ಖುಷಿ ಸುದ್ದಿ, ಚಿನ್ನದ ಒಡವೆ ಖರೀದಿ ಪ್ಲಾನ್ ಮಾಡಿ, ಚಿನ್ನ ಬೆಳ್ಳಿ ಬೆಲೆ ಭಾರೀ ಕುಸಿತ! - Gold Price Today
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಗಣನೀಯವಾಗಿ ಕುಸಿತ, ಕಳೆದ ಕೆಲವು ದಿನಗಳ ಏರಿಕೆ ನಂತರ ಮಂಗಳವಾರ ತಗ್ಗಿದ್ದು ಮಹಿಳಾ ಗ್ರಾಹಕರಿಗೆ ಖುಷಿ ತಂದಿದೆ.

- ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ
- 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ದರ ಕುಸಿತ
- ಮಹಿಳಾ ಖರೀದಿದಾರರಿಗೆ ಚಿನ್ನದ ಖರೀದಿಗೆ ಖುಷಿಯ ಕ್ಷಣ
ಬೆಂಗಳೂರಿನಲ್ಲಿ (Bengaluru Gold Rate) ಇತ್ತೀಚಿನ ದಿನಗಳಲ್ಲಿ ಏರಿಕೆಯನ್ನು ಕಂಡಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಹಠಾತ್ ಇಳಿಕೆ ಕಂಡಿದೆ. ವಿಶೇಷವಾಗಿ 24 ಕ್ಯಾರೆಟ್ ಚಿನ್ನದ ದರ ಕುಸಿತ ಕಂಡಿದ್ದು, ಮಹಿಳಾ ಗ್ರಾಹಕರಿಗೆ ಇದು ಸಂತೋಷದ ಸುದ್ದಿ.
24 ಕ್ಯಾರೆಟ್ ಬಂಗಾರದ ಪ್ರತಿ ಗ್ರಾಂ ಬೆಲೆ ಇಂದು ₹10,140ಕ್ಕೆ ತಲುಪಿದ್ದು, ನಿನ್ನೆಗಿಂತ ₹88 ಇಳಿಕೆಯಾಗಿದೆ. 10 ಗ್ರಾಂ ದರ ₹1,01,400 ಆಗಿದೆ. 22 ಕ್ಯಾರೆಟ್ ಬಂಗಾರದ ಪ್ರತಿ ಗ್ರಾಂ ದರ ₹9,295ಕ್ಕೆ ಇಳಿಕೆಯಾಗಿ, ನಿನ್ನೆಗಿಂತ ₹80 ಕಡಿಮೆಯಾಗಿದೆ.
ಇದನ್ನೂ ಓದಿ: 1 ರೂಪಾಯಿ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ! ಉಚಿತ ಸೋಲಾರ್ ಯೋಜನೆಗೆ ಅರ್ಜಿ ಹಾಕಿ
ವಿಶೇಷವಾಗಿ, ಬೆಳ್ಳಿ ಬೆಲೆಯಲ್ಲಿಯೂ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿಯ (Bengaluru Silver Price) ಪ್ರತಿ ಕಿಲೋ ದರ ₹1,15,000 ಆಗಿದ್ದು, ಕೆಲವು ರಾಜ್ಯಗಳಲ್ಲಿ ಇದು ₹1,25,000 ತಲುಪಿದೆ.
HDFC Securitiesನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧೀ ಅವರ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಸಕಾರಾತ್ಮಕ ವಾತಾವರಣ ಮತ್ತು ಸುರಕ್ಷಿತ ಹೂಡಿಕೆಗೆ ಬೇಡಿಕೆ ಕಡಿಮೆಯಾಗಿರುವುದು ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ. ರಷ್ಯಾ–ಉಕ್ರೇನ್ ಸಂಘರ್ಷದ ಉದ್ವಿಗ್ನತೆ ಕಡಿಮೆಯಾಗಿರುವುದು ಕೂಡ ಬೆಲೆಯ ಮೇಲೆ ಪ್ರಭಾವ ಬೀರಿದೆ.
ಇದನ್ನೂ ಓದಿ: ಐಫೋನ್ 17 ಬಿಡುಗಡೆ ಮೊದಲೇ ಐಫೋನ್ 16 ಪ್ಲಸ್ ಬೆಲೆ ಅರ್ಧಕ್ಕೆ ಅರ್ಧದಷ್ಟು ಕುಸಿತ
ಇಂದು ಬೆಂಗಳೂರಿನ ಚಿನ್ನದ ಬೆಲೆ ಮಾಹಿತಿ
24 ಕ್ಯಾರೆಟ್ ಚಿನ್ನದ ಬೆಲೆ
| Gram | Today | Yesterday | Change |
|---|---|---|---|
| 1 | ₹10,140 | ₹10,228 | – ₹88 |
| 8 | ₹81,120 | ₹81,824 | – ₹704 |
| 10 | ₹1,01,400 | ₹1,02,280 | – ₹880 |
| 100 | ₹10,14,000 | ₹10,22,800 | – ₹8,800 |
22 ಕ್ಯಾರೆಟ್ ಚಿನ್ನದ ಬೆಲೆ
| Gram | Today | Yesterday | Change |
|---|---|---|---|
| 1 | ₹9,295 | ₹9,375 | – ₹80 |
| 8 | ₹74,360 | ₹75,000 | – ₹640 |
| 10 | ₹92,950 | ₹93,750 | – ₹800 |
| 100 | ₹9,29,500 | ₹9,37,500 | – ₹8,000 |
Gold Prices Huge Drop in Bengaluru




