ಒಂದೇ ಫೋನ್ ನಂಬರ್ ಎಷ್ಟು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬಹುದು? ಇಲ್ಲಿದೆ ಬಿಗ್ ಅಪ್ಡೇಟ್
ಆಧಾರ್ ಕಾರ್ಡ್ (Aadhaar Card) ಇಲ್ಲದೆಯೇ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಅಥವಾ ಬ್ಯಾಂಕ್ (Bank) ಕೆಲಸಗಳು ಅಥವಾ ಇನ್ಯಾವುದೇ ಪ್ರಮುಖ ಕೆಲಸಗಳು ಯಾವುದು ಸಹ ನಡೆಯುವುದಿಲ್ಲ.
Aadhaar Update : ಭಾರತ ದೇಶದ ಪ್ರಜೆಗಳ ಬಳಿ ಇರಬೇಕಾದ ಬಹಳ ಮುಖ್ಯವಾದ ದಾಖಲೆ ಆಧಾರ್ ಕಾರ್ಡ್ ಆಗಿದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗು ಎಲ್ಲರ ಬಳಿ ಆಧಾರ್ ಕಾರ್ಡ್ ಇರಲೇಬೇಕು. ಆಧಾರ್ ಕಾರ್ಡ್ (Aadhaar Card) ಇಲ್ಲದೆಯೇ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಅಥವಾ ಬ್ಯಾಂಕ್ (Bank) ಕೆಲಸಗಳು ಅಥವಾ ಇನ್ಯಾವುದೇ ಪ್ರಮುಖ ಕೆಲಸಗಳು ಯಾವುದು ಸಹ ನಡೆಯುವುದಿಲ್ಲ. ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸದೊಂದು ಅಪ್ಡೇಟ್ ಸಿಕ್ಕಿದೆ..
ಆಧಾರ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್!
ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ ಆಗಿರುವುದರಿಂದ ಸರ್ಕಾರವು ಇದರ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತದೆ. ಆಗಾಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ಅಪ್ಡೇಟ್ ಗಳನ್ನು ಸಹ ನೀಡುತ್ತದೆ.
10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾಧನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
ಇತ್ತೀಚೆಗೆ UIDAI ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಬಗ್ಗೆ ಮಹತ್ವದ ಮಾಹಿತಿ ನೀಡಿತ್ತು, 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು ಎಂದು ತಿಳಿಸಲಾಗಿತ್ತು. ಆಧಾರ್ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನ ಆಗಿದೆ.
UIDAI ಇಂದ ಹೊಸ ಮಾಹಿತಿ!
ಈ ಮಾಹಿತಿ ಒಂದು ಕಡೆಯಾದರೆ ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ಹೊಸ ಅಪ್ಡೇಟ್ UIDAI ಇಂದ ಸಿಕ್ಕಿದೆ. ಅದೇನು ಎಂದರೆ ಒಂದು ಫೋನ್ ನಂಬರ್ (Mobile Number) ಅನ್ನು ಎಷ್ಟು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಬಹುದು ಎನ್ನುವ ಬಗ್ಗೆ ಆಗಿದೆ. ಹಾಗಿದ್ದಲ್ಲಿ ಒಬ್ಬ ವ್ಯಕ್ತಿಯ ಫೋನ್ ನಂಬರ್ ಅನ್ನು ಎಷ್ಟು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ, ಆ ಪ್ರಶ್ನೆಗೆ UIDAI ನೀಡಿರುವ ಉತ್ತರ ಏನು ಎಂದು ತಿಳಿಯೋಣ..
ಹೀಗೆ ಮಾಡಿ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ 800 ದಾಟುವುದು ಖಚಿತ! ಈ ಸರಳ ಸಲಹೆಗಳನ್ನು ಅನುಸರಿಸಿ
ಹಿರಿಯರು ಮತ್ತು ಮಕ್ಕಳ ಬಳಿ ಆಧಾರ್ ಕಾರ್ಡ್
ನಮಗೆಲ್ಲ ಗೊತ್ತಿರುವ ಹಾಗೆ ಮನೆಯ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗು ಎಲ್ಲರಿಗೂ ಆಧಾರ್ ಕಾರ್ಡ್ ಮಾಡಿಸಲೇಬೇಕು, ದೊಡ್ಡವರ ಹತ್ತಿರ ಮೊಬೈಲ್ ಫೋನ್ ಇದ್ದೇ ಇರುತ್ತದೆ, ಅವುಗಳನ್ನು ಲಿಂಕ್ ಮಾಡಬಹುದು. ಆದರೆ ಸಣ್ಣ ಮಕ್ಕಳ ಬಳಿ ಮೊಬೈಲ್ ಫೋನ್ ಇರುವುದಿಲ್ಲ, ಆಗ ತಂದೆ ತಾಯಿಯ ಫೋನ್ ನಂಬರ್ ಕೊಡಬೇಕಾಗುತ್ತದೆ. ಹಾಗೆಯೇ ವೃದ್ಧರ ಬಳಿ ಕೂಡ ಫೋನ್ ಇರುವುದಿಲ್ಲ. ಹೀಗಾದಾಗ ಏನು ಮಾಡಬೇಕು ಎನ್ನುವ ಗೊಂದಲವೂ ಇದೆ..
ಒಂದು ಫೋನ್ ನಂಬರ್ ಇಷ್ಟು ಆಧಾರ್ ಕಾರ್ಡ್ ಗೆ ಮಾತ್ರ ಲಿಂಕ್ ಮಾಡಿ:
ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಅನ್ನು ಲಿಂಕ್ ಮಾಡಲೇಬೇಕು, ಹಾಗೆಯೇ ಒಂದು ಫೋನ್ ನಂಬರ್ ಅನ್ನು ಎರಡು ಅಥವಾ ಮೂರು ಆಧಾರ್ ಕಾರ್ಡ್ ಗೆ ಮಾತ್ರ ಲಿಂಕ್ ಮಾಡಬಹುದು. ಅದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡುವ ಹಾಗಿಲ್ಲ. ಇದು UIDAI ನಿಯಮ ಆಗಿದ್ದು, ಜನರು ನೆನಪಿಟ್ಟುಕೊಳ್ಳಬೇಕು..
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ 1.35 ಲಕ್ಷದವರೆಗೆ ರಿಯಾಯಿತಿ, ಈ ಆಫರ್ ಈ ತಿಂಗಳ ಅಂತ್ಯದವರೆಗೆ ಮಾತ್ರ
How many Aadhaar cards can be linked to a single phone number