ಸ್ಟೇಟ್ ಬ್ಯಾಂಕ್ ನಿಂದ ಮಹಿಳೆಯರಿಗೆ ಬಂಪರ್ ಕೊಡುಗೆ! ಬ್ಯುಸಿನೆಸ್ ಮಾಡಲು ಸಿಗಲಿದೆ 20 ಲಕ್ಷ ಲೋನ್
ಇದೀಗ ಬ್ಯುಸಿನೆಸ್ ಮಾಡುವ ಕನಸು ಹೊಂದಿರುವ ಮಹಿಳೆಯರಿಗೆ SBI ಇಂದ Loan ಸೌಲಭ್ಯ ಸಿಗಲಿದ್ದು, ಅತೀ ಕಡಿಮೆ ಬಡ್ಡಿ ಇರಲಿದೆ.
State Bank Loan : ಈಗ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾಕಷ್ಟು ಸಾರಿ ಪ್ರೂವ್ ಮಾಡಿದ್ದಾರೆ. ಬ್ಯುಸಿನೆಸ್ (Business) ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.
ಇದೀಗ ಬ್ಯುಸಿನೆಸ್ ಮಾಡುವ ಕನಸು ಹೊಂದಿರುವ ಮಹಿಳೆಯರಿಗೆ SBI ಇಂದ Loan ಸೌಲಭ್ಯ ಸಿಗಲಿದ್ದು, ಅತೀ ಕಡಿಮೆ ಬಡ್ಡಿ ಇರಲಿದೆ. ಇದರಿಂದ ಮಹಿಳೆಯರು ತಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು. ಈ ಲೋನ್ ಪಡೆಯುವುದು ಹೇಗೆ ಎಂದು ತಿಳಿಯೋಣ.
ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವವರಿಗೆ ಹೊಸ ರೂಲ್ಸ್, ಜುಲೈ 1ರಿಂದಲೇ ನಿಯಮ ಜಾರಿ
ಸ್ತ್ರೀ ಶಕ್ತಿ ಯೋಜನೆ
SBI ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಸ್ತ್ರೀ ಶಕ್ತಿ ಯೋಜನೆ ಆಗಿದೆ. ಇದರಲ್ಲಿ ಮಹಿಳೆಯರು ಬ್ಯುಸಿನೆಸ್ ಮಾಡಲು, ಅವರ ಬ್ಯುಸಿನೆಸ್ ಮೇಲೆ ಆಧರಿಸಿ ₹10,000 ಇಂದ ₹20 ಲಕ್ಷ ವರೆಗು ಲೋನ್ ಸಿಗುತ್ತದೆ.
ಸಾಲದ ಮೊತ್ತವನ್ನು ಆಧರಿಸಿ 1% ಇಂದ 15% ವರೆಗು ಬಡ್ಡಿದರ ಇರುತ್ತದೆ. 1 ರಿಂದ 5 ಲಕ್ಷದ ವರೆಗಿನ ಸಾಲಕ್ಕೆ ಯಾವುದೇ ಡಾಕ್ಯುಮೆಂಟ್ ಗಳು ಬೇಕಾಗಿಲ್ಲ. ಆದರೆ 1% ಇಂದ 5% ವರೆಗು ಬ್ಯಾಂಕ್ ಪ್ರೊಸೆಸಿಂಗ್ ಫೀಸ್ ಇರುತ್ತದೆ..ಆನ್ಲೈನ್, ಆಫ್ಲೈನ್ ಎರಡು ರೀತಿ ಅಪ್ಲೈ ಮಾಡಿ, ಸಾಲ ಪಡೆಯಬಹುದು..
ನೀವು ಲೋನ್ ಗೆ ಅಪ್ಲೈ ಮಾಡಿ ಜಾಸ್ತಿ ಸಮಯ ಕಾಯಬೇಕಿಲ್ಲ, ಕಡಿಮೆ ಮೊತ್ತದ ಲೋನ್ 4 ರಿಂದ 8 ವಾರಗಳಲ್ಲಿ ಸಿಗಲಿದ್ದು, ದೊಡ್ಡ ಮೊತ್ತದ ಲೋನ್ 12 ವಾರಗಳ ಒಳಗೆ ಸಿಗುತ್ತದೆ. ಮಹಿಳೆಯರು ಸಣ್ಣ ಉದ್ಯಮ ನಡೆಸುತ್ತಿದ್ದರೆ, ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಅವರು ಸ್ವಾವಲಂಬಿಗಳಾಗಿ ಬದುಕಬೇಕು ಎಂದು Ministry Of India ಅಡಿಯಲ್ಲಿ ಮಹಿಳೆಯರಿಗೆ ಈ ಒಂದು ಸೌಲಭ್ಯವನ್ನು ಬ್ಯಾಂಕ್ ಇಂದ ಪಡೆಯಬಹುದು.
