ಚಿನ್ನ ಅಸಲಿಯೋ ನಕಲಿಯೋ ಚೆಕ್ ಮಾಡಲು ಟಿಪ್ಸ್ ಇಲ್ಲಿದೆ! ಸುಲಭವಾಗಿ ಕಂಡು ಹಿಡಿಯಿರಿ
ಅಸಲಿ ಚಿನ್ನಕ್ಕಿಂತ ನಕಲಿ ಚಿನ್ನದ ಮಾರಾಟವೇ ಹೆಚ್ಚಾಯಿತು! ಇದನ್ನ ಕಂಡು ಹಿಡಿಯೋದು ಹೇಗೆ ತಿಳಿಯಿರಿ
ಬೆಳ್ಳಗಿರುವುದೆಲ್ಲ ಹಾಲಲ್ಲ ಎನ್ನುವ ಮಾತಿದೆ. ಅದೇ ರೀತಿ ಹಳದಿ ಬಣ್ಣದಲ್ಲಿ ಇರುವುದೆಲ್ಲ ಚಿನ್ನವಲ್ಲ (Gold) ಎನ್ನುವ ಹೊಸ ಗಾದೆ ಮಾತು ಈಗ ಸೇರ್ಪಡೆಗೊಂಡಿದೆ.
ಯಾಕೆ ಅಂತೀರಾ? ಚಿನ್ನವನ್ನೇ ಹೋಲುವ ನಕಲಿ ಚಿನ್ನದ ಮಾರಾಟ (gold sale) ಎಂದು ಹೆಚ್ಚಾಗುತ್ತಿದೆ. ಜನರನ್ನು ಯಾಮಾರಿಸಿ ನಕಲಿ ಚಿನ್ನ (fake gold) ವನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಗುರುತಿಸಲು ಕೂಡ ಅಷ್ಟು ಸುಲಭವಲ್ಲ ಹಾಗಾಗಿ ಜನರನ್ನು ಸುಲಭವಾಗಿ ಮೋಸಗೊಳಿಸಲಾಗುತ್ತಿದೆ.
ಚಿನ್ನಾಭರಣ ಧರಿಸುವುದು ಅಂದರೆ ಎಲ್ಲರಿಗೂ ಇಷ್ಟ. ಆದರೆ ನಾವು ಚಿನ್ನದ ಪ್ರೀತಿಯಲ್ಲಿ ಅದು ಅಸಲಿನೋ, ನಕಲಿನೋ ಎಂದು ಕಂಡು ಹಿಡಿಯುವ ಬಗ್ಗೆ ಯೋಚನೆ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿಯೇ ನಾವು ಮೋಸ ಹೋಗುತ್ತೇವೆ.
ಮೇಕೆ ಸಾಕಾಣಿಕೆಗೆ ಇದು ಬೆಸ್ಟ್ ತಳಿ, ಪ್ರತಿ ತಿಂಗಳು 50 ಸಾವಿರ ಆದಾಯ ಗ್ಯಾರಂಟಿ
ನಕಲಿ ಚಿನ್ನವನ್ನು ಕಂಡು ಹಿಡಿಯುವುದು ಹೇಗೆ?
* ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಮಾಣೀಕರಿಸುವ ಹಾಲ ಮಾರ್ಕ್ ನೀವು ಖರೀದಿಸುವ ಚಿನ್ನದ ಮೇಲೆ ಹಾಲ್ಮಾರ್ಕ್ (hallmark) ಇದೆಯಾ ಎಂಬುದನ್ನು ಮೊದಲು ಪರಿಶೀಲಿಸಿ. ಹಾಲ್ಮಾರ್ಕ್ ಇಲ್ಲದ ಚಿನ್ನವನ್ನು ಖರೀದಿಸಬೇಡಿ (Purchase Gold).
* ರಾಸಾಯನಿಕದಿಂದ ನಿನ್ನ ಅಸಲಿನೂ ನಕಲಿನೂ ಎಂದು ಕಂಡು ಹಿಡಿಯಬಹುದು. ಇದಕ್ಕಾಗಿ ನಿಮ್ಮ ಬಳಿ ಇರುವ ಚಿನ್ನವನ್ನು ಲೈಟ್ ಆಗಿ ಸ್ಕ್ರಾಚ್ ಮಾಡಿ ಅದರ ಮೇಲೆ ನೈಟ್ರಿಕ್ ಆಮ್ಲವನ್ನು ಹಾಕಿ. ಚಿನ್ನದ ಬಣ್ಣ ಬದಲಾಗದೆ ಇದ್ದರೆ ಅದು ಅಸಲಿ ಚಿನ್ನ.
ಇದೊಂದು ದಾಖಲೆ ಇದ್ದರೆ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗೆ ಸಾಲ!
* ಬಿಳಿ ವಿನೆಗರ್ ಬಳಸಿ ಅಸಲಿ ಚಿನ್ನ ಹೌದೋ ಅಲ್ಲವೋ ಎಂದು ಕಂಡು ಹಿಡಿಯಬಹುದು
* ಮ್ಯಾಗ್ನೆಟ್ ಅನ್ನು ಬಳಸಿ ಚಿನ್ನದ ಶುದ್ಧತೆ ಕಂಡು ಹಿಡಿಯಬಹುದು. ನಿಜವಾದ ಚಿನ್ನ ಮ್ಯಾಗ್ನೆಟ್ಗೆ ಆಕರ್ಷಿತವಾಗುವುದಿಲ್ಲ.
* ಇನ್ನು ಚಿನ್ನವನ್ನು ಕಾಯಿಸಿದರೆ ಅಸಲಿ ಚಿನ್ನವಾಗಿದ್ದರೆ ಅದರ ರೂಪ ಬದಲಾಗುತ್ತದೆ ನಕಲಿಯಾಗಿದ್ದರೆ ಬದಲಾಗುವುದಿಲ್ಲ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ರೂಲ್ಸ್
* ಅದೇ ರೀತಿ ನಕಲಿ ಚಿನ್ನವನ್ನು ಧರಿಸಿದರೆ ಚರ್ಮದ ಸಮಸ್ಯೆ ಉಂಟಾಗಬಹುದು ಆದರೆ ಅಸಲಿ ಚಿನ್ನ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ.
ಈ ಕೆಲವು ಸಣ್ಣ ಪುಟ್ಟ ಟ್ರಿಕ್ಸ್ ಬಳಸುವುದರ ಮೂಲಕ ನೀವು ನಿಮ್ಮ ಬಳಿ ಇರುವ ಚಿನ್ನ ಅಸಲಿಯೋ ನಕಲಿಯೋ ಎನ್ನುವುದನ್ನು ಕಂಡುಹಿಡಿಯಬಹುದು ಟ್ರೈ ಮಾಡಿ.
Here are tips to check whether gold is real or fake