ನಿಮ್ಮ ಆಧಾರ್ ಕಾರ್ಡ್ ಇಂದ ಎಷ್ಟು ಸಿಮ್ ಕಾರ್ಡ್ ಖರೀದಿ ಆಗಿದೆ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
ಈಗ ಬಹುತೇಕ ಎಲ್ಲರ ಬಳಿ ಸ್ಮಾರ್ಟ್ ಫೋನ್ (Smartphone) ಇದ್ದೇ ಇರುತ್ತದೆ. ಹಳ್ಳಿಗಳಿಂದ ಸಿಟಿವರೆಗು ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಹೀಗಿದ್ದಾಗ ಸ್ಮಾರ್ಟ್ ಫೋನ್ ಇಂದ ಇಂಟರ್ನೆಟ್ ಬಳಕೆ ಮಾಡಬೇಕು, ಕಾಲ್ ಮಾಡಬೇಕು ಎಂದರೆ ಸಿಮ್ ಕಾರ್ಡ್ (Sim Card) ಇರಲೇಬೇಕು, ಇದು ಅತ್ಯಾವಶ್ಯಕವಾದ ವಸ್ತು ಆಗಿದೆ. ಜೊತೆಗೆ ಈಗ ಒಬ್ಬ ವ್ಯಕ್ತಿಯ ಬಳಿ ಒಂದಕ್ಕಿಂತ ಹೆಚ್ಚು ಸ್ಮಾರ್ಟ್ ಫೋನ್ ಗಳು ಸಹ ಇದ್ದು, ಅವರುಗಳು ಹೆಚ್ಚು ಸಿಮ್ ಗಳ ಬಳಕೆ ಸಹ ಮಾಡುತ್ತಾರೆ.
ಈಗ ಸಿಮ್ ಖರೀದಿ ವಿಚಾರಕ್ಕೆ ನಿಯಮಗಳ ಬದಲಾವಣೆ ಕೂಡ ಆಗಿದ್ದು, ಆಧಾರ್ ಕಾರ್ಡ್ ಇಲ್ಲದೇ ಸಿಮ್ ಖರೀದಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಾವು ಖರೀದಿ ಮಾಡುವ ಸಿಮ್ ಆಧಾರ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಬೇಕು, ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸರ್ಕಾರ ಒಂದು ಪ್ರಮುಖವಾದ ನಿಯಮವನ್ನು ಜಾರಿಗೆ ತಂದಿದ್ದು, ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಇಂದ 9 ಸಿಮ್ ಗಳನ್ನು ಮಾತ್ರ ಖರೀದಿ ಮಾಡಬಹುದು, ಅದಕ್ಕಿಂತ ಹೆಚ್ಚಿನ ಖರೀದಿ ಸಾಧ್ಯವಿಲ್ಲ..
ಗೋಲ್ಡ್ ಪ್ರಿಯರಿಗೆ ಬಿಗ್ ರಿಲೀಫ್, ₹1,520 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಫುಲ್ ಡೀಟೇಲ್ಸ್
ಇದರಲ್ಲಿ ಕೆಲವು ಸ್ಕ್ಯಾಮ್ ಗಳು ಕೂಡ ನಡೆಯುತ್ತಿದೆ, ಯಾವುದೇ ವ್ಯಕ್ತಿಯ ಬಳಿ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಅವರು ಅದನ್ನು ಬಳಸಿ ಸಿಮ್ ಖರೀದಿ ಮಾಡಬಹುದು. ಹಾಗಾಗಿ ನೀವು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.
ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಖರೀದಿ ಮಾಡಿದ್ದರೆ? ನೀವು ಅದನ್ನು ತಿಳಿದುಕೊಳ್ಳುವುದು ಉತ್ತಮ. ಹಾಗಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಗಳ ಖರೀದಿ ಆಗಿದೆ ಎಂದು ತಿಳಿಯುವುದು ಹೇಗೆ ಎಂದು ಇಂದು ನೋಡೋಣ..
ಮೊದಲೆಲ್ಲಾ ಸಿಮ್ ಖರೀದಿ ಮಾಡುವುದಕ್ಕೆ ಆಧಾರ್ ಕಾರ್ಡ್ ಬೇಕೇ ಬೇಕು ಎನ್ನುವ ನಿಯಮ ಇರಲಿಲ್ಲ. ವೋಟರ್ ಐಡಿ ಅಥವಾ ಇನ್ಯಾವುದೇ ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ಜೊತೆಗೆ ಒಂದು ಫೋಟೋ ಕೊಟ್ಟು ಸಿಮ್ ಖರೀದಿ ಮಾಡಬಹುದಿತ್ತು. ಆದರೆ ಈಗ ಆ ರೀತಿ ಇಲ್ಲ.
ಸಿಮ್ ಖರೀದಿಗೆ ಆಧಾರ್ ಬೇಕೇ ಬೇಕು. ಆಧಾರ್ ನಂಬರ್ (Aadhaar Number) ಪಡೆದು, ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿ, ಸಿಮ್ ಕೊಡುತ್ತಾರೆ. ಹಾಗಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಸಿಮ್ ಗಳ ಸಂಖ್ಯೆ ಎಷ್ಟು ಎಂದು ತಿಳಿಯೋದು ಹೇಗೆ? ನೋಡೋಣ..
ಈ ರೀತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ, ಸಬ್ಸಿಡಿ ಜೊತೆ ₹80 ರೂಪಾಯಿ ಎಕ್ಸ್ಟ್ರಾ ಕ್ಯಾಶ್ ಬ್ಯಾಕ್ ಪಡೆಯಿರಿ!
ಆಧಾರ್ ಗೆ ಲಿಂಕ್ ಆಗಿರುವ ಸಿಮ್ ಗಳೆಷ್ಟು ಎಂದು ಈ ರೀತಿ ತಿಳಿಯಿರಿ:
*ಮೊದಲಿಗೆ ನೀವು TAFCOP ಪೋರ್ಟಲ್ ಲಿಂಕ್ ಓಪನ್ ಮಾಡಬೇಕು
https://tafcop.dgtelecom.gov.in/
*ಇಲ್ಲಿ ನೀವು ಚೆಕ್ ಮಾಡಬೇಕಿರುವ ಫೋನ್ ನಂಬರ್ ಅನ್ನು ಎಂಟರ್ ಮಾಡಿ.
*ಈಗ ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ, ಅದನ್ನು ಎಂಟರ್ ಮಾಡಿ.
*ಈ ರೀತಿ ಮಾಡುವ ಮೂಲಕ ಆ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ ಎಂದು ತಿಳಿದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್
How to check how many SIM card purchases have been made with your Aadhaar card