Ads By Google
Business News

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ರಾತ್ರೋ ರಾತ್ರಿ ಬಡ್ಡಿದರದಲ್ಲಿ ಬದಲಾವಣೆ

ಮನೆ ಕಟ್ಟಲು (Home Loan), ಪರ್ಸನಲ್ ಕೆಲಸಗಳಿಗೆ (Personal Loan), ಮದುವೆ ಮಾಡುವುದಕ್ಕೆ, ವಾಹನ ಖರೀದಿಗೆ ಹೀಗೆ ಅನೇಕ ಕೆಲಸಗಳಿಗೆ ಸಾಲ ಬೇಕಾದಾಗ, ಯಾರದ್ದೋ ಬಳಿ ಸಾಲ ಪಡೆಯುವುದಕ್ಕಿಂತ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಉತ್ತಮ

Ads By Google

SBI Home Loan : ಸಾಮಾನ್ಯ ಜನರು ಒಂದಲ್ಲಾ ಒಂದು ಕಾರಣಕ್ಕೆ ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಹೌದು, ಮನೆ ಕಟ್ಟಲು (Home Loan), ಪರ್ಸನಲ್ ಕೆಲಸಗಳಿಗೆ (Personal Loan), ಮದುವೆ ಮಾಡುವುದಕ್ಕೆ, ವಾಹನ ಖರೀದಿಗೆ ಹೀಗೆ ಅನೇಕ ಕೆಲಸಗಳಿಗೆ ಸಾಲ ಬೇಕಾದಾಗ, ಯಾರದ್ದೋ ಬಳಿ ಸಾಲ ಪಡೆಯುವುದಕ್ಕಿಂತ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಉತ್ತಮ ಎಂದು ಲೋನ್ ಪಡೆಯುತ್ತಾರೆ.

ಲೋನ್ ಎಂದಾಗ ಯಾವುದೋ ಬ್ಯಾಂಕ್ ನಲ್ಲಿ ಪಡೆಯಲು ಸಾಧ್ಯವಿಲ್ಲ. ಸರ್ಕಾರದ ಮಾನ್ಯತೆ ಇರುವ ಒಳ್ಳೆಯ ಬ್ಯಾಂಕ್ ನಲ್ಲಿ ಲೋನ್ (Bank Loan) ಪಡೆಯಬೇಕು.. ಅಂಥ ಬ್ಯಾಂಕ್ ಗಳ ಸಾಲಿಗೆ ಸೇರುವ ಪ್ರಮುಖವಾದ ಬ್ಯಾಂಕ್ SBI.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ! ಮುಗಿಬಿದ್ದ ಜನ

ದೇಶಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಪ್ರಮುಖ ಬ್ಯಾಂಕ್ ಆಗಿರುವ SBI, ತಮ್ಮ ಗ್ರಾಹಕರಿಗೆ ಅನುಕೂಲ ಆಗುವಂಥ ಉಳಿತಾಯ ಯೋಜನೆ ನೀಡುತ್ತದೆ, ಲೋನ್ ಗಳನ್ನು ಸಹ ನೀಡುತ್ತದೆ. ಆದರೆ ಇದೀಗ ತಮ್ಮಲ್ಲಿ ಲೋನ್ ಪಡೆದಿರುವ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ SBI.

ಅದೇನು ಎಂದರೆ RBI Repo Rate ಅನ್ನು ಹೆಚ್ಚಿಗೆ ಮಾಡದೇ ಇದ್ದರು ಸಹ SBI ತಮ್ಮಲ್ಲಿನ ಹೋಮ್ ಲೋನ್ ಮೇಲಿನ ಬಡ್ಡಿದಾರವನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ.

ಹೌದು, SBI ಮಾತ್ರವಲ್ಲದೇ ಇನ್ನು ಕೆಲವು ಬ್ಯಾಂಕ್ ಗಳು ಬಡ್ಡಿದರ ಹೆಚ್ಚಿಗೆ ಮಾಡುತ್ತಿದ್ದು, ಪ್ರಸ್ತುತ ನಮಗೆ SBI ಬಡ್ಡಿದರ ಹೆಚ್ಚಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೂನ್ 15 ರಿಂದ ಹೊಸ ಬಡ್ಡಿದರ ಜಾರಿಗೆ ಬರಲಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ಹಣವನ್ನು 10 ಬೇಸಿಕ್ ಪಾಯಿಂಟ್ಸ್ ಹೆಚ್ಚಿಸಲಾಗಿದೆ, ಇದರ ಅರ್ಥ ಬಡ್ಡಿದರದಲ್ಲಿ 0.1% ಏರಿಕೆ ಆಗಿದೆ. ಈ ನಿರ್ಧಾರದಿಂದ ಎಲ್ಲಾ ಸಾಲಗಳ EMI ಕೂಡ ಜಾಸ್ತಿ ಆಗಲಿದೆ.

ಈ ಯೋಜನೆಯಲ್ಲಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ! ಈ ರೀತಿ ಅರ್ಜಿ ಸಲ್ಲಿಸಿ

ಬಡ್ಡಿದರ ದಿಢೀರ್ ಹೆಚ್ಚಳ

ನಮಗೆಲ್ಲಾ ಗೊತ್ತಿರುವ ಹಾಗೆ ಹೋಮ್ ಲೋನ್ ಗಳ (Home Loan) ಬಡ್ಡಿದರ ನಿಗದಿ ಆಗುವುದು ಸಿಬಿಲ್ ಸ್ಕೋರ್ ಆಧಾರದ ಮೇಲೆ. ಇದೀಗ SBI ಬಡ್ಡಿದರ ಏರಿಕೆ ಮಾಡಿರುವುದರಿಂದ, ಹೊಸ ಬಡ್ಡಿದರ ಹೇಗಿದೆ ಎಂದು ನೋಡುವುದಾದರೆ..

CIBIL Score 750 ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ 9.55% ಬಡ್ಡಿದರ ಇರುತ್ತದೆ, ಸಿಬಿಲ್ ಸ್ಕೋರ್ 700 ಇಂದ 749ರವರೆಗೂ ಇದ್ದರೆ 9.75% ಬಡ್ಡಿ ಇರಲಿದೆ. ಈ ಮೂಲಕ ಹೋಮ್ ಲೋನ್ ಬಡ್ಡಿ ಜಾಸ್ತಿ ಆಗಲಿದೆ. ಅಷ್ಟೇ ಅಲ್ಲದೇ, 1 ವರ್ಷಕ್ಕೆ ಸಾಲ ಪಡೆಯುವವರಿಗೆ ಬಡ್ಡಿದರ ಜಾಸ್ತಿ ಆಗಿದ್ದು, 8.65% ಇಂದ 8.75% ಗೆ ಏರಿಕೆ ಆಗಿದೆ.

ಅಪ್ಡೇಟ್ ಮಾಡದಿದ್ರೆ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಲಿದೆಯೇ? ಇಲ್ಲಿದೆ ಪ್ರಮುಖ ಮಾಹಿತಿ

ಎರಡು ವರ್ಷಗಳ ಕಡಿಮೆ ಅವಧಿ ಸಾಲದ ಮೇಲಿನ ಬಡ್ಡಿದರ 8.75% ಇಂದ 8.85% ಗೆ ಏರಿಕೆ ಆಗಿದೆ. 3 ವರ್ಷಗಳ ಕಡಿಮೆ ಅವಧಿಯ ಸಾಲಕ್ಕೆ ಬಡ್ಡಿದರವು 8.85% ಇಂದ 8.95% ಗೆ ಏರಿಕೆ ಆಗಲಿದೆ. ಜೂನ್ 15ರಿಂದಲೇ ಈ ಹೊಸ ಬಡ್ಡಿದರ ಜಾರಿಗೆ ಬಂದಿದೆ.

ಒಂದು ಲಕ್ಷದ ಗಡಿಯಲ್ಲಿ ಬೆಳ್ಳಿ ಬೆಲೆ, ಕಡಿಮೆಯಾಗದ ಚಿನ್ನದ ಬೆಲೆ! ಇಲ್ಲಿದೆ ಇತ್ತೀಚಿನ ದರಗಳ ವಿವರ

ಎಲ್ಲರೂ ಬಡ್ಡಿದರ ಯಾವಾಗ ಕಡಿಮೆ ಆಗುತ್ತದೆ ಎಂದು ಕಾಯುತ್ತಿದ್ದರು, ಆದರೆ ಈಗ ಬಡ್ಡಿದರ ಹೆಚ್ಚಾಗಿದ್ದು ಜನರಿಗೆ ಶಾಕ್ ನೀಡಿದ ಹಾಗೆ ಆಗಿದೆ.

Here’s a big update for State Bank customers, changes in interest rate

Follow us On

FaceBook Google News
Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere