Credit Card: ಗೂಗಲ್ ಪೇ ಕ್ರೆಡಿಟ್ ಕಾರ್ಡ್ ಲಾಂಚ್, ಯುಪಿಐ ಸ್ಕ್ಯಾನ್ ಪೇಮೆಂಟ್ ಸೌಲಭ್ಯ

Google Pay Credit Card: ಗೂಗಲ್ ಪೇ ಬಳಕೆದಾರರಿಗೆ ಆಕ್ಸಿಸ್ ಬ್ಯಾಂಕ್ ಜೊತೆಗೆ ಹೊಸ ಕ್ರೆಡಿಟ್ ಕಾರ್ಡ್ ಲಭ್ಯ. ಯೂಪಿಐ ಮೂಲಕವೇ ಪೇಮೆಂಟ್, ತಕ್ಷಣದ ರಿವಾರ್ಡ್, ಡಿಜಿಟಲ್ ಕಾರ್ಡ್ ಸೌಲಭ್ಯಗಳೊಂದಿಗೆ ಈ ಸೇವೆ ಆರಂಭವಾಗಿದೆ.

  • ಗೂಗಲ್ ಪೇ ಕ್ರೆಡಿಟ್ ಕಾರ್ಡ್
  • ಯುಪಿಐ ಸ್ಕ್ಯಾನ್ ಪೇಮೆಂಟ್ ಸೌಲಭ್ಯ
  • ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಿಂದ ಕಾರ್ಡ್

Google Pay Credit Card: ಭಾರತದಲ್ಲಿ ಯುಪಿಐ ಪೇಮೆಂಟ್‌ಗಳಿಗೆ ಭಾರಿ ಜನಪ್ರಿಯತೆ ದೊರಕುತ್ತಿರುವ ಸಮಯದಲ್ಲಿ, Google Pay ಬಳಕೆದಾರರಿಗೆ ಮತ್ತೊಂದು ದೊಡ್ಡ ಸೌಲಭ್ಯ ಲಭ್ಯವಾಗಿದೆ.

Axis Bank ಜೊತೆಗೂಡಿ ಗೂಗಲ್ ಪೇ ತನ್ನದೇ ಆದ ಹೊಸ Credit Card ಅನ್ನು ಪರಿಚಯಿಸಿದೆ. ಈ ಕಾರ್ಡ್ ಸಂಪೂರ್ಣವಾಗಿ ಗೂಗಲ್ ಪೇ ಆ್ಯಪ್ ಮೂಲಕವೇ ಪಡೆಯಬಹುದಾಗಿದೆ.

ಇದುವರೆಗೆ ಕ್ಯಾಶ್‌ಬ್ಯಾಕ್, ಆಫರ್‌ಗಳು ಮತ್ತು ರಿವಾರ್ಡ್‌ಗಳಿಗಾಗಿ ಜನಪ್ರಿಯವಾಗಿದ್ದ ಗೂಗಲ್ ಪೇ, ಇದೀಗ ಕ್ರೆಡಿಟ್ ಕಾರ್ಡ್ ಸೇವೆಯನ್ನೂ ಸೇರಿಸುವ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ವಿಸ್ತರಿಸಿದೆ. “ಗೂಗಲ್ ಪೇ ಫ್ಲೆಕ್ಸ್ – ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್” ಎಂಬ ಹೆಸರಿನಲ್ಲಿ ಈ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ.

