4 ದಿನಗಳಲ್ಲಿ ಚಿನ್ನದ ಬೆಲೆ 2000 ಹೆಚ್ಚಳ, ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ದರಗಳ ವಿವರ
ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ, ಬೆಳ್ಳಿಯ ಬೆಲೆಯಲ್ಲಿ ಸಣ್ಣ ಕುಸಿತ. ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ನವೀನ ದರಗಳು ಮತ್ತು ಮಾರುಕಟ್ಟೆಯ ಪ್ರಸ್ತುತ ಸ್ಥಿತಿಗತಿಯ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ.
- ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ.
- ಬೆಳ್ಳಿಯ ಬೆಲೆಯಲ್ಲಿ ಸಣ್ಣ ಕುಸಿತ, ಬಂಗಾರದಲ್ಲಿ ಹೂಡಿಕೆ ಹೆಚ್ಚಳ.
- ಇಂದಿನ ನವೀನ ದರಗಳು ಮತ್ತು ಮಾರುಕಟ್ಟೆಯ ಪ್ರಸ್ತುತ ಸ್ಥಿತಿ
Gold Price Today : ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಏರಿಕೆಯು ಕಂಡುಬಂದಿದೆ. ದೆಹಲಿಯಲ್ಲಿ 10 ಗ್ರಾಮ್‌ಗಳ 24 ಕ್ಯಾರೆಟ್ ಚಿನ್ನದ ಬೆಲೆ ರೂ.10 ಹೆಚ್ಚಳವಾಗಿ ರೂ.88,200ಕ್ಕೆ ತಲುಪಿದೆ. 22 ಕ್ಯಾರೆಟ್ ಬಂಗಾರವು ರೂ.80,860ಕ್ಕೆ ಏರಿಕೆಯಾಗಿದೆ. ಇತ್ತೀಚಿನ ನಾಲ್ಕು ದಿನಗಳಲ್ಲಿ ಬಂಗಾರದ ದರವು (Gold Rate) ಸುಮಾರು ರೂ.2000 ಹೆಚ್ಚಾಗಿದೆ.
ಇದೇ ಸಮಯದಲ್ಲಿ, ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ರೂ.1,08,000 ಇದ್ದು, ದೆಹಲಿಯಲ್ಲಿ ಅದು ರೂ.1,00,500ಕ್ಕೆ ತಲುಪಿದೆ. ಬೆಳ್ಳಿಯ ಬೆಲೆ ಸ್ಥಿರವಾಗಿರುವುದು ಮಾರುಕಟ್ಟೆಯ ಸ್ಥಿರತೆಗೆ ಸೂಚನೆ ನೀಡುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಬಂಗಾರವು ಸುರಕ್ಷಿತ ಹೂಡಿಕೆಯ ಆಯ್ಕೆ ಆಗಿರುವುದರಿಂದ, ಹೂಡಿಕೆದಾರರು ಬಂಗಾರವನ್ನು ಹೆಚ್ಚು ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ರೈತರಿಗೆ 5 ಲಕ್ಷದ ಕ್ರೆಡಿಟ್ ಕಾರ್ಡ್ ಸಿಗಲಿದೆ! ಎಟಿಎಂನಲ್ಲೆ ಹಣ ಡ್ರಾ ಮಾಡಬಹುದು
ತಮಿಳುನಾಡಿನ ಚೆನ್ನೈ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಮಹಾರಾಷ್ಟ್ರದ ಮುಂಬೈ ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಸುಮಾರು ಒಂದೇ ರೀತಿಯ ಬೆಲೆ ಪಟ್ಟಿ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ (Bengaluru Gold Price) ಸಹ ಇದೇ ರೀತಿಯ ದರಗಳು ದಾಖಲಾಗಿವೆ.
ಇದರೊಂದಿಗೆ, ಟೆಕ್ಸಸ್‌ನ ತೈಲ ಬೆಲೆಯ ಏರಿಕೆಯೂ ಬಂಗಾರದ ಬೆಲೆಯಲ್ಲಿ ಪ್ರಭಾವ ಬೀರುತ್ತಿದ್ದು, ರೂಪಾಯಿ ಮೌಲ್ಯದ ಕುಸಿತದಿಂದ ಇಂತಹ ಬೆಳವಣಿಗೆಗಳು ನಡೆದಿದೆ.
ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ (22, 24 ಕ್ಯಾರೆಟ್)
ಬೆಂಗಳೂರು: ರೂ. ₹80,710, ರೂ. ₹88,050
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ (Bengaluru Gold Rate) 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,805 , 22 ಕ್ಯಾರೆಟ್ ಚಿನ್ನಕ್ಕೆ ₹8,071 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹6,604 ಮುಂದುವರೆದಿದೆ.
ಚೆನ್ನೈ: ರೂ.80710, ರೂ.88050
ಮುಂಬೈ: ರೂ.80710, ರೂ.88050
ದೆಹಲಿ: ರೂ. 80860, ರೂ.88200
ಕೋಲ್ಕತ್ತಾ: ರೂ. 80710, ರೂ.88050
ಹೈದರಾಬಾದ್: ರೂ. 80710, ರೂ. 88050
ಚಿನ್ನದ ದರಗಳನ್ನು ಪರಿಶೀಲಿಸುವುದರ ಜೊತೆಗೆ, ನೀವು ತಯಾರಿಕೆ ಶುಲ್ಕಗಳನ್ನು ಸಹ ನೋಡಬೇಕು. ಅಂತಿಮ ಮಾರಾಟ ಬೆಲೆಯನ್ನು ತಿಳಿದುಕೊಳ್ಳಬೇಕು. ಮೊದಲು ಆಭರಣದ ಬೆಲೆಗೆ ಸೇರಿಸಲಾಗುವ ಶುಲ್ಕ, ಮೇಕಿಂಗ್ ಶುಲ್ಕ ಮುಂತಾದ ವಿಚಾರಗಳು ಕೂಡ ದರಗಳಿಗೆ ಸೇರುತ್ತವೆ. ಆಭರಣದ ತಯಾರಿಕೆ ಶುಲ್ಕಗಳು ಗ್ರಾಹಕರು ಖರೀದಿಸುವ ಆಭರಣದ ಪ್ರಕಾರವನ್ನು (Gold and Silver) ಅವಲಂಬಿಸಿ ಬದಲಾಗಬಹುದು.
Gold and Silver Prices Update 21-2-2025
Our Whatsapp Channel is Live Now 👇