ವಾಟ್ಸಪ್ ಮೂಲಕ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ ನಿಮಿಷದಲ್ಲಿ!
ವಾಟ್ಸಪ್ ಮೂಲಕ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಇನ್ಸೂರೆನ್ಸ್ ಪಾಲಿಸಿ ಗಳಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- My Gov ನಿಂದ ಹೊಸ ಅಪ್ಡೇಟ್ ಜಾರಿಗೆ.
- ವಾಟ್ಸಪ್ ನಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಡೌನ್ಲೋಡ್ ಸಾಧ್ಯ.
- ಇನ್ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹುಡುಕಾಡುವ ಸಮಸ್ಯೆ ಇಲ್ಲ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ (PAN Card and Aadhaar Card) ಭಾರತೀಯ ಸರ್ಕಾರ ಪರಿಚಯಿಸಿರುವಂತಹ ಅತ್ಯಂತ ಪ್ರಮುಖ ದಾಖಲೆ ಪತ್ರಗಳಾಗಿರುತ್ತವೆ. ಯಾವುದೇ ರೀತಿಯ ಸರ್ಕಾರಿ ಕೆಲಸಗಳಲ್ಲಿ ಇವೆರಡು ದಾಖಲೆಗಳು ಅಗತ್ಯವಾಗಿ ಬೇಕಾಗಿರುತ್ತದೆ
ಹೀಗಾಗಿ ಇವುಗಳನ್ನು ಜೋಪಾನವಾಗಿ ಕಾಪಾಡಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಈ ವಿಚಾರದಲ್ಲಿ ಈಗ ಪ್ರತಿಯೊಬ್ಬರು ಕೂಡ ಬಳಸುವಂತಹ ಮೆಸೇಜಿಂಗ್ ಆಗಿರುವಂತಹ ವಾಟ್ಸಪ್ ಒಂದು ಹೊಸ ಅಪ್ಡೇಟ್ (Whatsapp Update) ನೀಡಿದೆ ಎಂದು ಹೇಳಬಹುದಾಗಿದೆ.
ವಾಟ್ಸಪ್ ಇನ್ಮುಂದೆ ಕೇವಲ ವಿಡಿಯೋ ಹಾಗೂ ಫೋಟೋಗಳಂತಹ ಮೆಸೇಜ್ ಗಳನ್ನು ಕಳಿಸುವುದಕ್ಕೆ ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಾಗಿ ನೀವು ಬಳಸುವಂತಹ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ಹೇಳಬಹುದಾಗಿದೆ.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ
ನೀವು ವಾಟ್ಸಪ್ ಮೂಲಕ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಇನ್ಸೂರೆನ್ಸ್ ಪಾಲಿಸಿ ಗಳಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
My Gov ತನ್ನ ವಾಟ್ಸಪ್ ಚಾಟ್ ಬಾಟ್ ನಲ್ಲಿ ಈ ಸರ್ವಿಸ್ ಅನ್ನು ನೀಡುವುದಕ್ಕೆ ಪ್ರಾರಂಭ ಮಾಡಿದೆ. ಡಿಜಿ ಲಾಕರ್ (DigiLocker) ಅಕೌಂಟ್ ಕ್ರಿಯೇಟ್ ಮಾಡುವುದು ಸೇರಿದಂತೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳಂತಹ ಪ್ರಮುಖ ದಾಖಲೆ ಪತ್ರಗಳನ್ನು ಕೂಡ ನೀವು ಈ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇಲ್ಲಿ ಸಹಾಯವಾಣಿ ನಂಬರ್ ಅನ್ನು ನೀಡಲಾಗಿದ್ದು, ಈ ಮೂಲಕ ನೀವು ನಿಮ್ಮ ಡಿಜಿ ಲಾಕರ್ ಅಕೌಂಟ್ಗೆ ಸೈನ್ ಇನ್ ಆಗುವ ಮೂಲಕ ವಾಟ್ಸಪ್ ನಲ್ಲಿ ನಿಮ್ಮ ಪ್ರತಿಯೊಂದು ದಾಖಲೆ ಪತ್ರಗಳನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ.
ಕ್ಯುಆರ್ ಕೋಡ್ ಹೊಂದಿರೋ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್
ವಾಟ್ಸಪ್ ಮೂಲಕ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
+91-9013151515 ಇದನ್ನ ನಿಮ್ಮ ವಾಟ್ಸಪ್ ನಲ್ಲಿ MyGov Help Desk ಹೆಸರಿನಿಂದ ಮೊದಲು ಸೇವ್ ಮಾಡಿಕೊಳ್ಳಬೇಕಾಗಿರುತ್ತದೆ. ಇದಾದ ನಂತರ ವಾಟ್ಸಪ್ ಚಾಟ್ ಬಾಟ್ ನಲ್ಲಿ ನಮಸ್ತೆ ಅಥವಾ ಹಾಯ್ ಎಂದು ಟೈಪ್ ಮಾಡಿ ಸೆಂಡ್ ಮಾಡಬೇಕು.
ಅಲ್ಲಿ ಕಾಣಿಸಿಕೊಳ್ಳುವಂತಹ ಆಪ್ಷನ್ಗಳಲ್ಲಿ ಡಿಜಿ ಲಾಕರ್ ಅನ್ನು ಆಯ್ಕೆ ಮಾಡಿ ನಂತರ ಅಕೌಂಟ್ ಇದೆಯಾ ಎಂದು ಕಾಣಿಸಿಕೊಂಡಾಗ ಹೌದು ಎಂದು ಆಯ್ಕೆ ಮಾಡಬೇಕು.
ಒಂದು ದಿನ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಲೇಟ್ ಆದ್ರೆ, ಕ್ರೆಡಿಟ್ ಸ್ಕೋರ್ ಎಷ್ಟು ಕಡಿಮೆ ಆಗುತ್ತೆ?
ಒಂದು ವೇಳೆ ಡಿಜಿ ಲಾಕರ್ ಖಾತೆ ಇಲ್ಲವಾದಲ್ಲಿ ಖಾತೆಯನ್ನು ರಚಿಸಬಹುದಾಗಿದೆ. ಡಿಜಿ ಲಾಕರ್ ಖಾತೆಯನ್ನು ಲಿಂಕ್ ಮಾಡೋದಕ್ಕಾಗಿ 12 ನಂಬರ್ ಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ ಬರುವಂತಹ ಓ ಟಿ ಪಿ ಯನ್ನು ಕೂಡ ಸಬ್ಮಿಟ್ ಮಾಡಬೇಕಾಗಿರುತ್ತದೆ.
ನಿಮಗೆ ಯಾವುದೇ ರೀತಿಯ ದಾಖಲೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಕಳುಹಿಸಲಾಗಿರುವಂತಹ ಡಾಕ್ಯುಮೆಂಟ್ ನಂಬರ್ ಅನ್ನು ಟೈಪ್ ಮಾಡಬೇಕಾಗಿರುತ್ತದೆ. ಅದಾದ ನಂತರ ನಿಮಗೆ ಡಾಕ್ಯುಮೆಂಟ್ ಪಿಡಿಎಫ್ ಫೈಲ್ ನಲ್ಲಿ ಡೌನ್ಲೋಡ್ ಗೆ ಸಿದ್ಧವಾಗಿರುತ್ತದೆ.
Download PAN Card and Aadhaar Card via WhatsApp in Minutes