ಹೊಸದಾಗಿ ಮನೆ ಖರೀದಿ (Buy House) ಮಾಡಬೇಕು ಅಥವಾ ಸೈಟ್ ಖರೀದಿ ಮಾಡಬೇಕು ಎಂದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಮನೆ, ಸೈಟ್, ಕೃಷಿ ಭೂಮಿ ಹೀಗೆ ಅನೇಕ ರೀತಿಯ ಸ್ಥಳಗಳನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಆದರೆ ನೀವು ಯಾವುದೇ ಜಾಗ ಖರೀದಿ ಮಾಡುವಾಗ ಈ ಕೆಲವು ದಾಖಲೆಗಳು ನಿಮ್ಮ ಬಳಿ ಇರಲೇಬೇಕು ಎಂದು ಸರ್ಕಾರ ಕಡ್ಡಾಯಗೊಳಿಸಿದೆ. ಹಾಗಿದ್ದಲ್ಲಿ ಆ ದಾಖಲೆಗಳು ಯಾವುವು.. ನಿಯಮಗಳು ಏನೇನು ಎಂದು ತಿಳಿಯೋಣ..
ಸ್ವಂತ ಮನೆ (Own House), ಜಮೀನು (Property), ಸೈಟ್ ಇದ್ಯಾವುದನ್ನೇ ಖರೀದಿ ಮಾಡುವಾಗಲು ಕೂಡ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಖರೀದಿ ಮಾಡಬೇಕು. ಇಲ್ಲದೇ ಹೋದರೆ ಇಂಥ ವಿಷಯಗಳಲ್ಲಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಈ ಕೆಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಿ. ಅದರಲ್ಲಿ ಮುಖ್ಯವಾಗಿ ದಾಖಲೆಗಳ ಬಗ್ಗೆ ನೀವು ಹುಷಾರಾಗಿ ಇರಬೇಕು. ಕೆಲವರು ಸುಳ್ಳು ದಾಖಲೆಗಳನ್ನು ನೀಡಿ, ಮೋಸ ಮಾಡುವುದಕ್ಕೆ ಪ್ರಯತ್ನ ಮಾಡಬಹುದು.
Google Pay, PhonePe ಬಳಸೋರಿಗೆ ಬಿಗ್ ಅಲರ್ಟ್! UPI ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್
ಹಲವು ಜನರು ಈ ರೀತಿ ಮೋಸ ಹೋಗಿರುವ ಘಟನೆಗಳು ಕೂಡ ನಡೆದಿದೆ. ಹಾಗಾಗಿ ಈ ವಿಷಯಗಳಲ್ಲಿ ಹುಷಾರಾಗಿರಿ. ಮನೆ ಹಾಗೂ ಸೈಟ್, ಜಮೀನು ಯಾವುದನ್ನೇ ಖರೀದಿ ಮಾಡುವಾಗ ಈ ಕೆಲವು ದಾಖಲೆಗಳು ಕಡ್ಡಾಯವಾಗಿ ನಿಮ್ಮ ಬಳಿ ಇರಲೇಬೇಕಾಗುತ್ತದೆ. ಆಸ್ತಿ ಖರೀದಿ ಮಾಡುವುದಾದರೆ, ನೀವು ಯಾರಿಂದ ಆಸ್ತಿ ಖರೀದಿ ಮಾಡುತ್ತಿದ್ದೀರಿ ಎನ್ನುವುದರ ದಾಖಲೆ ನಿಮ್ಮ ಬಳಿ ಇರಬೇಕು. ಆಸ್ತಿ ಮಾರಟ ಮಾಡುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ನಿಮ್ಮ ಹತ್ತಿರ ಇರಬೇಕು.
ಆಸ್ತಿಯನ್ನು ನಿಮಗೆ ಗಿಫ್ಟ್ ರೂಪದಲ್ಲಿ ಯಾರಾದರೂ ಕೊಟ್ಟಿದ್ದರೆ, ಅದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ನಿಮ್ಮ ಹತ್ತಿರ ಇರಬೇಕು. ಆಸ್ತಿ ಟ್ರಾನ್ಸ್ಫರ್ ಮಾಡುವುದು ಎಂದಾದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳು ಲಿಂಕ್ ಆಗಿದ್ಯಾ ಎನ್ನುವುದನ್ನು ಸಹ ನೋಡಿಕೊಳ್ಳಬೇಕು. 30 ವರ್ಷ ಹಳೆಯ ದಾಖಲೆಗಳನ್ನು ಲಿಂಕ್ ಮಾಡಿರಬೇಕು. ಈ ಒಂದು ವಿಷಯವನ್ನು ನೀವು ಕೂಲಂಕುಷವಾಗಿ ಗಮನಿಸಿ.
ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ ಸೌಲಭ್ಯ! ಮಾಹಿತಿ ಇಲ್ಲಿದೆ, ಅರ್ಜಿ ಸಲ್ಲಿಸಿ
ಒಂದು ವೇಳೆ ಆಸ್ತಿಯ ದಾಖಲೆಗಳು ಲಿಂಕ್ ಆಗಿಲ್ಲ ಎಂದರೆ, ಅದನ್ನು ಖರೀದಿ ಮಾಡಿ, ಯಾವುದೇ ಪ್ರಯೋಜನ ಸಿಗುವುದಿಲ್ಲ. ಆಸ್ತಿ ಮಾರಾಟ ಅಥವಾ ಖರೀದಿ ವೇಳೆ ಆ ಜಾಗಕ್ಕೆ ಸಂಬಂಧಿಸಿದ ಹಾಗೆ ಅದರ ಮೇಲೆ ಸಾಲ ಆಗಿದ್ಯಾ ಎನ್ನುವುದನ್ನು ಕೂಡ ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಸಾಲ ಇರುವುದಾದರೆ, ಸಾಲ ತೀರಿಸುವವರೆಗು ಆಸ್ತಿ ಮಾರಾಟ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ.
Henceforth, no house, site or anything can be bought without these documents
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.