ಫ್ಲೆಕ್ಸ್ ಕ್ರೆಡಿಟ್ ಕಾರ್ಡ್‌ನ ಪ್ರಮುಖ ಫೀಚರ್ಸ್

ಈ ಕಾರ್ಡ್‌ನ ವಿಶೇಷತೆ ಎಂದರೆ, ಕ್ರೆಡಿಟ್ ಕಾರ್ಡ್ ಇದ್ದರೂ ಯುಪಿಐ ರೀತಿಯಲ್ಲೇ ಪೇಮೆಂಟ್ ಮಾಡಬಹುದಾಗಿದೆ. ರೂಪೇ ನೆಟ್‌ವರ್ಕ್‌ನಲ್ಲಿರುವುದರಿಂದ, ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೇರವಾಗಿ ಪಾವತಿ ಮಾಡಲು ಅವಕಾಶ ಇದೆ. ಜೊತೆಗೆ ಇದು ಡಿಜಿಟಲ್ ಕಾರ್ಡ್ ಆಗಿದ್ದು, ಕಾರ್ಡ್ ಮಂಜೂರಾದ ಕೂಡಲೇ ಬಳಕೆ ಆರಂಭಿಸಬಹುದು.

ಪ್ರತಿ ವ್ಯವಹಾರಕ್ಕೂ “ಸ್ಟಾರ್ಸ್” ರೂಪದಲ್ಲಿ ರಿವಾರ್ಡ್ ಸಿಗುತ್ತದೆ. ಇಲ್ಲಿ ಒಂದು ಸ್ಟಾರ್‌ಗೆ ಒಂದು ರೂಪಾಯಿ ಮೌಲ್ಯ ಇರುವುದು ಗಮನಾರ್ಹ ಅಂಶ. ಈ ರಿವಾರ್ಡ್‌ಗಳನ್ನು ಮುಂದಿನ ಪೇಮೆಂಟ್‌ಗಳಲ್ಲಿ ಬಳಸಿಕೊಳ್ಳಬಹುದು.

ಅರ್ಜಿಯ ಪ್ರಕ್ರಿಯೆ ಹೇಗೆ?

ಗೂಗಲ್ ಪೇ ಆ್ಯಪ್ ತೆರಳಿ ‘ಮನಿ’ ಸೆಕ್ಷನ್‌ಗೆ ಹೋಗಿ ‘ಕ್ರೆಡಿಟ್ ಕಾರ್ಡ್’ ಅಥವಾ ಗೂಗಲ್ ಫ್ಲೆಕ್ಸ್’ ಆಯ್ಕೆಮಾಡಬೇಕು. ಅಪ್ಲೈ ಬಟನ್ ಕ್ಲಿಕ್ ಮಾಡಿದ ನಂತರ ಪ್ಯಾನ್, ಆದಾಯ ಹಾಗೂ ಉದ್ಯೋಗ ವಿವರಗಳನ್ನು ನೀಡಬೇಕು. ಆಧಾರ್–ಪ್ಯಾನ್ ಆಧಾರಿತ ಕೇವೈಸಿ ಪೂರ್ಣಗೊಳಿಸಿದರೆ, ಅರ್ಹತೆ ಇದ್ದಲ್ಲಿ ಕೆಲವೇ ನಿಮಿಷಗಳಲ್ಲಿ ಕಾರ್ಡ್ ಮಂಜೂರು ಆಗುತ್ತದೆ. ಡಿಜಿಟಲ್ ಕಾರ್ಡ್ ಮೂಲಕ ತಕ್ಷಣವೇ ವಹಿವಾಟು ಆರಂಭಿಸಬಹುದು.

ಇತರೆ ಯೂಪಿಐ ಆ್ಯಪ್‌ಗಳಲ್ಲೂ ಕ್ರೆಡಿಟ್ ಕಾರ್ಡ್

ಗೂಗಲ್ ಪೇ ಮಾತ್ರವಲ್ಲದೆ, ಈಗಾಗಲೇ PhonePe ಮತ್ತು Paytm ಕೂಡ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಿವೆ. ಇದರಿಂದ ಯೂಪಿಐ ಆಧಾರಿತ ಕ್ರೆಡಿಟ್ ಪೇಮೆಂಟ್‌ಗಳಿಗೆ ಸ್ಪರ್ಧೆ ಇನ್ನಷ್ಟು ಹೆಚ್ಚಾಗಿದೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories