ಬ್ಯಾಂಕ್ ಲೋನ್ ತಗೊಂಡು ಕಟ್ಟೋಕೆ ಆಗಲಿಲ್ಲ ಅಂದ್ರೆ ಬ್ಯಾಂಕ್ ಏನ್ ಮಾಡುತ್ತೆ?

ಬ್ಯಾಂಕುಗಳಿಂದ ಲೋನ್ ಪಡೆದವರು ಸಾಲ ಪಾವತಿಸಲು ವಿಫಲವಾದರೆ, ಬ್ಯಾಂಕುಗಳು ಯಾವ ಕ್ರಮ ಕೈಗೊಳ್ಳುತ್ತವೆ? ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುವ ಬ್ಯಾಂಕ್ ರಿಕವರಿ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ.

  • ಬ್ಯಾಂಕ್ ಲೋನ್ ತೀರಿಸದಿದ್ದರೆ ಆಸ್ತಿಯನ್ನು ವಶಪಡಿಸಿಕೊಳ್ಳುವ ಸಾಧ್ಯತೆ
  • 60 ದಿನಗಳ ಗಡುವಿನ ನಂತರ ಬ್ಯಾಂಕ್ ತೀವ್ರ ಕ್ರಮಕ್ಕೆ
  • ವಶಪಡಿಸಿಕೊಂಡ ಆಸ್ತಿಯನ್ನು ಹರಾಜು ಮಾಡಿ ಸಾಲ ಮರುಪಾವತಿ

Bank Loan Recover : ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಲೋನ್ ಪಡೆಯುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೊಸ ಮನೆ ಖರೀದಿಸಲು ಅಥವಾ ನಿರ್ಮಿಸಲು ಬಹುತೇಕರು ಬ್ಯಾಂಕುಗಳಿಂದ ಸಾಲ (Home Loan) ಪಡೆಯುತ್ತಾರೆ.

ಆದಾಗ್ಯೂ, ಉದ್ಯೋಗ ಕಳೆದುಕೊಳ್ಳುವುದು, ಆರ್ಥಿಕ ಸಮಸ್ಯೆಗಳು, ಆರೋಗ್ಯ ತೊಂದರೆಗಳು ಮುಂತಾದ ಕಾರಣಗಳಿಂದ ಈಎಂಐ ಪಾವತಿಸಲು ವಿಳಂಬವಾಗಬಹುದು. ಇದರಿಂದ ಆಸ್ತಿಯನ್ನು ಕಳೆದುಕೊಳ್ಳುವ ಆತಂಕ ಉಂಟಾಗುತ್ತದೆ.

ಸಾಧಾರಣವಾಗಿ, ಒಂದು ಅಥವಾ ಎರಡು ತಿಂಗಳ ಸಾಲದ ಕಂತು ತಡವಾದರೂ ಬ್ಯಾಂಕ್ ಪ್ರಾಥಮಿಕ ಎಚ್ಚರಿಕೆ ನೋಟಿಸ್ ಕಳಿಸುತ್ತದೆ. ಆದರೆ ಮೂರು ತಿಂಗಳಿಗೂ ಅಧಿಕ ಈಎಂಐ ಪಾವತಿ (Loan EMI) ವಿಳಂಬವಾದರೆ, ಬ್ಯಾಂಕ್ ನಿಮ್ಮ ಸಾಲವನ್ನು ‘ನಿಷ್ಕ್ರಿಯ ಆಸ್ತಿ’ಯಾಗಿ ಪರಿಗಣಿಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲು ತಯಾರಾಗುತ್ತದೆ.

ಗಗನ್ನಕ್ಕೇರಿದ್ದ ಚಿನ್ನದ ಬೆಲೆ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿತ! ಗ್ರಾಹಕರಿಗೆ ಸಿಹಿ ಸುದ್ದಿ

60 ದಿನಗಳ ಅಂತಿಮ ಗಡುವು:

ಬ್ಯಾಂಕುಗಳು ಸಾಲ ವಸೂಲಿಗಾಗಿ ಕಾಯ್ದೆಯನ್ವಯ, 60 ದಿನಗಳ ಅಂತಿಮ ನೋಟಿಸ್ ಕಳಿಸುತ್ತವೆ. ಈ ಅವಧಿಯೊಳಗೆ ಸಾಲ ಪಾವತಿಸಲು ವೈಫಲ್ಯ ಕಂಡುಬಂದರೆ, ಬ್ಯಾಂಕು ನಿಮ್ಮ ಆಸ್ತಿಯನ್ನು ವಶಪಡಿಸಿಕೊಂಡು ಹರಾಜು ನಡೆಸಬಹುದು. ಈ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚಿಸುವ ಅವಕಾಶವಿರುತ್ತದೆ.

