ಬ್ಯಾಂಕ್ ಗಳಲ್ಲಿಯೂ ಸಿಗಲಿದೆ ದೀಪಾವಳಿ ಗಿಫ್ಟ್, (Diwali gift) ಇನ್ನು ಮುಂದೆ ಬ್ಯಾಂಕ್ ಗಳಲ್ಲಿ (Banks) ಸಿಗುವ ಈ ಸೌಲಭ್ಯಗಳಿಗೆ ಇರುವ ಶುಲ್ಕದಲ್ಲಿ ಭಾರಿ ಕಡಿತಗೊಳಿಸಲಾಗಿದೆ. ನೀವು ಕೂಡ ಈ ಪ್ರಮುಖ ಮೂರು ಬ್ಯಾಂಕ್ಗಳಲ್ಲಿ ಖಾತೆ (Bank Account) ಹೊಂದಿದ್ದರೆ ನಿಮಗೆ ಈ ದೀಪಾವಳಿಯ ಆಫರ್ ಸಿಗಲಿದೆ.

ಯಾವ ಬ್ಯಾಂಕ್ ನಲ್ಲಿ ಇದೆ ಆಫರ್!

ಸಾಮಾನ್ಯವಾಗಿ ದೀಪಾವಳಿ ಹಬ್ಬ ಅಂದ್ರೆ ಈ ಕಾಮರ್ಸ್ ಪ್ಲಾಟ್ಫಾರ್ಮ್ ಗಳಲ್ಲಿ (E-Commerce platform) ಎಲ್ಲ ವಸ್ತುಗಳನ್ನ ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಬಹುದು, ಅದೇ ರೀತಿ ಮೋಟಾರ್ ಕಂಪನಿಗಳು (motor companies) ತಾವು ಮಾರಾಟ ಮಾಡುವ ಪ್ರತಿಯೊಂದು ವಾಹನಗಳ ಮೇಲೆ ಒಂದಲ್ಲ ಒಂದು ರೀತಿಯ ವಿಶೇಷವಾದ ಕೊಡುಗೆಯನ್ನು ಘೋಷಿಸುತ್ತವೆ.

Get the highest interest on your fixed Deposit in State Bank Of India

ಈ ಬಾರಿ ಬ್ಯಾಂಕ್ ನಲ್ಲಿಯೂ ಕೂಡ ಉತ್ತಮ ಆಫರ್ ಲಭ್ಯವಾಗಲಿದ್ದು ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಮೂರು ಬ್ಯಾಂಕುಗಳಲ್ಲಿ ನೀವು ಖಾತೆ ಹೊಂದಿದ್ದರೆ ದೀಪಾವಳಿಯ ಸಮಯದಲ್ಲಿ ಹೆಚ್ಚುವರಿ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಹಾಗಾಗಿ ಈ ಮೂರು ಬ್ಯಾಂಕುಗಳಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ಈ ಗುಡ್ ನ್ಯೂಸ್ ನಿಮಗಾಗಿ.

ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank – PNB)

ಪಿ ಎನ್ ಬಿ ಬ್ಯಾಂಕ್ ನಲ್ಲಿ ದೀಪಾವಳಿ ಬಂಪರ್ ಆಫರ್ ನೀಡಲಾಗಿದ್ದು ಗ್ರಾಹಕರು ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ (home loan) ಪಡೆದುಕೊಳ್ಳಬಹುದು. ಪಿ ಎನ್ ಬಿ ಬ್ಯಾಂಕ್ ನಲ್ಲಿ ಗೃಹ ಸಾಲದ (Home Loan) ಮೇಲಿನ ಬಡ್ಡಿ ದರವನ್ನು 8.4% ನೀಡಲಾಗುವುದು. ಇನ್ನೊಂದು ಮುಖ್ಯವಾದ ವಿಷಯವೆಂದರೆ ನೀವು ಈ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡರೆ, ಪ್ರಕ್ರಿಯೆ ಶುಲ್ಕ (processing fee) ಹಾಗೂ ದಾಖಲಾತಿ ಶುಲ್ಕವನ್ನು ನೀಡಬೇಕಾಗಿಲ್ಲ. ಹೆಚ್ಚುವರಿ ಮಾಹಿತಿಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಆಗಿರುವ https://digihome.pnb.co.in/pnb/hl/ ಗೆ ಭೇಟಿ ನೀಡಿ.

