ಬ್ಯಾಂಕ್ ಬದಲು ಪೋಸ್ಟ್ ಆಫೀಸ್ ನಲ್ಲಿ ಎರಡು ಲಕ್ಷ ಇಟ್ಟರೆ ಸಿಗುವ ಲಾಭ ಎಷ್ಟು ಗೊತ್ತಾ?
- ಐದು ವರ್ಷಗಳ ಎಫ್ ಡಿ ಹೂಡಿಕೆಗೆ 7.5% ಬಡ್ಡಿ ದರ
- ಪೋಸ್ಟ್ ಆಫೀಸ್ ಸ್ಥಿರ ಠೇವಣಿ ಯಾವತ್ತೂ ಸೇಫ್ ಹೂಡಿಕೆ
- ಯೋಜನೆ ಮುಗಿದ ನಂತರವೂ ಐದು ವರ್ಷಗಳವರೆಗೆ ವಿಸ್ತರಿಸಬಹುದು
Post Office Fixed Deposit: ನಿಮ್ಮ ಬಳಿ ಒಂದು ಬಲ್ಕ್ ಅಮೌಂಟ್ ಇದ್ದರೆ ಅದನ್ನ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಈ ರೀತಿ ಮಾಡಿದರೆ ಮಾತ್ರ ಉತ್ತಮ ಆದಾಯವನ್ನು ಗಳಿಸಿಕೊಳ್ಳಲು ಸಾಧ್ಯ. ಆದರೆ ಕೆಲವರು ತಕ್ಷಣ ಹೆಚ್ಚಿನ ಆದಾಯ ಗಳಿಸಬೇಕು ಎನ್ನುವ ಕಾರಣಕ್ಕೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ.
ಆದರೆ ಇದು ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ ಮಾರುಕಟ್ಟೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಬಳಿ ಇರುವ ಹಣ ಯಾವುದೇ ಕಾರಣಕ್ಕೂ ಯಾವುದೇ ಅಪಾಯವಿಲ್ಲದೆ ನಿಮ್ಮ ಕೈ ಸೇರಬೇಕು ಅಂದ್ರೆ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಬೇಕು.
60 ಲಕ್ಷ ರೂಪಾಯಿ ಹೋಂ ಲೋನ್ ತಗೊಂಡ್ರೆ ತಿಂಗಳಿಗೆ ಕಟ್ಟಬೇಕಾದ EMI ಎಷ್ಟು?
ಪೋಸ್ಟ್ ಆಫೀಸ್ ಎಫ್ಡಿ!
ಎಸ್ಐಪಿ ಎಲ್ಲಿ ಸಾಕಷ್ಟು ಜನ ಹೂಡಿಕೆ ಮಾಡುತ್ತಾರೆ. ಇದು ತುಸು ಅಪಾಯಕಾರಿ. ಎಲ್ಲಾ ರಿಸ್ಕ್ ತೆಗೆದುಕೊಳ್ಳಲು ನೀವು ಸಿದ್ಧರಿದ್ದರೆ ಮಾತ್ರ ಇಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಆದರೆ ನಿಮಗೆ ಸರಿಯಾದ ಸಮಯದಲ್ಲಿ ಆದಾಯ ಬರಬೇಕು ಹಾಗೂ ನೀವು ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿ ಇರಬೇಕು ಅಂದ್ರೆ ಅಂಚೆ ಕಚೇರಿಯ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇಲ್ಲಿ ನೀವು ಎರಡು ಲಕ್ಷ ರೂಪಾಯಿಗಳ ಎಫ್ ಡಿ ಇಟ್ಟರೆ ಎಷ್ಟು ಆದಾಯ ಗಳಿಸಬಹುದು ಎಂಬುದರ ಲೆಕ್ಕಾಚಾರ ಇಲ್ಲಿದೆ.
ಅಂಚೆ ಕಚೇರಿಯಲ್ಲಿ ಒಂದು ವರ್ಷ ಎರಡು, ಮೂರು ಹಾಗೂ ಐದು ವರ್ಷಗಳ ಅವಧಿಗೆ ಠೇವಣಿ ಮಾಡಬಹುದು. ಕನಿಷ್ಠ ನೂರು ರೂಪಾಯಿಗಳಿಂದ ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಎಫ್ ಡಿ ಯಲ್ಲಿ ಹೂಡಿಕೆ ಮಾಡಬಹುದು.
ಒಂದು ವರ್ಷಕ್ಕೆ ಎಫ್ ಡಿ ಹೂಡಿಕೆ ಮಾಡಿದ್ರೆ 6.9% ಬಡ್ಡಿ, ಎರಡು ವರ್ಷಗಳಿಗೆ 7% ಬಡ್ಡಿ, ಮೂರು ವರ್ಷಗಳ ಎಫ್ ಡಿ ಗೆ 7.1% ಬಡ್ಡಿ ಹಾಗೂ ಐದು ವರ್ಷಗಳ ಎಫ್ ಡಿ ಗೆ 7.5% ಬಡ್ಡಿಯನ್ನು ಕೊಡಲಾಗುವುದು.
ಐದು ವರ್ಷಗಳಿಗೆ ಎಫ್ ಡಿ ಇಟ್ಟರೆ ಸಿಗುವ ರಿಟರ್ನ್ ಎಷ್ಟು?
ಎರಡು ಲಕ್ಷ ರೂಪಾಯಿಯನ್ನು ಅಂಚೆ ಕಚೇರಿಯಲ್ಲಿ ಐದು ವರ್ಷಗಳವರೆಗೆ ಎಫ್‌ಡಿ (Fixed Deposit) ಇಟ್ಟರೆ, 2,89, 999 ರಿಟರ್ನ್ ಪಡೆಯುತ್ತೀರಿ. ಅಂದರೆ ಎರಡು ಲಕ್ಷ ಠೇವಣಿ ಮೇಲೆ, 89, 999 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯುತ್ತೀರಿ.
ಇನ್ನು ಯೋಜನೆ ಮುಕ್ತಾಯವಾದ ನಂತರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿರುತ್ತದೆ. ಆಗ ನಿಮಗೆ ಸಿಗುವ ಒಟ್ಟು ಮೊತ್ತ 4,20,470 ರೂ.ಗಳು.
ಇನ್ನು ಐದು ಲಕ್ಷ ರೂಪಾಯಿಗಳನ್ನು 10 ವರ್ಷಗಳಿಗೆ ಹೂಡಿಕೆ ಮಾಡಿದರೆ ಸಿಗುವ ಬಡ್ಡಿ 5,51,175 ರೂಪಾಯಿಗಳು. ಕೊಟ್ಟಿನಲ್ಲಿ ಅಪಾಯ ಮುಕ್ತವಾಗಿರುವ ಅಂಚೆ ಕಚೇರಿಯ ಎಫ್ ಡಿ ಯಲ್ಲಿ ಹೂಡಿಕೆ ಮಾಡಿದರೆ ನೀವು ಹೆಚ್ಚು ಹಣವನ್ನು ಉಳಿತಾಯ ಮಾಡಬಹುದು.
how much profit you can earn by depositing two lakh rupees in the post office