ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಘೋಷಣೆ, ಬಂಪರ್ ಸೇಲ್! ಭರ್ಜರಿ ಆಫರ್ - Flipkart Big Billion Days Sale

Flipkart Big Billion Days Sale : ಸೆಪ್ಟೆಂಬರ್ 23ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗುತ್ತಿದ್ದು, ಆಪಲ್, ಸ್ಯಾಮ್ಸಂಗ್, ಮೋಟೊರೋಲಾ ಸ್ಮಾರ್ಟ್‌ಫೋನ್‌ಗಳು ಹಾಗೂ ಗೃಹೋಪಕರಣಗಳ ಮೇಲೆ ಭಾರಿ ಡಿಸ್ಕೌಂಟ್‌ಗಳು, ಬ್ಯಾಂಕ್ ಆಫರ್‌ಗಳ ಮೂಲಕ ಹೆಚ್ಚುವರಿ ಲಾಭ.

Flipkart Big Billion Days Sale : ಆನ್‌ಲೈನ್ ಶಾಪಿಂಗ್ ಪ್ರಿಯರು ಕಾಯುತ್ತಿದ್ದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ದಿನಾಂಕ ಇದೀಗ ಘೋಷಿಸಲಾಗಿದೆ. ವರದಿಗಳ ಪ್ರಕಾರ, ಈ ವಿಶೇಷ ಸೇಲ್ ಸೆಪ್ಟೆಂಬರ್ 23ರಿಂದ ಆರಂಭವಾಗಲಿದೆ. ಆದರೆ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಫ್ಲಿಪ್‌ಕಾರ್ಟ್ ಇನ್ನೂ ಬಹಿರಂಗಪಡಿಸಿಲ್ಲ.

ಈ ಬಾರಿ ಸೇಲ್‌ನಲ್ಲಿ iPhone 16, Samsung Galaxy S24, Motorola Edge 60 Pro ಸೇರಿದಂತೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನು ಭಾರೀ ರಿಯಾಯಿತಿಯಲ್ಲಿ ಖರೀದಿಸಲು ಸಾಧ್ಯವಾಗಲಿದೆ.

ಜೊತೆಗೆ OnePlus Buds 3 ಸೇರಿದಂತೆ ಆಡಿಯೋ ಉತ್ಪನ್ನಗಳು, 55 ಇಂಚಿನ ಸ್ಮಾರ್ಟ್ ಟಿವಿ, ಫ್ರಂಟ್ ಲೋಡ್ ವಾಶಿಂಗ್ ಮೆಷೀನ್‌ಗಳ ಮೇಲೆ ಕೂಡ ಆಕರ್ಷಕ ಕಡಿತ ದೊರೆಯಲಿದೆ.

ಫ್ಲಿಪ್‌ಕಾರ್ಟ್ ಈ ಸೇಲ್‌ಗಾಗಿ Axis ಬ್ಯಾಂಕ್ ಮತ್ತು ICICI ಬ್ಯಾಂಕ್ ಜೊತೆಗೂಡಿ ರಿಯಾಯಿತಿ ಘೋಷಿಸಿದೆ. ಹೀಗಾಗಿ ಈ ಬ್ಯಾಂಕ್‌ಗಳ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದ ಗ್ರಾಹಕರಿಗೆ ಹೆಚ್ಚುವರಿ 10% ರಿಯಾಯಿತಿ ಲಭ್ಯ. ಹಬ್ಬದ ಶಾಪಿಂಗ್ ಸೀಸನ್‌ನಲ್ಲಿ ಇದು ಗ್ರಾಹಕರಿಗೆ ದೊಡ್ಡ ಉಡುಗೊರೆಯಾಗಲಿದೆ.

ಹೀಗೇ ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲ್ಯಾಕ್ ಸದಸ್ಯರಿಗೆ ಸೇಲ್‌ಗೆ ಮುಂಚಿತ ಪ್ರವೇಶ ಸಿಗಲಿದೆ. ಇದರಿಂದ ಅವರಿಗೆ “ಸ್ಟೀಲ್ ಡೀಲ್ಸ್”, “ಲಿಮಿಟೆಡ್ ಟೈಮ್ ಆಫರ್‌ಗಳು” ಮತ್ತು “ಫೆಸ್ಟಿವ್ ರಷ್ ಅವರ್ಸ್” ನಂತಹ ವಿಶೇಷ ಆಫರ್‌ಗಳನ್ನು ಮೊದಲಿಗರಾಗಿ ಪಡೆಯುವ ಅವಕಾಶ ಸಿಗಲಿದೆ.

ಅಮೆಜಾನ್ ತನ್ನ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ ದಿನಾಂಕವನ್ನು ಕೆಲವೇ ಗಂಟೆಗಳ ಮೊದಲು ಘೋಷಿಸಿರುವ ಸಂದರ್ಭದಲ್ಲಿ, ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ದಿನಾಂಕವನ್ನು ಹೊರಡಿಸಿದ್ದು, ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಕನಡೆಯಲಿದೆ, ಆದ್ರೆ ಗ್ರಾಹಕರಿಗೆ ಮಾತ್ರ ವಿಶೇಷ ಆಫರ್ ಗಳು ಸಿಗುವುದಂತೂ ಪಕ್ಕ.

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories