ರೈತರಿಗೆ ಮತ್ತೊಂದು ಯೋಜನೆ ಮೂಲಕ ಸಿಗಲಿದೆ 3 ಲಕ್ಷ ತನಕ ಸಾಲ! ಕಡಿಮೆ ಬಡ್ಡಿಗೆ ಬಂಪರ್ ಕೊಡುಗೆ

ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಹೊಸ ಯೋಜನೆ ಕಿಸಾನ್ ಕ್ರೆಡಿಟ್ ಸಾಲದ (Kisan Credit Card Loan) ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ರೈತರಿಗೆ ಸಾಲ ಸೌಲಭ್ಯ ಸಿಗಲಿದೆ.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರಿಗೆ ಸಹಾಯ ಅಗುವಂಥ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಬಂದಿದೆ. ಅವುಗಳ ಮೂಲಕ ರೈತರು ಹಣಕಾಸಿನ ವಿಚಾರದಲ್ಲಿ ಸಹಾಯ ಪಡೆಯುತ್ತಿದ್ದಾರೆ.

ಪಿಎಮ್ ಕಿಸಾನ್ ಯೋಜನೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡುತ್ತಿದ್ದು, ಇದೀಗ ಮತ್ತೊಂದು ಯೋಜನೆಯನ್ನು ಕೂಡ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದರ ಮೂಲಕ ರೈತರಿಗೆ ಇನ್ನಷ್ಟು ಅನುಕೂಲ ಸಿಗಲಿದೆ. ಆ ಯೋಜನೆಯ ಬಗ್ಗೆ ನಿಮಗೆ ತಿಳಿಸುತ್ತೇವೆ..

Farmers will get a loan of up to 3 lakh through Kisan Credit Card Loan scheme

ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಹೊಸ ಯೋಜನೆ ಕಿಸಾನ್ ಕ್ರೆಡಿಟ್ ಸಾಲದ (Kisan Credit Card Loan) ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ರೈತರಿಗೆ ಸಾಲ ಸೌಲಭ್ಯ ಸಿಗಲಿದ್ದು, ಇದರಲ್ಲಿ ಸಿಗುವ ಹಣದಿಂದ ರೈತರು ಕೃಷಿ ಕೆಲಸಕ್ಕೆ ಬೇಕಾಗುವ ಯಂತ್ರೋಪಕರಣಗಳು, ಬಿತ್ತನೆ ಬೀಜಗಳು, ರಸಗೊಬ್ಬರ ಇದೆಲ್ಲವನ್ನು ಕೂಡ ಖರೀದಿ ಮಾಡಬಹುದು.

ಪ್ರಸ್ತುತ ದೇಶದ ಹಲವು ರೈತರು ಈ ಯೋಜನೆಯ ಮೂಲಕ ಸಾಲ ಪಡೆಯುತ್ತಿದ್ದು, ನೀವು ಕೂಡ ಈ ಸೌಲಭ್ಯವನ್ನು ಪಡೆಯಬಹುದು. ಕಿಸಾನ್ ಕ್ರೆಡಿಟ್ ಸಾಲ (Kisan Credit Card Loan) ಪಡೆಯುವುದು ಹೇಗೆ ಎಂದು ತಿಳಿಯೋಣ.

ಮನೆಯಿಲ್ಲದ ಬಡ ಮಹಿಳೆಯರಿಗೆ ಸಿಗಲಿದೆ ಉಚಿತ ಮನೆ, ಕೇಂದ್ರದ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ

ಕಿಸಾನ್ ಕ್ರೆಡಿಟ್ ಕಾರ್ಡ್ ಇಂದ 3 ಲಕ್ಷ ಸಾಲ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಕಿಸಾನ್ ಕ್ರೆಡಿಟ್ ಯೋಜನೆಯಲ್ಲಿ ರೈತರಿಗೆ ಯಾವುದೇ ದಾಖಲೆ ನೀಡದೇ ಇದ್ದರು ಕೂಡ 3 ಲಕ್ಷದವರೆಗೂ ಸಾಲ ಸೌಲಭ್ಯ ಪಡೆಯಬಹುದು. ಈ ಬಗ್ಗೆ ಸರ್ಕಾರದ ವ್ಯವಸ್ಥಾಪಕ ಆಗಿರುವ ಶಿವ ಕುಮಾರ್ ಅವರು ತಿಳಿಸಿದ್ದಾರೆ.

ಈ ಸಾಲಕ್ಕೆ 4% ವರೆಗು ಬಡ್ಡಿ ವಿಧಿಸಲಾಗುತ್ತದೆ, ಇದರಲ್ಲಿ 3 ಲಕ್ಷದವರೆಗೂ Loan ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡುವ ರೈತರಿಗೆ 3% ಸಹಾಯಧನ ಕೂಡ ಲಭ್ಯವಿರುತ್ತದೆ.. ಹಾಗೆಯೇ 1.60 ಲಕ್ಷ ಸಾಲ ತಕ್ಷಣವೇ ಪಡೆಯಬಹುದು ಎಂದು ಮಾಹಿತಿ ಸಿಕ್ಕಿದೆ.

ಈ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ ಎಂದು ನೋಡುವುದಾದರೆ, ರೈತರು ತಮಗೆ ಹತ್ತಿರ ಇರುವ ಗ್ರಾಮೀಣ ಕೃಷಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕಿ, 15 ದಿನಗಳ ಒಳಗೆ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಸಿಗುತ್ತದೆ.

ಈ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಸಿಗಲಿದ್ದು, ಇದನ್ನು ಬಳಸಿ ಕೃಷಿಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ, ರೈತರು ವ್ಯವಸಾಯ ಕೆಲಸವನ್ನು ಮಾಡಿಕೊಂಡು ಹೋಗಬಹುದು.

ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ, ಇನ್ಮುಂದೆ ಪೋಸ್ಟ್ ಆಫೀಸ್‌ನಲ್ಲೇ ಸಿಗುತ್ತೆ 90 ಸಾವಿರ ಪರ್ಸನಲ್ ಲೋನ್!

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆಯಲು ಅರ್ಹತೆ:

*ನಮ್ಮ ದೇಶದ ಪ್ರಜೆಗಳಾಗಿರುವ ಯಾವುದೇ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಹಾಗೂ ಕಿಸಾನ್ ಕ್ರೆಡಿಟ್ ಸಾಲ ಪಡೆಯಲು ಅರ್ಹರಾಗುತ್ತಾರೆ.

*ಈಗಾಗಲೇ ಪಿಎಮ್ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವವರು ಕೂಡ ಈ ಯೋಜನೆಗೆ ಅರ್ಹತೆ ಹೊಂದುತ್ತಾರೆ.

*3,00,000 ರೂಪಾಯಿಗಳವರೆಗು ರೈತರಿಗೆ KCC ಮೂಲಕ ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ.

*ಸರ್ಕಾರೇತರ ಬ್ಯಾಂಕ್ ಗಳಲ್ಲಿ ಕಿಸಾನ್ ಕ್ರೆಡಿಟ್ ಸಾಲ ಕೊಡಲಾಗುತ್ತದೆ.

Farmers will get a loan of up to 3 lakh through Kisan Credit Card Loan scheme