Ads By Google
Business News

ಜುಲೈ 1ರಿಂದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಜಾರಿಗೆ ಬರಲಿದೆ ಹೊಸ ನಿಯಮಗಳು!

ಸೋಮವಾರದಿಂದ ಜುಲೈ ತಿಂಗಳು ಶುರುವಾಗಲಿದೆ, ಈ ವೇಳೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಮತ್ತು ಇನ್ನಿತರ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ

Ads By Google

ಪ್ರತಿ ಬಾರಿ ಹೊಸ ತಿಂಗಳು ಶುರು ಆಗುವಾಗ, ಆರ್ಥಿಕ ವಿಚಾರಗಳಲ್ಲಿ ಮತ್ತು ಇನ್ನಿತರ ಕೆಲವು ವಿಚಾರಗಳಲ್ಲಿ ನಿಯಮ ಬದಲಾವಣೆ ಆಗುವುದು ಸಹಜ. ಸರ್ಕಾರವು ಕೆಲವು ವಿಚಾರಗಳನ್ನು ಅಳೆದು ತೂಗಿ, ಜನರಿಗೆ ಅನುಕೂಲ ಆಗುವ ಹಾಗೆ ನಿಯಮಗಳನ್ನು ಜಾರಿಗೆ ತರುತ್ತದೆ.

ಅದೇ ರೀತಿ ಜುಲೈ ಇಂದ ಕೂಡ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು, ಅವುಗಳ ಬಗ್ಗೆ ಜನರು ತಿಳಿದುಕೊಳ್ಳುವುದು ಮತ್ತು ಆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಆಗಿರುತ್ತದೆ.

ನಾಳೆ ಜೂನ್ ತಿಂಗಳು ಮುಗಿಯಲಿದ್ದು, ಸೋಮವಾರದಿಂದ ಜುಲೈ ತಿಂಗಳು ಶುರುವಾಗಲಿದೆ, ಈ ವೇಳೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಮತ್ತು ಇನ್ನಿತರ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಆ ನಿಯಮಗಳು ಯಾವುವು? ಜನರಿಗೆ ಅದರಿಂದ ಹೇಗೆ ಉಪಯೋಗ ಆಗಲಿದೆ? ಕಡ್ಡಾಯವಾಗಿ ಪಾಲನೆ ಮಾಡಬೇಕಾದ ನಿಯಮಗಳು ಯಾವುವು? ಎಲ್ಲವನ್ನು ತಿಳಿಯೋಣ..

ಕಳೆದ 7 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,520 ರೂಪಾಯಿ ಇಳಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್

ಜುಲೈ 1ರಿಂದ ಹೊಸ ನಿಯಮ:

*LPG Cylinder Price

ದಿನನಿತ್ಯ ಬಳಕೆ ಮಾಡುವ ಪ್ರಮುಖ ವಸ್ತುಗಳಲ್ಲಿ ಗ್ಯಾಸ್ ಸಿಲಿಂಡರ್ ಕೂಡ ಒಂದು. ಪ್ರತಿ ತಿಂಗಳ ಶುರುವಿನಲ್ಲಿ ಮನೆಯಲ್ಲಿ ಬಳಕೆ ಮಾಡುವ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್ ಇವುಗಳ ಬೆಲೆಯಲ್ಲಿ ಬದಲಾವಣೆ ತರಲಾಗುತ್ತದೆ.

ಹೌದು, ಬೆಲೆ ಏರಿಕೆ ಆಗಲಿದೆಯಾ ಅಥವಾ ಇಳಿಕೆ ಆಗಲಿದೆಯಾ ಎನ್ನುವುದು ಜುಲೈ 1ರಂದು ಗೊತ್ತಾಗಲಿದ್ದು, ಅಂದು ನಿಗದಿ ಆಗುವ ಬೆಲೆಯನ್ನೇ ಜನರು ಪಾವತಿ ಮಾಡಬೇಕಾಗುತ್ತದೆ.

*Bank Holidays:

ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ತಿಂಗಳು ಬ್ಯಾಂಕ್ ನಲ್ಲಿ ಒಂದಷ್ಟು ರಜೆಗಳು ಸಿಗಲಿದೆ. ಸ್ಥಳೀಯ ಹಬ್ಬಗಳು, ಭಾನುವಾರದ ರಜೆ, ಶನಿವಾರದ ರಜೆ ಇದೆಲ್ಲವೂ ಇರುತ್ತದೆ. ಈ ರಜೆ ದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರು ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದು.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಜುಲೈ ತಿಂಗಳು ಬ್ಯಾಂಕ್ ಗೆ 12 ದಿನಗಳ ಕಾಲ ರಜೆ ಇರಲಿದೆ. ಆಯಾ ಊರಿನ ಹಬ್ಬಗಳ ಮೇಲು ನಿರ್ಧಾರ ಆಗುತ್ತದೆ. ಬ್ಯಾಂಕ್ ರಜೆ ಇದ್ದರೂ ಸಹ, ಆನ್ಲೈನ್ ಸೇವೆ (Banking) ಬಂದ್ ಅಗುವುದಿಲ್ಲ.

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?

*Credit Card Rule:

ಇತ್ತೀಚೆಗೆ RBI ನೀಡಿದ ಹೊಸ ಸೂಚನೆಯ ಅನುಸಾರ, ಜುಲೈ 1 ರಿಂದ ಕೆಲವು ಆನ್ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಕಷ್ಟವಾಗುತ್ತದೆ. phonpe, Cred, Builddesk ಹಾಗೂ Infibeam Avenue ಈ ಕೆಲವು ಪ್ಲಾಟ್ ಫಾರ್ಮ್ ಗಳ ಮೇಲೆ RBI ಹೊಸ ನಿಯಮದ ಪರಿಣಾಮ ಬೀರಿದ್ದು, ಇವುಗಳಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಸಾಧ್ಯ ಆಗುವುದಿಲ್ಲ.

ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್

RBI ಹೊಸ ನಿಯಮದ ಅನುಸಾರ ಜುಲೈ 1ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು (Credit Card Bill) ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಪಾವತಿ ಮಾಡಬಹುದು.

From July 1, new rules will be implemented including gas cylinder, credit card

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere