ಕೇಂದ್ರದಿಂದ ಉಚಿತ ವಿದ್ಯುತ್ ಯೋಜನೆ ಜಾರಿ, ಒಂದು ರೂಪಾಯಿ ಕಟ್ಟುವಂತಿಲ್ಲ
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಸಾಕಷ್ಟು ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಕೂಡ ಒಂದು. ಯೋಜನೆ ದಾಖಲೆ ಮಟ್ಟದಲ್ಲಿ ಯಶಸ್ವಿಯಾಗಿದೆ
- ಸೋಲಾರ್ ಬಳಸಿ ಪಡೆಯಿರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ.
- ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ದಾಖಲೆ ಮಟ್ಟದಲ್ಲಿ ಯಶಸ್ವಿ.
- ಸೌರ ವಿದ್ಯುತ್ ಬಳಕೆಯಲ್ಲಿ ಗುಜರಾತ್ ರಾಜ್ಯ ನಂಬರ್ ಒನ್.
ಕೇಂದ್ರ ಸರ್ಕಾರದಿಂದ ಈಗಾಗಲೇ ಜನಸಾಮಾನ್ಯರಿಗೆ ದಿನನಿತ್ಯದ ಜೀವನ ಸುಲಭವಾಗಿ ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿರುವಂತಹ ಸಾಕಷ್ಟು ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ (Pradhan Mantri Surya Ghar Scheme) ಕೂಡ ಒಂದು.
2024ರ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾದಂತ ಈ ಯೋಜನೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ದೇಶಾದ್ಯಂತ ಹರಡಿದೆ ಎನ್ನಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಈ ಯೋಜನೆ ಮಾಡಿರುವಂತಹ ಸಾಧನೆ ಈಗ ಎಲ್ಲರ ಬಾಯಿ ಮಾತಿನಲ್ಲಿ ಕೇಳಿಬರುತ್ತಿದೆ.
ವಾಟ್ಸಪ್ ಮೂಲಕ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ನಿಮಿಷದಲ್ಲಿ!
![ಕೇಂದ್ರದಿಂದ ಉಚಿತ ವಿದ್ಯುತ್ ಯೋಜನೆ ಜಾರಿ, ಒಂದು ರೂಪಾಯಿ ಕಟ್ಟುವಂತಿಲ್ಲ - kannada news ಕೇಂದ್ರದಿಂದ ಉಚಿತ ವಿದ್ಯುತ್ ಯೋಜನೆ ಜಾರಿ, ಒಂದು ರೂಪಾಯಿ ಕಟ್ಟುವಂತಿಲ್ಲ](https://kannadanews.today/wp-content/uploads/2025/01/get-free-solar-electricity-with-pradhan-mantri-surya-ghar-scheme.jpg.webp)
ಪ್ರಧಾನಮಂತ್ರಿ ಸೂರ್ಯಘರ್ ಉಚಿತ ಎಲೆಕ್ಟ್ರಿಸಿಟಿ ಯೋಜನೆ
ಈ ಯೋಜನೆಯ ಮೂಲಕ ನೀಡುವಂತಹ ಸೋಲಾರ್ (Solar Power) ಇನ್ಸ್ಟಾಲೇಶನ್ ಯಾವ ಮಟ್ಟದಲ್ಲಿ ವ್ಯಾಪಕವಾಗಿ ಹರಡಿದೆ ಎಂದರೆ ಒಂದು ದಶಕದಲ್ಲಿ ಆಗಿರುವಂತಹ ಇನ್ಸ್ಟಾಲೇಶನ್ ಈ ಯೋಜನೆ ಪ್ರಾರಂಭ ಆದ ನಂತರ ಒಂದೇ ವರ್ಷದಲ್ಲಿ ಆಗಿಬಿಟ್ಟಿದೆ ಅಂತೆ.
6.85 ಲಕ್ಷಕ್ಕೂ ಹೆಚ್ಚಿನ ಮನೆಯ ಸೂರಿನ ಮೇಲೆ ಸೋಲಾರ್ ಫಲಕಗಳನ್ನು (Solar Pannel) ಈ ಯೋಜನೆ ಅಡಿಯಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ ಗುಜರಾತ್ ರಾಜ್ಯದಲ್ಲಿ ಹೆಚ್ಚಾಗಿ ಇವುಗಳನ್ನು ಅಳವಡಿಸಲಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಕೇರಳದಲ್ಲಿ ಇದನ್ನು ಹೆಚ್ಚಾಗಿ ಅಳವಡಿಸಲಾಗಿದೆ.
ಮೂರರಿಂದ ಐದು ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಫಲಕಗಳು 77% ಇನ್ಸ್ಟಾಲ್ ಆಗಿವೆ ಹಾಗೂ ಇವುಗಳು 300 ಯೂನಿಟ್ ಗಿಂತಲು ಹೆಚ್ಚಿನ ವಿದ್ಯುತ್ ಒದಗಿಸುತ್ತವೆ. 14% ಸೋಲಾರ್ ಗಳು 5 ಕಿ.ವ್ಯಾ. ಗಿಂತ ಸಾಮರ್ಥ್ಯದ್ದಾಗಿವೆ.
ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯ (Free Electricity) ಅಡಿಯಲ್ಲಿ ಮನೆಯ ಮಾಳಿಗೆಗಳ ಮೇಲೆ ಸೋಲಾರ್ಫಲಕಗಳನ್ನು ಸ್ಥಾಪಿಸುವ ಮೂಲಕ ಅದರಿಂದ ವಿದ್ಯುತ್ ಉತ್ಪಾದನೆ ಮಾಡುವಂತಹ ಪ್ರಯತ್ನಕ್ಕೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
ಅರ್ಧದಷ್ಟು ಖರ್ಚನ್ನು ಸರ್ಕಾರವೇ ಧರಿಸುವುದರಿಂದ ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಸಬ್ಸಿಡಿ ರೂಪದಲ್ಲಿ ಸೋಲಾರ್ ಫಲಕವನ್ನು ಸ್ಥಾಪಿಸುವಾಗ 10 ಸಾವಿರ ದಿಂದ 78,000 ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಈ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಮನೆಯ ಮಾಳಿಗೆಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಕೆ ಮಾಡುವುದಕ್ಕೆ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಪಟ್ಟಂತಹ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ವೆಂಡರ್ ಗಳು ನಿಮ್ಮ ಮನೆಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸುತ್ತಾರೆ.
ಇದಾದ ನಂತರವೇ ನಿಮಗೆ ಸಬ್ಸಿಡಿ ಸಿಗಲಿದೆ. www.pmsuryaghar.gov.in ಇದು ನೀವು ಅರ್ಜಿ ಸಲ್ಲಿಸಬೇಕಾಗಿರುವಂತಹ ಅಧಿಕೃತ ಪೋರ್ಟಲ್ ನ ಲಿಂಕ್ ಆಗಿರುತ್ತದೆ.
Get Free Solar Electricity with Pradhan Mantri Surya Ghar Scheme