Business News

ಬಡವರ ಕೈಗೆಟುವ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಭಾರೀ ಮಾರಾಟ

ಹೀರೋ ಕಂಪನಿಯಿಂದ ಬಡವರಿಗೆ ಲಭ್ಯವಾಗುವಂತ ಅಗ್ಗದ ದರದಲ್ಲಿ ಹೊಸ VIDA VX2 ಇ-ಸ್ಕೂಟರ್ ಬಿಡುಗಡೆ, ಉತ್ತಮ ಮೈಲೇಜ್, ಶಕ್ತಿಯುತ ಬ್ಯಾಟರಿ ಹಾಗೂ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬಂದಿದೆ.

Publisher: Kannada News Today (Digital Media)

  • ₹59,490 ರಿಂದ ಆರಂಭವಾಗುವ ಅಗ್ಗದ ಇ-ಸ್ಕೂಟರ್
  • 142 ಕಿಮೀ ಮೈಲೇಜ್ ನೀಡುವ ಶಕ್ತಿಯುತ ಬ್ಯಾಟರಿ
  • ಕ್ಲೌಡ್‌ ಕನೆಕ್ಟ್, ಜಿಪಿಎಸ್‌ ಟ್ರ್ಯಾಕ್ ಸೇರಿದಂತೆ ನವೀನ ವೈಶಿಷ್ಟ್ಯಗಳು

ಹೀರೋ ಮೋಟೊಕಾರ್ಪ್ ತನ್ನ ಹೊಸ Electric Scooter VIDA VX2 ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಬಡವರಿಗೂ ಬಳಸಬಹುದಾದ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಈ ಹೊಸ ಸ್ಕೂಟರ್, ಶಕ್ತಿಶಾಲಿ ಬಾಟರಿ, ಉತ್ತಮ ಮೈಲೇಜ್ ಹಾಗೂ ಆಧುನಿಕ ಫೀಚರ್ಸ್‌ನಿಂದ ಭರ್ಜರಿ ಸ್ಪರ್ಧೆಯನ್ನೇ ಹುಟ್ಟುಹಾಕಿದೆ.

ಹೊಸ VIDA VX2 ಎರಡು ರೂಪಾಂತರಗಳಲ್ಲಿ ಲಭ್ಯವಿದೆ – VX2 Go ಮತ್ತು VX2 Plus. ಈ ಎರಡೂ ಸ್ಟ್ಯಾಂಡರ್ಡ್ ಹಾಗೂ Battery as a Service (BaaS) ಮಾದರಿಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿ VX2 Go ₹99,490 ಹಾಗೂ VX2 Plus ₹1.10 ಲಕ್ಷ (ಎಕ್ಸ್‌ಶೋರೂಂ) ದರ ಹೊಂದಿವೆ. BaaS ಪ್ಲ್ಯಾನ್‌ನಲ್ಲಿ ಇದೇ VX2 Go ₹59,490 ಮತ್ತು VX2 Plus ₹64,990 ಕ್ಕೆ ದೊರೆಯುತ್ತವೆ.

ಬಡವರ ಕೈಗೆಟುವ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಭಾರೀ ಮಾರಾಟ

ಇದನ್ನೂ ಓದಿ: ಬಡ್ಡಿ ಮೇಲೆ ಬಡ್ಡಿ + ಗ್ಯಾರಂಟಿ ಲಾಭ! ಪೋಸ್ಟ್ ಆಫೀಸ್‌ನ ಜಾಕ್‌ಪಾಟ್ ಯೋಜನೆ

ಬ್ಯಾಟರಿ ಬಳಕೆದಾರರು ಪ್ರತಿ ಕಿಮೀ ₹0.96 ಪಾವತಿಸಬೇಕಾಗುತ್ತದೆ ಎಂಬುದು BaaS ಪ್ಲ್ಯಾನ್‌ನ ವೈಶಿಷ್ಟ್ಯ. VX2 Go ನಲ್ಲಿ 2.2 kWh ಬ್ಯಾಟರಿ ಇದೆ, ಇದು ಫುಲ್ ಚಾರ್ಜ್‌ನಲ್ಲಿ 92 ಕಿಲೋಮೀಟರ್ ಓಡುತ್ತದೆ. VX2 Plus ನಲ್ಲಿ 3.4 kWh ಶಕ್ತಿಯ ಬ್ಯಾಟರಿ ಇದ್ದು, 142 ಕಿಮೀ ಮೈಲೇಜ್ ನೀಡುತ್ತದೆ.

ಫಾಸ್ಟ್ ಚಾರ್ಜಿಂಗ್ ಬಳಸಿದರೆ 1 ಗಂಟೆಯಲ್ಲಿ 0-80% ಚಾರ್ಜ್ ಆಗುತ್ತದೆ. ನಾರ್ಮಲ್ ಚಾರ್ಜರ್ ಬಳಸಿದರೆ ಅದೇ ಪ್ರಮಾಣದ ಚಾರ್ಜ್ ಆಗಲು ಸುಮಾರು 6 ಗಂಟೆಗಳ ಸಮಯ ಬೇಕಾಗುತ್ತದೆ. ಇದರಿಂದ ಇದು ನಗರಗಳಲ್ಲಿ ಬಳಸುವವರಿಗೆ ಬಹುಪಯೋಗಿ ಆಯ್ಕೆ ಆಗಿದೆ.

ಇದನ್ನೂ ಓದಿ: ಜುಲೈ 15ರಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ನಿಯಮ ಬದಲಾವಣೆ! ಹೊಸ ರೂಲ್ಸ್

VIDA VX2 Electric Scooter

ವಿನ್ಯಾಸದ ಮಾತುಬಂದರೆ, VX2 ಸರಳ ಮತ್ತು ಸ್ಟೈಲಿಶ್ ಲುಕ್ ಹೊಂದಿದ್ದು, ಗ್ರೇ, ಬ್ಲೂ, ರೆಡ್, ಯೆಲ್ಲೋ ಮತ್ತು ಬ್ಲ್ಯಾಕ್ ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೆ ಉತ್ತಮ ಹೆಡ್‌ಲೈಟ್, ಡಿಆರ್‌ಎಲ್‌ ಲೈಟ್ ಹಾಗೂ ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರುತ್ತದೆ.

ಇನ್ನು ಬಿಲ್ಟ್ ಇನ್ ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ, ಅಂಡರ್ ಸೀಟ್ ಸ್ಟೋರೇಜ್, ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್, ಡಿಸ್ಕ್ ಬ್ರೇಕ್ ಹಾಗೂ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಇದರ ಹೆಚ್ಚುವರಿ ಆಕರ್ಷಣೆಗಳು.

ಇದನ್ನೂ ಓದಿ: ಹೊಸ ಫ್ಯಾಮಿಲಿ ಸ್ಕೂಟರ್ ಬಿಡುಗಡೆ, ಕಮ್ಮಿ ಬೆಲೆ ಅನ್ನೋದೆ ಇದರ ಸ್ಪೆಷಲ್!

ಹೀರೋ ವಿಡಾ ಸರಣಿಯಲ್ಲಿ ಈಗಾಗಲೇ ಲಭ್ಯವಿರುವ V2 Light, V2 Plus ಮತ್ತು V2 Pro ಮಾದರಿಗಳಿಗೂ ಗ್ರಾಹಕರ ಸ್ಪಷ್ಟ ಆಯ್ಕೆ ಇದೆ. ಈ ಮಾದರಿಗಳ ಬೆಲೆ ₹96,000 ರಿಂದ ₹1.35 ಲಕ್ಷವರೆಗೆ ಇದೆ. ಪೂರ್ತಿ ಚಾರ್ಜ್‌ನಲ್ಲಿ 94 ರಿಂದ 165 ಕಿಮೀ ವರಗೆ ಮೈಲೇಜ್ ನೀಡುತ್ತವೆ.

ಒಟ್ಟಿನಲ್ಲಿ, ಹೊಸ VIDA VX2 ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ತಂತ್ರಜ್ಞಾನ, ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಅಗ್ಗದ ದರದಿಂದ ಎಲ್ಲ ವರ್ಗದ ಜನರಿಗೆ ಸೂಕ್ತ ಆಯ್ಕೆಯಾಗುತ್ತಿದೆ. ವಿಶೇಷವಾಗಿ, ದಿನನಿತ್ಯದ ಪ್ರಯಾಣಕ್ಕಾಗಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದು ಖಂಡಿತವಾಗಿಯೂ ಲಾಭದಾಯಕ ಮಾದರಿಯಾಗಿದೆ.

Hero Launches Affordable VIDA VX2 Electric Scooter

English Summary

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿ, ಚಿನ್ನದ ಬೆಲೆ (Gold Price), ಬ್ಯಾಂಕ್ ಲೋನ್ (Bank Loan) ಅಪ್ಡೇಟ್‌ಗಳು, ಪರ್ಸನಲ್ ಲೋನ್ (Personal Loan), ಫೈನಾನ್ಸ್ ಟಿಪ್ಸ್ (Finance Tips), ಮ್ಯೂಚುಯಲ್ ಫಂಡ್ಸ್ (Mutual Funds), ಇನ್ಸೂರೆನ್ಸ್ (Insurance) ಸುದ್ದಿಗಳಿಗಾಗಿ ಕನ್ನಡ ನ್ಯೂಸ್ ಟುಡೇ ತಪ್ಪದೆ ಭೇಟಿ ನೀಡಿ.

Related Stories