Gold Price: ಚಿನ್ನದ ಬೆಲೆ ಮತ್ತೆ ಯೂ-ಟರ್ನ್, ಇಳಿಕೆಯಾಗಿದ್ದ ಚಿನ್ನದ ದರ ಮತ್ತೆ ಏಕಾಏಕಿ ಹೆಚ್ಚಳ
Gold Price Today: ಅಂತರರಾಷ್ಟ್ರೀಯ ಬೆಳವಣಿಗೆಗಳು, ಡಾಲರ್ ಬಲವರ್ಧನೆ ಮತ್ತು ಹೂಡಿಕೆ ಬೇಡಿಕೆಯ ಪರಿಣಾಮವಾಗಿ ಬಂಗಾರ-ಬೆಳ್ಳಿ ದರಗಳು ಮತ್ತೆ ಏರಿಕೆ ಕಂಡಿವೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ದಾಖಲಾತಿ ಮಟ್ಟ ತಲುಪಿದೆ.
- ಬೆಂಗಳೂರು ಚಿನ್ನದ ದರ, 24 ಕ್ಯಾರಟ್ 1,59,450
- ಚಿನ್ನದ ಬೆಲೆ ಏರಿಕೆ, ಹೂಡಿಕೆದಾರರಿಗೆ ಆತಂಕ
- ವಿದೇಶದಿಂದ ಬಂಗಾರ ತರಲು ಹೊಸ ಮಿತಿ
Gold Price Today: ಕೆಲ ದಿನಗಳ ಹಿಂದೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದರಿಂದ ಜನರು “ಇಗಾದ್ರೂ ಖರೀದಿ ಮಾಡೋಣ” ಅಂತಾ ಯೋಚಿಸುತ್ತಿದ್ದರು. ಆದರೆ ಮಾರುಕಟ್ಟೆ ಮತ್ತೆ ಯೂ-ಟರ್ನ್ ತೆಗೆದುಕೊಂಡಿದೆ. ಗುರುವಾರದಿಂದಲೇ ದರಗಳು ಹಂತ ಹಂತವಾಗಿ ಏರಿಕೆ ಕಾಣಿಸಿಕೊಂಡಿವೆ.
ಹೂಡಿಕೆದಾರರು ಸುರಕ್ಷಿತ ಆಸ್ತಿ ಎಂದು ಬಂಗಾರಕ್ಕೆ ಮೊರೆ ಹೋಗುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ, ಡಾಲರ್ ಬಲವರ್ಧನೆ ಮತ್ತು ವಾಣಿಜ್ಯ ಒಪ್ಪಂದಗಳ ಪರಿಣಾಮ ಚಿನ್ನಕ್ಕೆ ಮತ್ತೆ ಬೇಡಿಕೆ ಹೆಚ್ಚಿಸಿದೆ. ಇದರ ನೇರ ಪರಿಣಾಮ ಭಾರತದಲ್ಲೂ ಕಂಡುಬರುತ್ತಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ
ರಾಜಧಾನಿ ಬೆಂಗಳೂರಿನಲ್ಲಿ ದರ ಏರಿಕೆಯ ಸ್ಪಷ್ಟ ಪರಿಣಾಮ ಗೋಚರಿಸಿದೆ.
- 10 ಗ್ರಾಂ 24 ಕ್ಯಾರಟ್ ಶುದ್ಧ ಬಂಗಾರ – ₹1,59,450
- 22 ಕ್ಯಾರಟ್ ಬಂಗಾರ – ₹1,46,160
- ನಿನ್ನೆಗಿಂತ ₹10-₹20 ಏರಿಕೆ ದಾಖಲು
ಚಿನ್ನದ ಅಂಗಡಿಗಳಿಗೆ ಬಂದ ಗ್ರಾಹಕರು “ಇನ್ನೂ ಏರ್ತಾ ಇದೆ” ಅನ್ನೋ ಭಯದಲ್ಲಿ ತಕ್ಷಣ ಖರೀದಿ ಮಾಡುವ ಪರಿಸ್ಥಿತಿ ಕಂಡುಬಂದಿದೆ.

ಇತರೆ ನಗರಗಳಲ್ಲಿ ಚಿನ್ನದ ದರ ಹೇಗಿದೆ?
ಹೈದರಾಬಾದ್‌ನಲ್ಲಿ 24 ಕ್ಯಾರಟ್ ಬಂಗಾರ ₹1,59,450 ಹಾಗೂ 22 ಕ್ಯಾರಟ್ ₹1,46,160 ದಲ್ಲಿ ಮಾರಾಟವಾಗುತ್ತಿದೆ. ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲೂ ಇದೇ ದರ ಮುಂದುವರಿದಿದೆ.
ಚೆನ್ನೈನಲ್ಲಿ ದರ ಇನ್ನೂ ಹೆಚ್ಚು. 24 ಕ್ಯಾರಟ್ ₹1,62,570 ತಲುಪಿದ್ದು, 22 ಕ್ಯಾರಟ್ ₹1,49,010 ಆಗಿದೆ.
ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರಟ್ ₹1,59,600 ಮತ್ತು 22 ಕ್ಯಾರಟ್ ₹1,46,310 ಇದೆ.
ಬೆಳ್ಳಿ ದರವೂ ಕಡಿಮೆ ಇಲ್ಲ
ಬಂಗಾರದಷ್ಟೇ ಬೆಳ್ಳಿಗೂ ಬೇಡಿಕೆ ಹೆಚ್ಚಿದೆ.
ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಎಲ್ಲೆಡೆ ಕೇಜಿಗೆ ₹3,20,100 ದರ ಮುಂದುವರಿದಿದೆ. ಬೆಳ್ಳಿಯೂ ಹೂಡಿಕೆ ಆಯ್ಕೆಯಾಗಿ ಜನರಲ್ಲಿ ಜನಪ್ರಿಯವಾಗುತ್ತಿದೆ.
ಕರ್ನಾಟಕ – ಭಾರತದ ಬಂಗಾರದ ರಾಜಧಾನಿ
ಬಂಗಾರ ಉತ್ಪಾದನೆ ವಿಚಾರಕ್ಕೆ ಬಂದರೆ ಕರ್ನಾಟಕ ದೇಶದಲ್ಲಿ ನಂಬರ್ ಒನ್.
ರಾಯಚೂರು ಜಿಲ್ಲೆಯ ಹಟ್ಟಿ ಗೋಲ್ಡ್ ಮೈನ್ಸ್ ದೇಶದ ಅತಿ ಹಳೆಯ ಮತ್ತು ಸಕ್ರಿಯ ಗಣಿಗಳಲ್ಲೊಂದು. ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) ಕೂಡ ಇತಿಹಾಸ ಪ್ರಸಿದ್ಧ. ದೇಶದಲ್ಲಿ ಗಣಿಗಾರಿಕೆಯಿಂದ ಸಿಗುವ ಸುಮಾರು 99% ಬಂಗಾರ ಕರ್ನಾಟಕದಿಂದಲೇ ಬರುತ್ತದೆ.
ಆದರೆ ಸಂಗ್ರಹದ ದೃಷ್ಟಿಯಿಂದ ನೋಡಿದರೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸಾವಿರಾರು ಟನ್ ಬಂಗಾರದ ಭಂಡಾರ ಇರುವುದಾಗಿ ಅಧ್ಯಯನಗಳು ಹೇಳುತ್ತವೆ.

ವಿದೇಶದಿಂದ ಬಂಗಾರ ತರುವವರಿಗೆ ಹೊಸ ನಿಯಮಗಳು
ವಿದೇಶಗಳಲ್ಲಿ ಕಡಿಮೆ ದರಕ್ಕೆ ಬಂಗಾರ ಸಿಗುತ್ತದೆ ಎಂದು ಅನೇಕರು ಖರೀದಿ ಮಾಡಿ ತರ್ತಿದ್ದಾರೆ. ಆದರೆ ಈಗ ಸರ್ಕಾರ ಕಸ್ಟಮ್ಸ್ ನಿಯಮಗಳನ್ನು ಬದಲಿಸಿದೆ.
- ₹75,000 ಮೌಲ್ಯದವರೆಗೆ ಡ್ಯೂಟಿ ಫ್ರೀ
- ಮಹಿಳೆಯರು – 40 ಗ್ರಾಂವರೆಗೆ
- ಪುರುಷರು – 20 ಗ್ರಾಂವರೆಗೆ
- ಮಿತಿ ಮೀರುತ್ತಿದ್ದರೆ ಕಸ್ಟಮ್ಸ್ ಶುಲ್ಕ ಕಡ್ಡಾಯ
- ಹೊಸ ನಿಯಮಗಳು ಫೆಬ್ರವರಿ 02, 2026ರಿಂದ ಜಾರಿ
ಪ್ರಯಾಣಕ್ಕೂ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅನಿವಾರ್ಯ.
ಬಂಗಾರ ದರಗಳ ಈ ನಿರಂತರ ಏರಿಕೆ ಸಾಮಾನ್ಯ ಕುಟುಂಬಗಳ ಮೇಲೆ ಭಾರ ಹಾಕುತ್ತಿದೆ. ಮದುವೆ, ಹೂಡಿಕೆ ಅಥವಾ ಸಂಗ್ರಹ – ಯಾವುದಕ್ಕೂ ಈಗ ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ವಿಶೇಷವಾಗಿ ಬೆಂಗಳೂರು ಮಾರುಕಟ್ಟೆಯಲ್ಲಿ ದರಗಳು ದಾಖಲಾತಿ ಮಟ್ಟ ತಲುಪಿರುವುದು ಗಮನಾರ್ಹ.
ಖರೀದಿ ಮಾಡುವ ಮೊದಲು ಮಾರುಕಟ್ಟೆ ಟ್ರೆಂಡ್ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.



