Gold Price Today: ಚಿನ್ನದ ಬೆಲೆ ಲೆಕ್ಕಾಚಾರ ತಲೆಕೆಳಗೆ! 2 ಲಕ್ಷದ ಗಡಿ ತಲುಪಿದ ಬಂಗಾರದ ದರ
Gold Price Today: ಭೌಗೋಳಿಕ ಉದ್ರಿಕ್ತತೆ ಮತ್ತು ಬಜೆಟ್ ನಿರೀಕ್ಷೆಗಳ ನಡುವೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡು ನಿನ್ನೆ ಸಂಜೆ ವೇಳೆಗೆ 1.91 ಲಕ್ಷ ತಲುಪಿದ್ದು 2 ಲಕ್ಷ ಮಾರುಕಟ್ಟೆ ಹಂತಕ್ಕೆ ತೀವ್ರ ಹತ್ತಿರವಾಗಿದೆ
Gold Price Today: ಬಜೆಟ್ ಘೋಷಣೆಗೆ ಮುನ್ನ ದೇಶದ ಸರಕು ಮಾರುಕಟ್ಟೆಯಲ್ಲಿ ಅಚ್ಚರಿಯ ತಿರುವು ಕಂಡಿದೆ. ನಿನ್ನೆ ಬೆಳಗ್ಗಿನ ವಹಿವಾಟಿನಲ್ಲಿ ₹1.80 ಲಕ್ಷದ ಬಳಿಯಲ್ಲಿ ಇದ್ದ ಚಿನ್ನದ ಬೆಲೆ, ಸಂಜೆ ವೇಳೆಗೆ ಲೆಕ್ಕಾಚಾರವನ್ನೇ ಬದಲಿಸಿ ₹1.90 ಲಕ್ಷದ ಗಡಿ ದಾಟಿದೆ. ಒಂದೇ ದಿನದಲ್ಲಿ ಇಷ್ಟೊಂದು ಏರಿಕೆ ಕಾಣುವುದು ಮಾರುಕಟ್ಟೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಭೌಗೋಳಿಕ ಉದ್ರಿಕ್ತತೆ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಸುರಕ್ಷಿತ ಹೂಡಿಕೆ ಹುಡುಕಾಟ, ಈ ಮೂರೂ ಅಂಶಗಳು ಚಿನ್ನಕ್ಕೆ ಬಲ ನೀಡಿವೆ. ವಿಶೇಷವಾಗಿ US Federal Reserve ನೀತಿ ನಿರ್ಧಾರಗಳ ಬಳಿಕ ಹೂಡಿಕೆದಾರರು ಬಂಗಾರವನ್ನು ‘ಸುರಕ್ಷಿತ ತಾಣ’ವೆಂದು ಕಾಣುತ್ತಿರುವುದು ಏರಿಳಿತಕ್ಕೆ ಕಾರಣವಾಗಿದೆ.
ಸಂಜೆಗೆ ಸಂಪೂರ್ಣ ಬದಲಾದ ಲೆಕ್ಕಗಳು
Multi Commodity Exchange ಮಾಹಿತಿಯಂತೆ, ಗುರುವಾರ ಸಂಜೆ 7ರ ವೇಳೆಗೆ 10 ಗ್ರಾಂ ಬಂಗಾರ ₹1,91,151ಕ್ಕೆ ವಹಿವಾಟು ಕಂಡಿದೆ. ಹಿಂದಿನ ಮಾರುಕಟ್ಟೆಗೆ ಹೋಲಿಸಿದರೆ 10 ಗ್ರಾಂಗೆ ₹13,998 ಏರಿಕೆಯಾಗಿದೆ. ಬೆಳ್ಳಿಯೂ ಹಿಂದಿಲ್ಲ, ಕೆಜಿಗೆ ₹4,12,800 ತಲುಪಿದ್ದು, ಸುಮಾರು ₹27,000 ಜಿಗಿತ ಕಂಡಿದೆ.
2 ಲಕ್ಷ ಹಂತಕ್ಕೆ ಚಿನ್ನದ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಔನ್ಸ್ ಬೆಲೆ $5,600 ಮೀರಿದ್ದು, ಈ ತಿಂಗಳಲ್ಲಿ ಮಾತ್ರವೇ ಸುಮಾರು 30% ಏರಿಕೆಯಾಗಿದೆ. 2025ರಲ್ಲಿ ಒಟ್ಟಾರೆ 64% ಏರಿಕೆ ಕಂಡಿರುವ ಚಿನ್ನ, ಈ ವರ್ಷದಲ್ಲೇ 27% ಹೆಚ್ಚಾಗಿದೆ. ಬೆಳ್ಳಿ ಬೆಲೆಗಳು 67% ವರೆಗೆ ಜಿಗಿದಿವೆ. ಇದೆ ಮುಂದುವರಿದರೆ ನಾಳೆ ಅಥವಾ ನಾಡಿದ್ದು 2 ಲಕ್ಷ ಮಾರುಕಟ್ಟೆ ಹಂತ ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಇನ್ನೊಂದೆಡೆ ಒಂದು ಕಿಲೋ ಬೆಳ್ಳಿಯ ಬೆಲೆ ರೂ. 4 ಲಕ್ಷ ದಾಟಿದೆ. ನಿನ್ನೆ, ಬೆಳ್ಳಿಯ ಬೆಲೆ ಪ್ರತಿ ಕಿಲೋಗೆ ರೂ. 30 ಸಾವಿರ ಹೆಚ್ಚಾಗಿದೆ.