ಈ ಬ್ಯಾಂಕ್‌ಗಳಲ್ಲಿ ಹೋಮ್ ಲೋನ್ ಹಾಗೂ ಕಾರ್ ಲೋನ್ ಮೇಲೆ ದೀಪಾವಳಿ ಕೊಡುಗೆಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI)

State Bank Of Indiaಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ದೀಪಾವಳಿಗೆ ವಿಶೇಷ ರಿಯಾಯಿತಿ ಸಾಲವನ್ನು ನೀಡುತ್ತಿದೆ. ಟರ್ಮ್ ಲೋನ್ ಬಡ್ಡಿ ದರದ ಮೇಲೆ ಕಡಿತಗೊಳಿಸಲಾಗಿದೆ. ಗ್ರಾಹಕರ ಸಿಬಿಲ್ ಸ್ಕೋರ್ (CIBIL score) ಎಷ್ಟಿದೆ ಎಂಬುದನ್ನು ನೋಡಿ ಬಡ್ಡಿ ದರ ನಿಗದಿಪಡಿಸಲಾಗುವುದು ಉದಾಹರಣೆಗೆ 700 ರಿಂದ 750 ಸಿಬಿಲ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ 8.7%ನಲ್ಲಿ ಸಾಲ ಸೌಲಭ್ಯ ಸಿಗಲಿದೆ. ಡಿಸೆಂಬರ್ 31ರವರೆಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು ಗ್ರಾಹಕರು ತಕ್ಷಣವೇ ಅಗತ್ಯ ಇರುವ ಸಾಲ ಸೌಲಭ್ಯವನ್ನು ಅರ್ಜಿ ಹಾಕಿ ಪಡೆದುಕೊಳ್ಳಿ.

ಫಿಕ್ಸೆಡ್ ಡೆಪಾಸಿಟ್ ಮಾಡುವವರಿಗೆ ಈ ಬ್ಯಾಂಕ್ ನೀಡುತ್ತೆ ಹೆಚ್ಚಿನ ಬಡ್ಡಿ! ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದಿಯಾ?

ಬ್ಯಾಂಕ್ ಆಫ್ ಬರೋಡ! (Bank of Baroda – BOB)

ನೀವು ಬ್ಯಾಂಕ್ ಆಫ್ ಬರೋಡದಲ್ಲಿ ಗೃಹ ಸಾಲ (Home Loan) ಹಾಗೂ ಕಾರ್ ಲೋನ್ (car loan) ಪಡೆದುಕೊಳ್ಳುವುದಿದ್ದರೆ ಬಡ್ಡಿ ದರದಲ್ಲಿ ಆಫರ್ ನೀಡಲಾಗುತ್ತಿದೆ. ಈ ಬ್ಯಾಂಕ್ ನಲ್ಲಿ ಗೃಹ ಸಾಲ ಮಾಡಿದ್ರೆ 8.4%ಗಳಲ್ಲಿ ಗೃಹ ಸಾಲ ಪಡೆದುಕೊಳ್ಳಬಹುದು ಹಾಗೂ ಯಾವುದೇ ಪ್ರಕ್ರಿಯೆ ಶುಲ್ಕವನ್ನು ಗ್ರಾಹಕರಿಗೆ ವಿಧಿಸಲಾಗುವುದಿಲ್ಲ.

ಇಷ್ಟೇ ಅಲ್ಲದೆ ಕಾರ್ ಲೋನ್ (Car Loan) ಮೇಲೆ ವಾರ್ಷಿಕ 8.7% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಶಿಕ್ಷಣ ಸಾಲಗಳಿಗೆ (Education Loan) ಯಾವುದೇ ರೀತಿಯ ಸಂಸ್ಕರಣಾ ಶುಲ್ಕವನ್ನು ಕೂಡ ವಿಧಿಸುವುದಿಲ್ಲ.

ಮೂರು ಬ್ಯಾಂಕ್ಗಳಲ್ಲಿ ನೀಡಲಾಗುತ್ತಿರುವ ಈ ವಿಶೇಷ ಆಫರ್ ಗಳು ಡಿಸೆಂಬರ್ 31, 20 2023ರ ವರೆಗೆ ಮಾತ್ರ ಎಂಬುದನ್ನು ನೆನಪಿಡಿ.

Good news for those who have accounts in these banks, no charge for this facility