Business NewsIndia News

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! ಬೇಗ ಬೇಗ ಅರ್ಜಿ ಸಲ್ಲಿಸಿ

  • ಸರ್ಕಾರದಿಂದ ಉಚಿತ ಗ್ಯಾಸ್ ಸಿಲಿಂಡರ್, ಗ್ಯಾಸ್ ಕನೆಕ್ಷನ್ ಪಡೆಯಿರಿ.
  • ಇನ್ಮುಂದೆ ಸೌದೆ ಒಲೆ ಬೇಡ ಸಿಗುತ್ತೆ ಉಚಿತ ಗ್ಯಾಸ್ ಕನೆಕ್ಷನ್.
  • ಎರಡನೇ ಹಂತದ ಉಜ್ವಲ ಯೋಜನೆ ಪ್ರಾರಂಭ, ಬೇಗ ಬೇಗ ಅರ್ಜಿ ಸಲ್ಲಿಸಿ.

ಭಾರತದಲ್ಲಿ ಬಡವರ್ಗದ ಕುಟುಂಬಗಳಿಗೆ ಅನುಕೂಲಕರ ಆಗಲಿ ಎನ್ನುವ ಕಾರಣಕ್ಕಾಗಿ 2016ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು (Gas Connection) ಒದಗಿಸುವಂತಹ ಯೋಜನೆಯನ್ನು ಪ್ರಾರಂಭಿಸಿ ಈಗಾಗಲೇ ಮೊದಲ ಹಂತದಲ್ಲಿ ಐದು ಕೋಟಿಗೂ ಹೆಚ್ಚಿನ ಮನೆಗಳಿಗೆ ಈ ಯೋಜನೆಯನ್ನು ಪರಿಚಯಿಸಲಾಗಿದೆ.

ಮತ್ತೆ ವಿಸ್ತರಣೆ ಆಗಿರುವಂತಹ ಈ ಯೋಜನೆಗೆ ಯಾವ ರೀತಿಯಲ್ಲಿ ಅಪ್ಲೈ ಮಾಡಿ ಇದರ ಫಲಾನುಭವಿಗಳಾಗಬಹುದು ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! ಬೇಗ ಬೇಗ ಅರ್ಜಿ ಸಲ್ಲಿಸಿ

ಕೇಂದ್ರದಿಂದ ಉಚಿತ ವಿದ್ಯುತ್ ಯೋಜನೆ ಜಾರಿ, ಒಂದು ರೂಪಾಯಿ ಕಟ್ಟುವಂತಿಲ್ಲ

ಉಜ್ವಲ ಯೋಜನೆ 2.0

ಕಟ್ಟಿಗೆ ಒಲೆಯನ್ನು ಬಳಸುವ ಮೂಲಕ ಮನೆಯ ಮಹಿಳೆಯರ ಆರೋಗ್ಯ ಹಾಳಾಗದೆ ಇರಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದ್ದು ಇದನ್ನ ಈಗ ಮತ್ತೆ ಜನರಿಗೆ ಮರು ಪರಿಚಯಿಸಲಾಗಿದ್ದು, ಯಾವ ರೀತಿಯಲ್ಲಿ ಅಪ್ಲೈ ಮಾಡುವುದು ಎನ್ನುವ ಮಾಹಿತಿಯನ್ನು ತಿಳಿಯೋಣ.

ಅರ್ಹತೆಗಳು

* ಅರ್ಜಿ ಹಾಕುವವರು ಭಾರತದ ಪ್ರಜೆಯಾಗಿರಬೇಕು ಹಾಗೂ ಯಾವುದೇ ಬೇರೆ ರೀತಿಯ ಎಲ್‌ಪಿಜಿ ಕನೆಕ್ಷನ್ ಹೊಂದಿರಬಾರದು.
* 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಹಾಕಬಹುದು.
* ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರು ಮಾತ್ರ ಅರ್ಜಿ ಹಾಕಬಹುದು.
* ಪರಿಶಿಷ್ಟ ಜಾತಿ ಅಥವಾ ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು ಅರ್ಜಿ ಹಾಕಬಹುದು.

ವಾಟ್ಸಪ್ ಮೂಲಕ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ನಿಮಿಷದಲ್ಲಿ!

Free Gas Connection Schemeಬೇಕಾಗಿರುವ ಡಾಕ್ಯುಮೆಂಟ್ಸ್ ಗಳು

* ಬಿಪಿಎಲ್ ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ನಂಬರ್
* ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ವಾಸ ಸ್ಥಳದ ದೃಢೀಕರಣ ಪತ್ರ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

* https://pmuy.gov.in/ ಅಧಿಕೃತ ವೆಬ್ಸೈಟ್ ಓಪನ್ ಮಾಡಿದ ನಂತರ ನೀವು apply for new Ujjwal 2.0 ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ.
* ಭಾರತ್ ಗ್ಯಾಸ್, ಇಂಡಿಯನ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಈ ಮೂರು ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳಲ್ಲಿ ಒಬ್ಬರನ್ನ ಆಯ್ಕೆ ಮಾಡಬೇಕು.
* ನಿಮ್ಮ ಹತ್ತಿರದ ಗ್ಯಾಸ್ ಡಿಸ್ಟ್ರಿಬ್ಯೂಟರ್ ಅನ್ನು ಆಯ್ಕೆ ಮಾಡಿದ ನಂತರ ಇರುವಂತಹ ಅರ್ಜಿ ನಮೂನೆಯಲ್ಲಿ ದಾಖಲೆಗಳ ಸಹಿತ ಸರಿಯಾದ ರೀತಿಯಲ್ಲಿ ಅರ್ಜಿಯನ್ನ ತುಂಬಬೇಕಾಗಿದೆ.
* ಕೇಳಲಾಗಿರುವಂತಹ ಪ್ರತಿಯೊಂದು ಡಾಕ್ಯುಮೆಂಟ್ಗಳನ್ನು ಸರಿಯಾದ ರೀತಿಯಲ್ಲಿ ಸ್ಕ್ಯಾನ್ ಮಾಡಿ ಸಬ್ಮಿಟ್ ಮಾಡಿ. ನಂತರ ಅರ್ಜಿಯನ್ನು ಸಲ್ಲಿಸಿ.

ನೀವು ಸಲ್ಲಿಸಿರುವ ಅಂತಹ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿದ ನಂತರ ನೀವು ಅರ್ಹರಾಗಿದ್ದರೆ ನಿಮಗೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಅನ್ನು ನೀಡಲಾಗುತ್ತದೆ.

Get Free Gas Cylinder and Gas Connection by Ujjwala 2.0 Scheme

Our Whatsapp Channel is Live Now 👇

Whatsapp Channel

Related Stories