Business NewsIndia News

ಮೋದಿಜಿ ಕೊಟ್ರು ಭಾರೀ ಸಿಹಿ ಸುದ್ದಿ, ಕೇಂದ್ರದಿಂದ ಉಚಿತ ಕರೆಂಟ್ ಯೋಜನೆ!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಉಚಿತ ವಿದ್ಯುತ್! ಈ ಯೋಜನೆಯ ಪ್ರಯೋಜನಗಳು, ಅರ್ಜಿ ಪ್ರಕ್ರಿಯೆ, ಹಾಗೂ ನಿಮಗೆ ಲಾಭದಾಯಕವಾಗುವ ಮಾರ್ಗಗಳನ್ನು ಈ ಲೇಖನದಲ್ಲಿ ತಿಳಿಯಿರಿ.

  • ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಿಂದ ಉಚಿತ ವಿದ್ಯುತ್!
  • ಸೌರ ಫಲಕಗಳೊಂದಿಗೆ ಶಾಶ್ವತ ವಿದ್ಯುತ್ ಪರಿಹಾರ!
  • ಅರ್ಜಿಗೆ ಸರಳ ಪ್ರಕ್ರಿಯೆ, ಸರ್ಕಾರದಿಂದ ಭಾರೀ ಸಬ್ಸಿಡಿ!

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ವಿದ್ಯುತ್ ಬಳಕೆ ಸಹಜವಾಗೇ ಹೆಚ್ಚುತ್ತದೆ. ಕೆಲವು ರಾಜ್ಯ ಸರ್ಕಾರಗಳು ಉಚಿತ ವಿದ್ಯುತ್ ಒದಗಿಸಿದರೂ ನಿಗದಿತ ಮಟ್ಟ ಮೀರಿದರೆ ಬಿಲ್ ಕಟ್ಟಲೇಬೇಕು.

ಆದರೆ, ಕೇಂದ್ರ ಸರ್ಕಾರದ (Free Electricity) ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ (PM Surya Ghar Yojana) ಇದಕ್ಕೆ ಪರಿಹಾರ ನೀಡುತ್ತಿದೆ.

ಮೋದಿಜಿ ಕೊಟ್ರು ಭಾರೀ ಸಿಹಿ ಸುದ್ದಿ, ಕೇಂದ್ರದಿಂದ ಉಚಿತ ಕರೆಂಟ್ ಯೋಜನೆ!

ಇದನ್ನೂ ಓದಿ: ಇನ್ಮುಂದೆ EMI ಕಟ್ಟೋದು ಮಿಸ್ ಆದ್ರೆ, ಭವಿಷ್ಯದಲ್ಲಿ ಯಾವುದೇ ಲೋನ್ ಸಿಗಲ್ಲ!

ಈ ಯೋಜನೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

ಭಾರತ ಸರ್ಕಾರ 2024ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, 2027ರೊಳಗೆ ಒಂದು ಕೋಟಿ ಮನೆಗಳಿಗೆ ಸೌರ ಶಕ್ತಿಯ (Solar) ನೆರವು ನೀಡಲು ಉದ್ದೇಶಿಸಿದೆ. ಇದರ ಅಡಿ, ಸಬ್ಸಿಡಿಯನ್ನು ಸರಕಾರ ನಿಮ್ಮ ಖಾತೆಗೆ ಜಮೆ ಮಾಡಲಿದೆ!

ಈ ಯೋಜನೆಯಡಿ ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್ ಪಾನೆಲ್ಸ್ (Solar Panels) ಅಥವಾ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಲಭ್ಯವಿರುತ್ತದೆ. ಇದನ್ನು ನವೀಕೃತ ಇಂಧನ ಸಚಿವಾಲಯ (MNRE – Ministry of New and Renewable Energy) ನಿರ್ವಹಿಸುತ್ತಿದೆ.

ಇದನ್ನೂ ಓದಿ: EMI ಕಟ್ಟಿಲ್ವಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗೋಕೂ ಮುನ್ನ ಈಗೆ ಮಾಡಿ

Free Electricity

ಯೋಜನೆಯ ಅಡಿಯಲ್ಲಿ ಸಿಗುವ ಸಬ್ಸಿಡಿ:

1 ಕಿಲೋವಾಟ್ – ₹30,000
2 ಕಿಲೋವಾಟ್ – ₹60,000
3 ಕಿಲೋವಾಟ್ – ₹78,000

ಈ ಪ್ಯಾನಲ್ ಅಳವಡಿಸಿದರೆ, ನೀವು ಖರ್ಚು ಮಾಡದ ವಿದ್ಯುತ್ ಬಳಸಿ, ಉಳಿದ ಎಕ್ಸ್ಟ್ರಾ ವಿದ್ಯುತ್ ಅನ್ನು (DISCOM) ಕಂಪನಿಗೆ ಮಾರಬಹುದು. ಇದು ನಿಮಗೆ ಆದಾಯದ ಮಾರ್ಗವು ಆಗಬಹುದು!

ಇದನ್ನೂ ಓದಿ: ಎಸ್‌ಬಿಐ ಮತ್ತೊಂದು ಹೊಸ ಸ್ಕೀಮ್ ಬಿಡುಗಡೆ! 3 ಲಕ್ಷ ಬಂಪರ್ ಆದಾಯ

Solar Panel

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯ ಪ್ರಕ್ರಿಯೆಯೂ ಬಹಳ ಸರಳವಾಗಿದೆ. (PM Surya Ghar Portal – pmsuryaghar.gov.in) ವೆಬ್‌ಸೈಟ್‌ಗೆ ತೆರಳಿ:

  1. ನಿಮ್ಮ ರಾಜ್ಯ ಹಾಗೂ ವಿದ್ಯುತ್ ಕಂಪನಿಯ ಹೆಸರು ಆಯ್ಕೆಮಾಡಿ
  2. ವಿದ್ಯುತ್ ಬಳಕೆದಾರ ಸಂಖ್ಯೆಯನ್ನು (Consumer ID) ನೀಡಿ
  3. ಮೊಬೈಲ್ ಮತ್ತು ಇಮೇಲ್ ಐಡಿ ದಾಖಲಿಸಿ
  4. ಅನುದಾನ (Subsidy) ಪಡೆಯಲು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  5. ಅನುಮೋದನೆ ದೊರಕಿದ ಬಳಿಕ ನೋಂದಾಯಿತ (Registered) ವ್ಯಾಪಾರಿಯಿಂದ ಸೌರ ಫಲಕಗಳನ್ನು (Solar Panels) ಅಳವಡಿಸಿಕೊಳ್ಳಬಹುದು. ನಂತರ ಸರ್ಕಾರ ಶೀಘ್ರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತ ಜಮೆ ಮಾಡುತ್ತದೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಕಡಿಮೆ ಬಡ್ಡಿಗೆ ಲೋನ್ ಪಡೆಯೋ ಸೀಕ್ರೆಟ್ ಟಿಪ್ಸ್ ಇಲ್ಲಿದೆ

Solar electricity, Solar Panel

ಯಾರು ಅರ್ಜಿ ಸಲ್ಲಿಸಬಹುದು?

  • ಭಾರತೀಯ ನಾಗರಿಕರಾಗಿರಬೇಕು
  • ಮನೆಯು ಅರ್ಜಿದಾರರ ಹೆಸರಲ್ಲಿ ನೋಂದಾಯಿತವಾಗಿರಬೇಕು
  • ವಿದ್ಯುತ್ ಮೀಟರ್ ಕೂಡ ಅರ್ಜಿದಾರರ ಹೆಸರಲ್ಲಿ ಇರಬೇಕು
  • ಅತೀ ಮೊದಲು ಅರ್ಜಿಯನ್ನು ಸಲ್ಲಿಸುವವರಿಗೆ ಹೆಚ್ಚಿನ ಆದ್ಯತೆ

ಈ ಯೋಜನೆಯಿಂದ ಮಧ್ಯಮ ವರ್ಗದ ಮನೆಗಳಿಗೆ ದೊಡ್ಡ ಮಟ್ಟದ ವಿದ್ಯುತ್ ಖರ್ಚಿಗೆ ಶಾಶ್ವತ ಪರಿಹಾರ ಸಿಗಲಿದೆ.

Free Electricity for Homes, Check Eligibility and Apply

English Summary

Our Whatsapp Channel is Live Now 👇

Whatsapp Channel

Related Stories