ಇದೊಂದು ದಾಖಲೆ ಇದ್ದರೆ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗೆ ಸಾಲ!
ಇವತ್ತಿನ ಲೇಖನದಲ್ಲಿ ಮಹಿಳೆಯರಿಗಾಗಿ ಸರ್ಕಾರ ಜಾರಿಗೆ ತಂದಿರುವ ಒಂದು ಅತಿ ಉತ್ತಮವಾಗಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ವಂತ ದುಡಿಮೆ ಮಾಡಿ ಕೊಂಡು ತಮ್ಮ ಜೀವನವನ್ನು ತಾವು ಕಟ್ಟಿಕೊಳ್ಳಲು ಹಾಗೂ ಆರ್ಥಿಕವಾಗಿ ಭದ್ರ ಭವಿಷ್ಯವನ್ನು ಕಂಡುಕೊಳ್ಳಲು ಸರ್ಕಾರ ಮಹಿಳೆಯರಿಗಾಗಿ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಧಾನ ಮಂತ್ರಿ ಉದ್ಯೋಗಿನಿ ಯೋಜನೆ! (Pradhanmantri udyogini Yojana)
ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರು ಸ್ವಂತ ಉದ್ಯಮ (Own Business) ಆರಂಭಿಸುವುದಕ್ಕಾಗಿ ಸಾಲ ಸೌಲಭ್ಯ (Loan) ನೀಡಲು ಉದ್ಯೋಗಿನಿ ಯೋಜನೆ ಸಹಕಾರಿ ಆಗಿದೆ ಎನ್ನಬಹುದು.
ಇದರಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ (loan without interest) ಸಾಲವನ್ನು ಮಹಿಳೆಯರಿಗೆ ಕೊಡಲಾಗುತ್ತದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ 48000ಕ್ಕೂ ಹೆಚ್ಚಿನ ಮಹಿಳೆಯರು ಉದ್ಯೋಗಿನಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ರೂಲ್ಸ್
ಅರ್ಹತೆಗಳು! (Eligibility to get loan)
ಉದ್ಯೋಗಿನಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು 18ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಸ್ವಂತ ಉದ್ಯಮ ಮಾಡಲು ಉದ್ಯೋಗಿನಿ ಯೋಜನೆ ಸಹಕಾರಿಯಾಗಿದೆ.
ವಿಧವೆ ಮತ್ತು ಅಂಗವಿಕಲ ಮಹಿಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಮೂರು ಲಕ್ಷಕ್ಕಿಂತ ಹೆಚ್ಚಿಗೆ ಹಣವನ್ನು ಪಡೆಯಬಹುದು. ಹಾಗೂ ಇಂಥವರಿಗೆ ಬಹಳ ಬೇಗ ಸಾಲ ಮಂಜೂರು ಮಾಡಿ ಕೊಡಲಾಗುವುದು.
ಬೇಕಾಗಿರುವ ದಾಖಲೆಗಳು! (Needed documents)
ಅರ್ಜಿದಾರ ಮಹಿಳೆಯ ರೇಷನ್ ಕಾರ್ಡ್
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ವಿಳಾಸದ ಪುರಾವೆ
ಬ್ಯಾಂಕ್ ಖಾತೆಯ ವಿವರ
ಪಾಸ್ ಪೋರ್ಟ್ ಅಳತೆಯ ಫೋಟೋ
ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಭರ್ಜರಿ ಸುದ್ದಿ! ಗೋಲ್ಡ್ ಲೋನ್ ಬಗ್ಗೆ ಹೊಸ ಅಪ್ಡೇಟ್
ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ವಿಧವೆಯರು ಮತ್ತು ಅಂಗವಿಕಲ ಮಹಿಳೆಯರು ಅರ್ಜಿ ಸಲ್ಲಿಸಿದರೆ ಬಡ್ಡಿ ರಹಿತ ಸಾಲ ಪಡೆಯಬಹುದು ಹಾಗೂ ಸಾಮಾನ್ಯ ಮಹಿಳೆಯರಿಗೆ ಹತ್ತರಿಂದ ಹನ್ನೆರಡು ಪರ್ಸೆಂಟ್ ಬಡ್ಡಿ ದರದಲ್ಲಿ ಉದ್ಯೋಗಿನಿ ಸಾಲ ಸಿಗುತ್ತದೆ.
ಪ್ರಧಾನ ಮಂತ್ರಿ ಉದ್ಯೋಗಿನಿ ಯೋಜನೆಯ ಸಾಲು ಸೌಲಭ್ಯ ಪಡೆದುಕೊಳ್ಳಲು ನೀವು ಯಾವುದೇ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಉದ್ಯೋಗಿನಿ ಅಡಿಯಲ್ಲಿ ಸಾಲ ಸೌಲಭ್ಯ ಬೇಕು ಎಂದು ಹೇಳಿ ಮತ್ತು ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಫಾರಂ ಭರ್ತಿ ಮಾಡಿ.
ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಕೇವಲ 15 ದಿನಗಳ ಒಳಗೆ ಉದ್ಯೋಗಿ ಸಾಲ ಸೌಲಭ್ಯ ಮಂಜೂರಾಗುತ್ತದೆ. ಮುಖ್ಯವಾಗಿ ಯಾವ ಮಹಿಳೆ ಉದ್ಯೋಗಕ್ಕಾಗಿ ಸಾಲ ತೆಗೆದುಕೊಳ್ಳುತ್ತಾರೋ ಆ ಉದ್ಯಮ ಮಹಿಳೆಯರ ಹೆಸರಿನಲ್ಲಿಯೇ ಇರಬೇಕು. ಪುರುಷರ ಹೆಸರಿನಲ್ಲಿ ಇರುವ ಉದ್ಯಮಕ್ಕೆ ಸಾಲ ಸೌಲಭ್ಯ ಸಿಗುವುದಿಲ್ಲ.
ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
Such women will get a loan of up to 3 lakh rupees