 70ನೇ ವರ್ಷದ ವರೆಗೂ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
ನಿಮ್ಮ ಬಳಿ ಯಾವುದೇ ಬ್ಯಾಂಕ್ ಖಾತೆ ಇದ್ರೂ ಸಾಕು, ಸಿಗುತ್ತೆ 2 ಲಕ್ಷ ರೂಪಾಯಿಗಳ ಲಾಭ!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
* ರೈತರ ಜಮೀನಿನ ಪಹಣಿ ಪತ್ರ
* ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ವಿಳಾಸ ಪುರಾವೆಗಾಗಿ ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮೊದಲಾದ ದಾಖಲೆಗಳು.
ಕಿಸಾನ್ ಕ್ರೆಡಿಟ್ ಯೋಜನೆಯ ಬಗ್ಗೆ ಮಹತ್ವದ ಅಂಶಗಳು!
ನಬಾರ್ಡ್ ಈ ಯೋಜನೆಯನ್ನು ರೂಪಿಸಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ ಎರಡು ರೀತಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಕೃಷಿ ಚಟುವಟಿಕೆಗಳಿಗಾಗಿ ಮೂರು ವರ್ಷ ಅವಧಿಯ ಸಾಲ ಹಾಗೂ ಪಶು ಸಂಗೋಪನೆ, ಮೀನು ಸಾಕಾಣಿಕೆ ಮೊದಲಾದ ಉಪಕಸುಬುಗಳಿಗಾಗಿ ಮೂರರಿಂದ ಐದು ವರ್ಷಗಳವರೆಗಿನ ಎರಡನೇ ಅವಧಿಯ ಸಾಲ ಪಡೆಯಬಹುದು.
ಈ ಯೋಜನೆ ಅಡಿಯಲ್ಲಿ ಕೇವಲ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಆದರೆ ಬ್ಯಾಂಕ್ನಿಂದ ಬ್ಯಾಂಕ್ಗೆ ಸಾಲ ಕೊಡುವ ಮೊತ್ತ ಮತ್ತು ಬಡ್ಡಿ ದರದಲ್ಲಿ ವ್ಯತ್ಯಾಸ ಇರುತ್ತದೆ. ಸದ್ಯ ಯಾವ ಪ್ರಮುಖ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಇದೆ ನೋಡೋಣ.
ಬಾಡಿಗೆ ಮನೆಯಲ್ಲಿ ಇರುವವರಿಗೆ ವಸತಿ ಯೋಜನೆ! ಉಚಿತ ಮನೆಗೆ ಅರ್ಜಿ ಸಲ್ಲಿಸಿ
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ನೀಡುವ ಬ್ಯಾಂಕುಗಳು ಮತ್ತು ಬಡ್ಡಿ ದರಗಳು!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಎಸ್ ಬಿ ಐ (SBI) ಬ್ಯಾಂಕ್ ನಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಐದು ವರ್ಷಗಳ ಅವಧಿಗೆ ಸಾಲ ಪಡೆಯಬಹುದಾಗಿದ್ದು ಕೇವಲ 2% ಬಡ್ಡಿ ದರದಲ್ಲಿ ರೈತರು ಈ ಸಾಲ ಪಡೆಯಬಹುದು.
ಎಚ್ ಡಿ ಎಫ್ ಸಿ ಬ್ಯಾಂಕ್- ಗರಿಷ್ಠ ಪಡೆಯಬಹುದಾದ ಸಾಲದ ಮೊತ್ತ ಮೂರು ಲಕ್ಷ ರೂಪಾಯಿಗಳು. ಸಾಲ ಹಿಂತಿರುಗಿಸುವ ಅವಧಿ ನಾಲ್ಕರಿಂದ ಐದು ವರ್ಷಗಳು ಹಾಗೂ ಬಡ್ಡಿದರ 9% ನಿಂದ ಆರಂಭವಾಗುತ್ತದೆ.
ಆಕ್ಸಿಸ್ ಬ್ಯಾಂಕ್ – 8.55% ಬಡ್ಡಿ ದರದಲ್ಲಿ ಕಿಸಾನ್ ಕ್ರೆಡಿಟ್ ಲೋನ್ ಪಡೆಯಬಹುದು. ಐದು ವರ್ಷಗಳ ಅವಧಿಗೆ 2.5 ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ ಹಾಗೂ 50,000 ವಿಮಾ ರಕ್ಷಣಾ ಸೌಲಭ್ಯ ನೀಡಲಾಗುವುದು.
ಬ್ಯಾಂಕ್ ಆಫ್ ಇಂಡಿಯಾ – ಐವತ್ತು ಸಾವಿರಕ್ಕಿಂತ ಕಡಿಮೆ ಆದಾಯ ಇರುವ ರೈತರು ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಲೋನ್ ಪಡೆದುಕೊಳ್ಳುವುದಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಅಥವಾ ಆನ್ಲೈನ್ ನಲ್ಲಿ ಬ್ಯಾಂಕ್ ವೆಬ್ಸೈಟ್ ಮೂಲಕ ಕಿಸಾನ್ ಕ್ರೆಡಿಟ್ ಲೋನ್ ಬಗ್ಗೆ ಮಾಹಿತಿ ಪಡೆಯಬಹುದು.
Farmers will get a loan of 3 lakh rupees if they have this card
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.