ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ

Bank Loan : ಸಾಲ ನೀಡುವ ವೇಳೆ ಒಂದೊಂದು ಬಗೆಯ ಸಾಲಕ್ಕೆ ಒಂದೊಂದು ರೀತಿಯ ಬಡ್ಡಿದರ ವಿಧಿಸಲಾಗುತ್ತದೆ. ಈ ಬಡ್ಡಿದರ ನಿರ್ಧಾರವು ಆರ್ಬಿಐ ನೀಡುವ ರೆಪೋ ದರದ ಮೇಲೆ ತೀರ್ಮಾನವಾಗುತ್ತದೆ

Bank Loan : ಇಂದಿನ ದಿನದಲ್ಲಿ ಎಷ್ಟು ದುಡಿದರೂ ಹಣ ಸಾಕಾಗುವುದಿಲ್ಲ. ಪ್ರತಿ ತಿಂಗಳು ಸಂಬಳದಿಂದ ಬರುವ ಹಣವು ಅದೇ ತಿಂಗಳ ಖರ್ಚು ವೆಚ್ಚಕ್ಕೆ ಸಮನಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬೇಕು, ಅಥವಾ ವಾಹನ, ಮನೆ, ಸೈಟ್, ಜಮೀನು ಹೀಗೆ ಏನನ್ನಾದರೂ ಕೊಂಡುಕೊಳ್ಳಬೇಕು ಎಂದಾದರೆ ಸಾಲ (Loan) ಮಾಡುವುದು ಅನಿವಾರ್ಯವಾಗಿಬಿಡುತ್ತದೆ.

ನಮ್ಮ ದೇಶದಲ್ಲಿ ರಾಷ್ಟ್ರೀಯ ಬ್ಯಾಂಕುಗಳ ಜೊತೆ ಖಾಸಗಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದರಿಂದ ರಾಷ್ಟ್ರೀಯ ಬ್ಯಾಂಕುಗಳು ಪೈಪೋಟಿ ಎದುರಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಯಾವುದಕ್ಕೆ ಬೇಕಾದರೂ ಸಾಲವನ್ನು ಸುಲಭವಾಗಿ ನೀಡುತ್ತದೆ.

ಚಿನ್ನದ ಬೆಲೆ ಇಳಿಕೆ! ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್; ಇಲ್ಲಿದೆ ಡೀಟೇಲ್ಸ್

ಈ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ; ಸಾಲದ ಮೇಲಿನ ಬಡ್ಡಿ ಇಳಿಕೆ - Kannada News

ಹೀಗೆ ಸಾಲ ನೀಡುವ ವೇಳೆ ಒಂದೊಂದು ಬಗೆಯ ಸಾಲಕ್ಕೆ ಒಂದೊಂದು ರೀತಿಯ ಬಡ್ಡಿದರ ವಿಧಿಸಲಾಗುತ್ತದೆ. ಈ ಬಡ್ಡಿದರ ನಿರ್ಧಾರವು ಆರ್ಬಿಐ ನೀಡುವ ರೆಪೋ ದರದ ಮೇಲೆ ತೀರ್ಮಾನವಾಗುತ್ತದೆ. ಹಾಗಾಗಿ ರೆಪೋ ದರ ಏರಿಕೆಯಾದಲ್ಲಿ ಬಡ್ಡಿದರವೂ ಏರಿಕೆಯಾಗುತ್ತದೆ.

ಮೊನ್ನೆ ನಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಾಲಗಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ ಎಂದೇ ಹೇಳಬೇಕು. ಕಾರಣ ಆರ್ಬಿಐ ಈ ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಈ ಬಾರಿ ಎಲ್ಲಿ ರೆಪೋ ದರ ಹೆಚ್ಚಾಗಿ ಹೆಚ್ಚಿನ ಬಡ್ಡಿ ಪಾವತಿ ಮಾಡಬೇಕಾಗುತ್ತೋ ಎನ್ನುವ ಚಿಂತೆಯಲ್ಲಿದ್ದ ಸಾಲಗಾರರು ಆರ್ಬಿಐ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆರ್ಬಿಐ ಈ ತೀರ್ಮಾನದಿಂದ ಮುಂಬರುವ ದಿನದಲ್ಲಿ ಸಾಲದ ಮೇಲಿನ ಬಡ್ಡಿದರ ಹಾಗೂ ಹೊಸ ಸಾಲ (Loan) ಮಾಡುವವರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವ ಸಾಧ್ಯತೆಗಳಿವೆ.

ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡೋಕು ಮುನ್ನ ತಿಳಿದಿರಬೇಕಾದ ವಿಚಾರಗಳಿವು

Bank Loanರೆಪೋ ದರದಲ್ಲಿ ಬದಲಾವಣೆ ಮಾಡದ ಆರ್ಬಿಐ:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರವನ್ನು ಸ್ಥಿರವಾಗಿಡುವ ನಿರ್ಧಾರ ಕೈಗೊಂಡಿದೆ. ಫೆ.೮ರಂದು ಆರ್ಬಿಐ ತನ್ನ ಆರ್ಥಿಕ ನೀತಿಯನ್ನು ಪ್ರಕಟಿಸಿದ್ದು, ಅದರಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದ್ದಾರೆ. ಸತತ ೬ನೇ ಬಾರಿಯೂ ರೆಪೋ ದರವು ಶೇ.೬.೫ರಲ್ಲೇ ಮುಂದುವರಿಸಲು ಆರ್ಬಿಐ ಸಭೆಯಲ್ಲಿ ನಿರ್ಧರಿಸಲಾಗಿದೆ.

ಆರ್ಬಿಐನ ಈ ನಿರ್ಧಾರದಿಂದ ಬಡ್ಡಿದರದಲ್ಲಿಯೂ ಯಾವುದೇ ಬದಲಾವಣೆ ಆಗುವುದಿಲ್ಲ. ಬಡ್ಡಿದರ ಸಹ ಶೇ.೬.೫ರಲ್ಲೇ ಇರಲಿದೆ. ರಿಸರ್ವ್ ಬ್ಯಾಂಕ್ನ ಈ ನಿರ್ಧಾರದಿಂದ ಈ ವರ್ಷದ ದ್ವಿತಿಯಾರ್ಧದಲ್ಲಿ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಮೂಲಕ ಸಾಲಗಾರರಿಗೆ ಕೊಂಚ ನಿರಾಳತೆ ಮೂಡಬಹುದು.

ಹಳೆ ಮನೆ ರಿಪೇರಿಗೂ ಸಿಗುತ್ತೆ ಲೋನ್! ಟಾಪ್-ಅಪ್ ಹೋಮ್ ಲೋನ್ ಬಗ್ಗೆ ತಿಳಿಯಿರಿ

೨೦೨೪ರ ಏಪ್ರಿಲ್ ೧ರಿಂದ ಈ ಹೊಸ ನಿರ್ಧಾರ ಜಾರಿ ಆಗಲಿದೆ. ಆ ವೇಳೆ ಬ್ಯಾಂಕುಗಳು ಹೊಸ ಬಡ್ಡಿದರ ಪ್ರಕಟಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರಗಳು ಕೊಂಚವಾದರೂ ಕಡಿಮೆ ಆಗಬಹುದು ಎಂದು ತಜ್ಞರು ವಿಮರ್ಶಿಸಿದ್ದಾರೆ. ಏನೇ ಆಗಲಿ ಇಂದಿನ ಆರ್ಬಿಐ ಈ ನಿರ್ಧಾರದಿಂದ ಸಾಲಗಾರರಂತೂ ಚಿಂತೆಗೆ ಬೀಳುವುದು ತಪ್ಪಿದೆ ಎಂದರೆ ಅತಿಶಯೋಕ್ತಿ ಆಗಲಾರದು.

Good news for those who have taken loans from these banks, Reduction in interest on loans

Follow us On

FaceBook Google News

Good news for those who have taken loans from these banks, Reduction in interest on loans