ಆಸ್ತಿ ಹರಾಜು ಪ್ರಕ್ರಿಯೆ:

ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಂಡ ನಂತರ, ಅದು ನ್ಯಾಯಸಮ್ಮತವಾಗಿ ಅಂದಾಜು ಮೌಲ್ಯ ನಿಗದಿಪಡಿಸಿ, ಪತ್ರಿಕೆಗಳಲ್ಲಿ ಹರಾಜು ಮಾಹಿತಿ ಪ್ರಕಟಿಸುತ್ತದೆ. ಬೆಲೆಯ ಕುರಿತು ನೀವು ಬೇರೆ ಆಯ್ಕೆಗಳಿಗಾಗಿ ಬ್ಯಾಂಕ್ ಜೊತೆ ಸಮಾಲೋಚನೆ ಮಾಡಬಹುದು. ಹರಾಜಿನಲ್ಲಿ ಆಸ್ತಿಯ ಮಾರಾಟದಿಂದ ಬಂದ ಹಣವನ್ನು ಮೊದಲು ಬ್ಯಾಂಕ್ ತಮ್ಮ ಸಾಲ ಮರುಪಾವತಿಗೆ ಬಳಸುತ್ತದೆ. ಉಳಿದ ಹಣ ನಿಮ್ಮ ಖಾತೆಗೆ ಜಮೆಯಾಗಬಹುದು.

Bank Loan Recovery

ಬರೋಬ್ಬರಿ 248 ಕಿ.ಮೀ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು

ನಿಮ್ಮ ಆಸ್ತಿಯ ಹರಾಜು ತಡೆಹಿಡಿಯಲು, ನೀವು ಖುದ್ದಾಗಿ ನಿಮ್ಮ ಮನೆ ಮಾರಾಟ ಮಾಡಬಹುದು. ಇದರಿಂದ ನಿಮ್ಮ ಆಸ್ತಿಗೆ ಉತ್ತಮ ಬೆಲೆ ದೊರಕಬಹುದು. ಬ್ಯಾಂಕುಗಳಿಗೆ ಸಾಲ ವಾಪಸು ಪಡೆಯುವುದು ಮುಖ್ಯವಾಗಿರುವುದರಿಂದ, ಅವರು ನಿಮ್ಮ ಆಸ್ತಿಯ ಸರಿಯಾದ ಮೌಲ್ಯ ನಿರ್ಧಾರ ಮಾಡುವುದಿಲ್ಲ. ಹಾಗಾಗಿ ನೀವು ಸ್ವತಃ ಮಾರಾಟ ಮಾಡುವುದು ಉತ್ತಮ ಆಯ್ಕೆ.

ಆರ್ಥಿಕ ಸಂಕಷ್ಟ ತಪ್ಪಿಸಲು ಎಚ್ಚರಿಕೆ:

ನಿಮ್ಮ ತಿಂಗಳ ಆದಾಯದ 40% ಕ್ಕಿಂತ ಹೆಚ್ಚು ಸಾಲ ಮಾಡಬಾರದು. ಹೆಚ್ಚಿದರೆ ಯಾವುದೇ ಆರ್ಥಿಕ ತೊಂದರೆ ಉಂಟಾದಾಗ, ಸಾಲ ಪಾವತಿ ವಿಳಂಬವಾಗಬಹುದು. ಸಾಧ್ಯವಾದಷ್ಟು ಹೆಚ್ಚಿನ ಡೌನ್ ಪೇಮೆಂಟ್ ಕೊಡುವುದು ಉತ್ತಮ. ಹೀಗೆ ಮಾಡುವುದರಿಂದ ಸಾಲದ (Bank Loan) ಮೊತ್ತ ಕಡಿಮೆಯಾಗುತ್ತದೆ ಮತ್ತು ಪಾವತಿಸಲು ಸುಲಭವಾಗುತ್ತದೆ.

Home Loan Default, How Banks Recover Loans in India

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories