ಬ್ಯಾಂಕ್ ಗಳಿಂದ ಸಾಲ ಪಡೆದು ಕಟ್ಟಲಾಗದ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಸಾಲ ಮನ್ನಾ ಯೋಜನೆಗೆ ಚಿಂತನೆ
ನಮ್ಮ ದೇಶದ ಮೂಲ ಉದ್ಯಮ ಕೃಷಿ, ನಮ್ಮಲ್ಲಿ 70% ಗಿಂತ ಹೆಚ್ಚು ಜನರು ಕೃಷಿ ಮಾಡುತ್ತಾರೆ. ಆದರೆ ನಮ್ಮ ರೈತರಿಗೆ ಒಳ್ಳೆಯದಂತೂ ಆಗುವುದು ತುಂಬಾ ಅಪರೂಪ ಆಗಿದೆ. ಎಷ್ಟೇ ಕಷ್ಟ ಪಟ್ಟು ಬೆಳೆಯನ್ನು ಬೆಳೆದರು ಕೂಡ, ಕೆಲವೊಮ್ಮೆ ಪ್ರಕೃತಿ ವಿಕೋಪದಿಂದ ಬೆಳೆಗಳು ನಾಶವಾಗುತ್ತಿದೆ.
ಕೆಲವು ಸಾರಿ ಅತಿಯಾದ ಮಳೆಯಿಂದ ಬೆಳೆಗಳು ನಾಶವಾದರೆ, ಇನ್ನು ಕೆಲವು ಸಾರಿ ಮಳೆ ಇಲ್ಲದೆ ಬರಗಾಲ ಎದುರಿಸುವ ಹಾಗೆ ಆಗುತ್ತದೆ. ಪರಿಸ್ಥಿತಿ ಈ ರೀತಿ ಇದ್ದಾಗ, ರೈತರಿಗೆ ಸಾಲ (Loan) ಪಡೆಯುವುದನ್ನು ಬಿಟ್ಟು, ಬೇರೆ ಆಯ್ಕೆ ಇರುವುದಿಲ್ಲ.
ಕೃಷಿ ಕೆಲಸ (Agriculture) ಚೆನ್ನಾಗಿ ನಡೆಯಬೇಕು, ಕೃಷಿಯಲ್ಲಿ ಒಳ್ಳೆಯ ಲಾಭ ಸಿಗಬೇಕು ಎಂದು ರೈತರು ಬ್ಯಾಂಕ್ ಗಳಿಂದ ಸಾಲ (Bank Loan) ಪಡೆದಿರುತ್ತಾರೆ. ಆದರೆ ಆ ಹಣವನ್ನು ಮತ್ತೆ ವಾಪಸ್ ಕಟ್ಟಲು ಸಾಧ್ಯ ಆಗುವುದಿಲ್ಲ. ಆ ರೀತಿ ಬೆಳೆಗಳ ವಿಷಯದಲ್ಲಿ ಲಾಭ ಬರದೇ ಕಷ್ಟಕ್ಕೆ ಸಿಲುಕಿ ಸಾಲ ಮರುಪಾವತಿ (Agriculture Loan) ಮಾಡಲು ಸಾಧ್ಯವಾಗದೆ ಇದ್ದಾಗ, ರೈತರು ಇನ್ನಷ್ಟು ಕಷ್ಟ ಪಡುತ್ತಾರೆ.
ಹಾಗಾಗಿ ಈ ರೀತಿ ಕಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ರೈತರ ಸಾಲ ಮನ್ನಾ ಮಾಡುವ ಯೋಜನೆಯನ್ನು ಜಾರಿಗೆ ತರಲಿದ್ದಾರೆ, ಇದಕ್ಕೆ ಕೇಂದ್ರದ ಒಪ್ಪಿಗೆ ಕೂಡ ಸಿಕ್ಕಿದೆಯಂತೆ.
ಇದಕ್ಕಾಗಿ ಒಂದು ಆಯೋಗ ರಚಿಸಿ, ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಸರ್ಕಾರ ತಿಳಿಸಿದೆಯಂತೆ. ಈ ರೀತಿಯಾಗಿ ಇನ್ನು ಮೇಲೆ ರೈತರು ಸಾಲದ ಹಣವನ್ನು ಮರುಪಾವತಿ ಮಾಡಿಲ್ಲ ಎಂದು ಅವರ ಬಳಿ ಹಣ ಮರುಪಾವತಿ ಮಾಡಲೇಬೇಕು ಎಂದು ಕಠಿಣವಾಗಿ ವರ್ತಿಸುವ ಹಾಗಿಲ್ಲ, ಒತ್ತಡ ಹಾಕುವ ಹಾಗಿಲ್ಲ.
ಹೊಸದಾಗಿ ಮನೆ ಕಟ್ಟುವವರಿಗೆ ಬಿಗ್ ನ್ಯೂಸ್, ಗಗನಕ್ಕೇರಿದ್ದ ಸಿಮೆಂಟ್ ಮತ್ತು ಕಂಬಿ ಬೆಲೆ ಕುಸಿತ!
ಹಲವಾರು ರೈತರು ಬೆಳೆ ನಾಶ ಆಗಿರುವುದರಿಂದ ತಮಗೆ ಪರಿಹಾರ ನೀಡಬೇಕು ಎಂದು ಅರ್ಜಿ ಹಾಕಿದ್ದಾರಂತೆ. ಹಾಗಾಗಿ ಸರ್ಕಾರದಿಂದ ಅವರಿಗೆ ಈ ಮಸೂದೆಯಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತಿದೆ..ರೈತರಿಗೆ ಕಷ್ಟವಾಗಬಾರದು ಎಂದು ಅವರ ಸಾಲ ಮನ್ನಾ ಮಾಡುವ ಚಿಂತನೆ ನಡೆದಿದೆ..
ರೈತರ ಸಾಲ ಮನ್ನಾ ಆಯೋಗವನ್ನು ರೈತರ ಋಣ ಪರಿಹಾರ ಆಯೋಗ ಎಂದು ಹೆಸರಿಡಲಾಗಿದ್ದು, ಇದಕ್ಕೆ ಒಬ್ಬರು ಅಧ್ಯಕ್ಷರು ಹಾಗೂ 5 ಜನ ಸದಸ್ಯರ ತಂಡವನ್ನು ಒಳಗೊಂಡಿದೆ. ಈ ಆಯೋಗದ ಅಧ್ಯಕ್ಷರು ನಿವೃತ್ತ ಹೈಕೋರ್ಟ್ ಜಡ್ಜ್ ಆಗಿದ್ದಾರೆ.
ಸದಸ್ಯರ ಸ್ಥಾನದಲ್ಲಿ IAS ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ನ ಜಡ್ಜ್, ಬ್ಯಾಂಕಿಂಗ್ (Banking) ವಿಭಾಗದಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಇರುವ ಅಧಿಕಾರಿಗಳು ಮತ್ತು ಕೃಷಿ ತಜ್ಞರು ಈ ಆಯೋಗದಲ್ಲಿ ಇರಲಿದ್ದಾರೆ.
ಈ ಆಯೋಗ ಶುರು ಮಾಡಿರುವುದು 3 ವರ್ಷಗಳ ಸಮಯಕ್ಕೆ, ಇಷ್ಟು ವರ್ಷಗಳ ಕಾಲ ಇವರೇ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಕೆಲಸ ಮಾಡಲಿದ್ದಾರೆ. ಆದರೆ ಯಾವಾಗಲಾದರೂ ಈ ಸದಸ್ಯರನ್ನು ತೆಗೆದುಹಾಕುವ ಅಧಿಕಾರ ಸರ್ಕಾರಕ್ಕೆ ಇದೆ.
ಈ ಆಯೋಗದ ಸಂಪೂರ್ಣವಾಗಿ ರಚನೆಯಾದ ನಂತರ, ಇವರು ಮಾಡಬೇಕಾದ ಕೆಲಸ ಏನು ಎಂದರೆ, ರೈತರು ಕಷ್ಟಕ್ಕೆ ಸಿಲುಕಿ, ಬೆಳೆ ನಾಶವಾಗಿ ಬ್ಯಾಂಕ್ ಇಂದ ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗದೆ ಹೋದರೆ, ಆ ರೈತರು ಸಾಲ ಮನ್ನಾ ಮಾಡಿ ಎಂದು ಮನವಿ ಸಲ್ಲಿಸಿದ್ದರೆ. ಈ ಆಯೋಗವು ಆ ರೈತ ಮತ್ತು ಆತನ ಜಮೀನನ್ನು ಕಷ್ಟದಲ್ಲಿರುವ ಜಾಗ ಎಂದು ಗುರುತಿಸಬೇಕು, ಅವರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಸರ್ಕಾರ ಘೋಷಣೆ ಮಾಡಿದೆ.
ರೈತರು ಸಮಸ್ಯೆ ಬಗ್ಗೆ ತಿಳಿಸಿದಾಗ, ಆ ಸ್ಥಳಕ್ಕೆ ಹೋಗಿ, ರೈತರಿಗೆ ಅವರ ಜಮೀನಿಗೆ ಏನು ಸಮಸ್ಯೆ ಆಗಿದೆ ಎನ್ನುವುದನ್ನು ಪರಿಶೀಲಿಸಿ, ಸತ್ಯವಾಗಲು ಆ ರೈತ ಕಷ್ಟದಲ್ಲಿದ್ದಾನೆ ಎಂದರೆ, ಆತನನ್ನು ಕಷ್ಟದಲ್ಲಿರುವ ರೈತ ಎಂದು ತಿಳಿಸಬೇಕು.
ಒಂದು ವೇಳೆ ರೈತರಿಗೆ ಸಾಲದ ಹಣ ಮರುಪಾವತಿ (Loan Re Payment) ಮಾಡಲು ಸಾಧ್ಯವಾಗಿಲ್ಲದೆ ಹೋದರೆ, ಬ್ಯಾಂಕ್ ಗಳು (Banks) ಅವರ ಮೇಲೆ ಒತ್ತಡ ಹಾಕದೆ ಇರುವ ಹಾಗೆ ಈ ಆಯೋಗ ನೋಡಿಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಈ ಆಯೋಗ ಬಗೆಹರಿಸಬೇಕು.
Good news from central government for farmers who cannot pay after taking loans
Our Whatsapp Channel is Live Now 👇