Ads By Google
Business News

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗುತ್ತೆ 50,000 ಸಬ್ಸಿಡಿ ಸಾಲ! ಸುಮಾರು ಜನಕ್ಕೆ ಈ ಬಗ್ಗೆ ಗೊತ್ತಿಲ್ಲ

₹50,000 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಹಣ ಪಾವತಿ (Loan Re Payment) ಮಾಡಿದರೆ ಇನ್ನು ಹೆಚ್ಚಿನ ಮೊತ್ತವನ್ನು ಪಡೆಯಬಹುದು.

Ads By Google

Loan Scheme : ಹಲವು ಜನರಿಗೆ ಸಣ್ಣದಾಗಿ ತಮ್ಮದೇ ಆದ ಸ್ವಂತ ಉದ್ಯಮ (Own Business) ಅಥವಾ ಸ್ವಂತ ಕೆಲಸ ಶುರು ಮಾಡಬೇಕು ಎಂದು ಆಸೆ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಏನನ್ನು ಮಾಡುವುದಕ್ಕೆ ಆಗಿರುವುದಿಲ್ಲ.

ಅದರಲ್ಲೂ ಕೋವಿಡ್ ಸಮಯದಲ್ಲಿ ಹಲವು ಜನರು ಕೆಲಸ ಕಳೆದುಕೊಂಡ ಬಳಿಕ ಮನೆಯಲ್ಲೇ ಇರುವ ಹಾಗಾಯಿತು. ಅಂಥವರು ಸ್ವಂತ ಉದ್ಯಮ ಶುರು ಮಾಡಬೇಕು ಎಂದು ಕನಸು ಕಂಡರು, ಆದರೆ ಆರ್ಥಿಕ ಸಮಸ್ಯೆ ಅಡ್ಡಿ ಬಂದಿತು.

ರೈತರಿಗಾಗಿ ಹೊಸ ಯೋಜನೆ, ಸಿಗಲಿದೆ 2 ಲಕ್ಷ ಸಾಲ! ಬ್ಯಾಂಕಿನಲ್ಲೇ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ

ಸ್ವಉದ್ಯಮಕ್ಕೆ ಸರ್ಕಾರದಿಂದ ಸಹಾಯ

ಕೇಂದ್ರ ಸರ್ಕಾರವು ಅಂಥ ಜನರಿಗೆ ಸಹಾಯ ಮಾಡುವ ಸಲುವಾಗಿಯೇ ಪಿಎಮ್ ಸ್ವಾನಿಧಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಮೂಲಕ ಸಣ್ಣ ಉದ್ಯಮ ಶುರು ಮಾಡಲು, ಸ್ವಂತ ಕೆಲಸ ಶುರು ಮಾಡಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಮೊದಲಿಗೆ ಸಣ್ಣ ಮೊತ್ತದಿಂದ ಶುರು ಮಾಡಬಹುದಾಗಿದೆ, ಈ ಯೋಜನೆಯಲ್ಲಿ ಎಷ್ಟು ಸಾಲ ಸಿಗುತ್ತದೆ? ಹೇಗೆ ಸಿಗುತ್ತದೆ? ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..

ಪಿಎಮ್ ಸ್ವಾನಿಧಿ ಯೋಜನೆ

ಕೋವಿಡ್ ಸಮಯದ ವೇಳೆ ಜಾರಿಗೆ ಬಂದ ಯೋಜನೆ ಇದಾಗಿದ್ದು ಪಿಎಮ್ ಸ್ವಾನಿಧಿ ಯೋಜನೆಯಲ್ಲಿ ನಿಮ್ಮದೇ ಸ್ವಂತ ಕೆಲಸ ಶುರು ಮಾಡಲು ಮೊದಲಿಗೆ ₹10,000 ರೂಪಾಯಿ ಸಾಲ (Loan) ಸಿಗುತ್ತದೆ.

ಇದನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದರೆ ₹20,000 ರೂಪಾಯಿ ಸಾಲ ಸಿಗುತ್ತದೆ. ಇದನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ₹50,000 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಹಣ ಪಾವತಿ (Loan Re Payment) ಮಾಡಿದರೆ ಇನ್ನು ಹೆಚ್ಚಿನ ಮೊತ್ತವನ್ನು ಪಡೆಯಬಹುದು.

ಬಡವರ ಸ್ವಂತ ಮನೆ ಕನಸು ನನಸಾಗುವ ಕಾಲ ಬಂತು! ಸರ್ಕಾರದಿಂದ ಮನೆ ಭಾಗ್ಯ; ಹೊಸ ಯೋಜನೆ

ಬಡ್ಡಿಗೂ ಸಬ್ಸಿಡಿ ಸಿಗಲಿದೆ

ಪಿಎಮ್ ಸ್ವಾನಿಧಿ ಯೋಜನೆಯಲ್ಲಿ ಸಾಲದ ಮೊತ್ತಕ್ಕೆ ಅತೀ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ. ಈ ಯೋಜನೆಗೆ 7% ಬಡ್ಡಿ ವಿಧಿಸಲಾಗುತ್ತದೆ. ಆದರೆ ನೀವು ಸಮಯಕ್ಕಿಂತ ಮೊದಲೇ ಸಾಲವನ್ನು ತೀರಿಸಿದರೆ ಬಡ್ಡಿ ಮೇಲೆ ಸಹ ಸಬ್ಸಿಡಿ ಸಿಗುತ್ತದೆ.

ಅಂದರೆ ಬಡ್ಡಿ ಮೊತ್ತವನ್ನು ನೀವು ಕಟ್ಟುವ ಅವಶ್ಯಕತೆಯೇ ಇರುವುದಿಲ್ಲ. ಹಾಗೆಯೇ ಬಡ್ಡಿ ಮೇಲೆ ಸಹಾಯಧನ ಕೂಡ ಸಿಗಲಿದ್ದು, ಇದು 10,000 ರೂಪಾಯಿಗಳವರೆಗು ಇರುತ್ತದೆ. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯೋಣ…

ಮನೆ ಬಾಡಿಗೆಗೆ ಕೊಟ್ಟಿರೋ ಮನೆ ಓನರ್‌ಗಳಿಗೆ ಬಿಗ್ ಅಪ್ಡೇಟ್! ಮೊದಲು ಹೊಸ ನಿಯಮ ತಿಳಿಯಿರಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ನಿಮಗೂ ಕೂಡ ಸ್ವಾನಿಧಿ ಯೋಜನೆಯಲ್ಲಿ Loan ಪಡೆಯಲು ಆಸಕ್ತಿ ಇದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಸ್ವಾನಿಧಿ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಪಡೆದು, ಅಲ್ಲಿ ಕೇಳಲಾದ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿ, ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬೇಕು.

ನೀವು ನೀಡಿರುವ ಎಲ್ಲಾ ಮಾಹಿತಿಗಳನ್ನು ಸರ್ಕಾರ ಪರಿಶೀಲಿಸಿ, ಎಲ್ಲವೂ ಸರಿ ಇದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಸ್ವಾನಿಧಿ ಯೋಜನೆಯ ಹಣ ವರ್ಗಾವಣೆ ಆಗುತ್ತದೆ. ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು https://pmsvanidih.mohua.gov.in/ ಈ ಯೋಜನೆಗೆ ಭೇಟಿ ನೀಡಿ..

Get 50,000 subsidy loan for starting own business, Know the Details

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere