FASTag: ಫಾಸ್ಟ್ಟ್ಯಾಗ್ ನಿಯಮ ಬದಲಾವಣೆ, ಫೆಬ್ರವರಿ 1, 2026ರಿಂದ ಹೊಸ ರೂಲ್ಸ್ ಜಾರಿ
FASTag: ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನು ಸರಳಗೊಳಿಸಲು NHAI ಮಹತ್ವದ ಬದಲಾವಣೆ ಜಾರಿಗೆ ತಂದಿದೆ. ಫೆಬ್ರವರಿ 1, 2026ರಿಂದ ಹೊಸ ಫಾಸ್ಟ್ಟ್ಯಾಗ್ಗಳಿಗೆ KYV ಪರಿಶೀಲನೆ ಅಗತ್ಯವಿಲ್ಲ.
- FASTag ನಿಯಮ ಬದಲಾವಣೆ
- ಫೆಬ್ರವರಿ 1, 2026ರಿಂದ ಜಾರಿ
- ಫಾಸ್ಟ್ಟ್ಯಾಗ್ಗಳಿಗೆ KYV ಪರಿಶೀಲನೆ
FASTag Rules: ರಾಷ್ಟ್ರೀಯ ಹೆದ್ದಾರಿ ಪ್ರಯಾಣವನ್ನು ಸುಲಭಗೊಳಿಸಲು ಫಾಸ್ಟ್ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಿದ್ದರೂ, ಪರಿಶೀಲನಾ ಪ್ರಕ್ರಿಯೆಯಿಂದಾಗಿ ಅನೇಕ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದರು. ಇದಕ್ಕೆ ತೆರೆ ಎಳೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ನಿರ್ಧಾರ ಕೈಗೊಂಡಿದೆ.
ಫೆಬ್ರವರಿ 1, 2026ರಿಂದ ಕಾರು, ಜೀಪ್ ಮತ್ತು ವ್ಯಾನ್ಗಳಿಗೆ ಹೊಸದಾಗಿ ನೀಡುವ FASTagಗಳಿಗೆ Know Your Vehicle (KYV) ಪ್ರಕ್ರಿಯೆ ಅನಿವಾರ್ಯವಾಗಿರುವುದಿಲ್ಲ. ಅಂದರೆ, ಟ್ಯಾಗ್ ಕೈಗೆ ಬಂದ ತಕ್ಷಣವೇ ಬಳಕೆ ಸಾಧ್ಯವಾಗಲಿದೆ.
ಬ್ಯಾಂಕ್ಗಳಿಗೇ ಹೊಣೆ – ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ಹೊಸ ನಿಯಮದಂತೆ, ಫಾಸ್ಟ್ಟ್ಯಾಗ್ ಜಾರಿಗೊಳಿಸುವ ಮೊದಲು ವಾಹನದ ಸಂಪೂರ್ಣ ಪರಿಶೀಲನೆಯ ಜವಾಬ್ದಾರಿ ಬ್ಯಾಂಕ್ಗಳಿಗೆ ವರ್ಗಾವಣೆ ಮಾಡಲಾಗಿದೆ.
ವಾಹನದ ವಿವರಗಳನ್ನು ವಾಹನ್ ಡೇಟಾಬೇಸ್ ಮೂಲಕ ತಪಾಸಣೆ ಮಾಡಲಾಗುತ್ತದೆ. ಅಲ್ಲಿ ಮಾಹಿತಿ ಲಭ್ಯವಿಲ್ಲದಿದ್ದರೆ, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC) ಆಧಾರವಾಗಿ ಪರಿಶೀಲನೆ ಪೂರ್ಣಗೊಳ್ಳುತ್ತದೆ.
ಒಮ್ಮೆ ಫಾಸ್ಟ್ಟ್ಯಾಗ್ ಸಕ್ರಿಯಗೊಂಡ ನಂತರ, ಮತ್ತೆ KYV ಹೆಸರಿನಲ್ಲಿ ಪ್ರತ್ಯೇಕ ದೃಢೀಕರಣಕ್ಕೆ ಅಗತ್ಯವಿಲ್ಲ.
ಇದನ್ನೂ ಓದಿ: 10 ಲಕ್ಷದೊಳಗೆ ಸಿಗುವ ಎಲೆಕ್ಟ್ರಿಕ್ ಕಾರುಗಳು; ಒಂದೇ ಚಾರ್ಜ್ಗೆ 365 ಕಿಮೀ ಮೈಲೇಜ್
KYV ಎಂದರೇನು? ಏಕೆ ರದ್ದು ಮಾಡಲಾಗಿದೆ?
KYV ಎಂದರೆ ಫಾಸ್ಟ್ಟ್ಯಾಗ್ ಸರಿಯಾದ ವಾಹನಕ್ಕೆ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಹೆಚ್ಚುವರಿ ಪರಿಶೀಲನೆ. ಆದರೆ ವಾಸ್ತವದಲ್ಲಿ ಈ ಪ್ರಕ್ರಿಯೆ ತಾಂತ್ರಿಕ ದೋಷ, ವಿಳಂಬ ಮತ್ತು ಮರುಮರು ದಾಖಲೆ ಅಪ್ಲೋಡ್ ಮಾಡುವ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು.
ಈ ಸಮಸ್ಯೆಗಳಿಂದಾಗಿ ಬಳಕೆದಾರರ ಅಸಮಾಧಾನ ಹೆಚ್ಚಾದ ಹಿನ್ನೆಲೆ, NHAI ಈ ಪ್ರಕ್ರಿಯೆಯನ್ನು ರದ್ದು ಮಾಡಲು ತೀರ್ಮಾನಿಸಿದೆ.
ಇದನ್ನೂ ಓದಿ: ಚಿನ್ನದ ಬೆಲೆ 10 ಗ್ರಾಂ ₹9 ಲಕ್ಷ ಆಗುತ್ತಾ? ಹೊಸ ವರದಿ ಎಬ್ಬಿಸಿದ ಆತಂಕ
ಸಾಮಾನ್ಯ ಚಾಲಕರಿಗೆ ಲಾಭವೇನು?
ಹೊಸ ನಿಯಮಗಳಿಂದ ಫಾಸ್ಟ್ಟ್ಯಾಗ್ ಖರೀದಿ ಮತ್ತು ಬಳಕೆ ಹೆಚ್ಚು ವೇಗವಾಗಿ, ಸುಲಭವಾಗಿ ಆಗಲಿದೆ.
ಇನ್ನು ಮುಂದೆ:
- ಟ್ಯಾಗ್ ಪಡೆದ ತಕ್ಷಣ ಬಳಕೆ ಸಾಧ್ಯ
- ಮರುಮರು RC, ಫೋಟೋ ಅಪ್ಲೋಡ್ ಅವಶ್ಯಕತೆ ಇಲ್ಲ
- ಬ್ಯಾಂಕ್ ಅಥವಾ ಕಸ್ಟಮರ್ ಕೇರ್ಗೆ ಸುತ್ತಾಟ ತಪ್ಪುತ್ತದೆ
ಅತ್ಯಂತ ಅಗತ್ಯವಿದ್ದರೆ ಮಾತ್ರ, ಅಂದರೆ ತಪ್ಪು ಲಿಂಕ್, ದುರುಪಯೋಗ ಅಥವಾ ದೂರು ಬಂದಾಗ ಮಾತ್ರ ಮರುಪರಿಶೀಲನೆ ನಡೆಯಲಿದೆ.



