ಇನ್ಮುಂದೆ ಕೇವಲ ₹500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಬಿಪಿಎಲ್ ಕಾರ್ಡ್ ಇರೋರಿಗೆ ಮಾತ್ರ!

ಈಗ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ (LPG Gas Cylinder) ಗಳನ್ನು ಬಳಸುತ್ತಾರೆ. ಅಡುಗೆ ಮಾಡುವುದಕ್ಕೆ ಬೇಕಾಗುವ ಪ್ರಮುಖವಾದ ಸಾಧನ ಇದು. ಆದರೆ ಗ್ಯಾಸ್ ಸಿಲಿಂಡರ್ (Gas Cylinder) ನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈಗಾಗಲೇ ದೇಶದಲ್ಲಿ ಹಣದುಬ್ಬರದ ಸಮಸ್ಯೆ ಕೂಡ ಇರುವುದರಿಂದ ಜನರಿಗೆ ಸಾವಿರಾರು ರೂಪಾಯಿ ಹಣಕೊಟ್ಟು ಗ್ಯಾಸ್ ಸಿಲಿಂಡರ್ ಗಳನ್ನು ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ..

ಈಗ ನಮ್ಮ ದೇಶದಲ್ಲಿ 2023ರ ಹಣಕಾಸು ವಹಿವಾಟು ವರ್ಷ (2023 Economical Year) ಶುರುವಾಗಿ 3 ತಿಂಗಳು ಕಳೆದು ನಾಲ್ಕನೇ ತಿಂಗಳು ನಡೆಯುತ್ತಿದೆ. ಈಗಾಗಲೇ ಆರ್ಥಿಕ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಕೂಡ ತರಲಾಗಿದೆ. 2023ಶುರುವಾಗಿ ಅರ್ಧ ವರ್ಷ ಕಳೆದಿರುವ ವೇಳೆಗೆ ಬಹುತೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು..

ಜನರಿಗೆ ಕಷ್ಟ ಆಗುತ್ತಿರುವುದರಿಂದ ಗ್ಯಾಸ್ ಸಿಲಿಂಡರ್ ಬೆಲೆಯನ್ನು (Gas Cylinder Rate) ಇಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರವು ಕೂಡ ಜನರ ಮನವಿಯನ್ನು ಆಲಿಸಿದ್ದು, ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವುದಕ್ಕೆ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದಿರುವುದು ಯೋಜನೆ ಆಗಿದ್ದು..

ಗೃಹಸಾಲದ EMI ಕಟ್ಟಲು ಕಷ್ಟಪಡುತ್ತಿರುವವರಿಗೆ ಗುಡ್ ನ್ಯೂಸ್! ಸುಲಭವಾಗಿ ಲೋನ್ ಟ್ರಾನ್ಸ್ಫರ್ ಮಾಡಿಕೊಳ್ಳಿ

ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಹಿಂದಿನ ತಿಂಗಳು ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೇ ಈ ವರ್ಷ ಕೂಡ ಗ್ಯಾಸ್ ಸಿಲಿಂಡರ್ ಗಳು ಸಿಗುತ್ತದೆ. ಆದರೆ ಜೂನ್ ತಿಂಗಳಿನಲ್ಲಿ ದಿನನಿತ್ಯ ಬಳಸುವ ಅಡುಗೆ ಅನಿಲದ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈಗ ಸಿಲಿಂಡರ್ ಬೆಲೆಯ ತೊಂದರೆ ಜನರಿಗೆ ಆಗಬಾರದು ಎಂದು..

ರಾಜಸ್ಥಾನದ ಸರ್ಕಾರ ಒಂದು ಹೊಸ ಉಪಾಯ ಮತ್ತು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಹೊಸ ಯೋಜನೆಯ ಮೂಲಕ ಅಲ್ಲಿನ ಜನರು ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯುತ್ತಾರೆ. ಹೌದು, ರಾಜಸ್ಥಾನದ ಸರ್ಕಾರವು (Government of Rajasthan) ಜನರ ಕಷ್ಟ ಅರ್ಥ ಮಾಡಿಕೊಂಡು, 500 ರೂಪಾಯಿಗೆ 14ಕೆಜಿಯ ಗ್ಯಾಸ್ ಸಿಲಿಂಡರ್ ಕೊಡುವುದಕ್ಕೆ ಮುಂದಾಗಿದೆ.

LPG Gas Cylinder Priceಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ತೊಂದರೆ ಇಂದ ಜನರನ್ನು ಪಾರು ಮಾಡಲು ರಾಜಸ್ಥಾನದ ಸರ್ಕಾರ ತಂದಿರುವ ಯೋಜನೆಯ ಹೆಸರು, ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆ (Chief Minister Gas Cylinder Scheme). ಈ ಯೋಜನೆಯ ಮೂಲಕ ಜನರಿಗೆ ಆಗುತ್ತಿರುವ ಹಣದುಬ್ಬರದ ಸಮಸ್ಯೆ ಕಡಿಮೆ ಆಗಲಿದೆ.

ATM ಬಳಕೆದಾರರಿಗೆ ಬೊಂಬಾಟ್ ಕೊಡುಗೆ, ಸಿಗಲಿದೆ 5 ಲಕ್ಷ! ಕೇಂದ್ರ ಸರ್ಕಾರದ ಹೊಸ ಯೋಜನೆ

ರಾಜಸ್ತಾನದಲ್ಲಿ ವಾಸ ಮಾಡುವ ಎಲ್ಲಾ ಜನರು ಸಹ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆಯಲ್ಲಿ ಬಡತನದಲ್ಲಿ ಇರುವ ಫಲಾನುಭವಿಗಳಿಗೆ ₹500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಡಲಾಗುತ್ತದೆ. ಈ ಪ್ರಯೋಜನ ಪಡೆಯಲು ರಾಜಸ್ಥಾನದ ನಿವಾಸಿಗಳ ಹತ್ತಿರ ಬಿಪಿಎಲ್ ಕಾರ್ಡ್ (BPL Card) ಇರಬೇಕು..

 

ಅಥವಾ ಅವರು ಉಜ್ವಾಲಾ ಯೋಜನೆಯ (Ujwala Scheme) ಅಡಿಯಲ್ಲಿ ಅರ್ಹತೆ ಹೊಂದಿರಬೇಕು. ಅಂಥವರಿಗೆ 500 ರೂಪಾಲಿಗೆ ಸಿಲಿಂಡರ್ ಸಿಗುತ್ತದೆ. ಜನರು ನೆನಪಿಡಬೇಕಾದ ಮುಖ್ಯವಾದ ವಿಚಾರ ಏನು ಎಂದರೆ, ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯುವುದಕ್ಕೆ ಅವರವರ ಬ್ಯಾಂಕ್ ಅಕೌಂಟ್ ಗಳನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿರಬೇಕು. ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದೆ ಹೋದರೆ, ಪ್ರಯೋಜನ ಸಿಗುವುದಿಲ್ಲ..

Gas cylinder rate decreased new update

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories