ಚಿನ್ನದ ಬೆಲೆ 90,000 ಗಡಿ ದಾಟಿದ್ದು, ಮತ್ತಷ್ಟು ಏರಿಕೆ ಆಗುವ ಸಾಧ್ಯತೆ!
Gold Price Today : ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ, ಇಲ್ಲಿದೆ ಮಾಹಿತಿ
- 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ₹83,110 ಆಗಿದೆ.
- ಬೆಳ್ಳಿಯೂ ಏರಿಕೆಯ ಹಾದಿಯಲ್ಲಿದ್ದು, 1 ಕೆಜಿ ಬೆಳ್ಳಿ ₹1,05,200 ತಲುಪಿದೆ
- ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಗರಿಷ್ಠ ಬೆಲೆ ದಾಖಲೆ.
Gold Price Today : ಚಿನ್ನದ ಬೆಲೆ (Gold Price) ಮತ್ತೆ ಹೊಸ ದಾಖಲೆ ಬರೆದಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ಚಿನ್ನ 10 ಗ್ರಾಂ ₹90,670 ತಲುಪಿದ್ದು, ಬಂಗಾರದ ಹೂಡಿಕೆದಾರರಿಗೆ ಒಂದು ಬಗೆಯ ಶಾಕ್ ನೀಡಿದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ದರ ನಿರಂತರ ಏರಿಕೆಯನ್ನು ಕಂಡುಬಂದಿದ್ದು, ಇಂದು ಮತ್ತೆ ₹90,000 ಗಡಿ ದಾಟಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಬೆಲೆ ಕುಸಿತದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಬೆಳ್ಳಿ (Silver Price) ದರವೂ ಏರಿಕೆ ಕಂಡು 1 ಕೆಜಿ ಬೆಳ್ಳಿಯು ₹1,05,200 ತಲುಪಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಬೆಂಗಳೂರು: 24 ಕ್ಯಾರೆಟ್ ₹90,670, 22 ಕ್ಯಾರೆಟ್ ₹83,110
ದೆಹಲಿ: 24 ಕ್ಯಾರೆಟ್ ₹90,820, 22 ಕ್ಯಾರೆಟ್ ₹83,260
ಚೆನ್ನೈ: 24 ಕ್ಯಾರೆಟ್ ₹90,670, 22 ಕ್ಯಾರೆಟ್ ₹83,110
ಕೋಲ್ಕತ್ತಾ: 24 ಕ್ಯಾರೆಟ್ ₹90,670, 22 ಕ್ಯಾರೆಟ್ ₹83,110
ಹೈದರಾಬಾದ್: 24 ಕ್ಯಾರೆಟ್ ₹90,670, 22 ಕ್ಯಾರೆಟ್ ₹83,110
ವಿಶೇಷವಾಗಿ, ಕಳೆದ ವಾರದಿಂದ ನಿರಂತರ ಏರಿಕೆ ಕಂಡುಬಂದ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಹೇಗಿರಲಿದೆ ಎಂಬುದರ ಬಗ್ಗೆ ತಜ್ಞರು ಸುಳಿವು ನೀಡುತ್ತಿಲ್ಲ. ಹೂಡಿಕೆದಾರರು ತಾಳ್ಮೆಯಿಂದ ಮುಂದಿನ ದರ ಚಲನೆ ಗಮನಿಸುವುದು ಒಳಿತು.