ಮಹಿಳೆಯರಿಗಾಗಿಯೇ ಇರುವ ಪೋಸ್ಟ್ ಆಫೀಸ್ ಯೋಜನೆ ಇದು, ಸುಲಭವಾಗಿ ಹಣ ಗಳಿಸಬಹುದು!
ದೊಡ್ಡ ಬ್ಯುಸಿನೆಸ್ ಒಂದೇ ಅಲ್ಲ, ಮಹಿಳೆಯರು ಈಗಾಗಲೇ ಕೆಲಸ ಮಾಡುತ್ತಾ, ಸಣ್ಣದಾಗಿ ಬ್ಯುಸಿನೆಸ್ ಕೂಡ ಮಾಡಬೇಕು ಎಂದುಕೋಂಡಿದ್ದರೆ, ಅಂಥವರಿಗು ಸ್ತ್ರೀ ಶಕ್ತಿ ಯೋಜನೆಯ ಮೂಲಕ ಲೋನ್ ಸಿಗುತ್ತದೆ. ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ರಿಂದ 60 ವರ್ಷಗಳ ಒಳಗಿರಬೇಕು.
Employment Development Projects ನಲ್ಲಿ ಪಾಲ್ಗೊಂಡು, ಮಹಿಳೆಯರಿಗೆ ಬ್ಯುಸಿನೆಸ್ ಬಗ್ಗೆ ಒಳ್ಳೆಯ ಜ್ಞಾನ ಇರಬೇಕು. ಅಂಥವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬ್ಯುಸಿನೆಸ್ ಗೆ ತರಬೇತಿಯನ್ನು ಸಹ ಕೊಡುತ್ತದೆ, ಅವುಗಳನ್ನ ಅಟೆಂಡ್ ಮಾಡಿರುವುದು ಕೂಡ ಮುಖ್ಯ ಆಗುತ್ತದೆ.
ಯಾವ ಬ್ಯುಸಿನೆಸ್ ಮಾಡಬಹುದು?
ಹೊಟೇಲ್, ಟೈಲರಿಂಗ್, ಬ್ಯುಟಿಶಿಯನ್, ಮೊಬೈಲ್ ಅಂಗಡಿ, ಕಿರಾಣಿ ಅಂಗಡಿ, ಮಿಲ್ಕ್ ಪ್ರಾಡಕ್ಟ್ಸ್ ಮಾರಾಟ ಮಳಿಗೆ, ಸೀರೆ ತಯಾರಿ, ಸೋಪ್ ತಯಾರಿ, ಚಾಕಲೇಟ್ ತಯಾರಿ ಈ ಎಲ್ಲಾ ಬ್ಯುಸಿನೆಸ್ ಗಳನ್ನು ಶುರು ಮಾಡಬಹುದು. ಇಲ್ಲಿ ನಿಮಗೆ ಟ್ಯಾಕ್ಸ್ ಇರುವುದಿಲ್ಲ, ಬಡ್ಡಿದರದ ವಿನಾಯಿತಿ ಕೂಡ ಸಿಗುತ್ತದೆ. ಜೊತೆಗೆ ಕಡಿಮೆ ಬಡ್ಡಿಯ ಲೋನ್ ಸಿಗುತ್ತದೆ.
ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ 3 ಲಕ್ಷ ಬಡ್ಡಿರಹಿತ ಸಾಲ! ಇಂದೇ ಅರ್ಜಿ ಸಲ್ಲಿಸಿ
ಬೇಕಾಗುವ ದಾಖಲೆಗಳು:
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ವೋಟರ್ ಐಡಿ
*ಡಿಎಲ್
*ಪಾಸ್ ಪೋರ್ಟ್
*ಅಡ್ರೆಸ್ ಪ್ರೂಫ್
*ವಿದ್ಯುತ್ ಬಿಲ್
*ಬ್ಯುಸಿನೆಸ್ ಡೀಟೇಲ್ಸ್
*ITR ರಿಟರ್ನಿಂಗ್
ಈ ಎಲ್ಲಾ ದಾಖಲೆಗಳನ್ನು ನೀಡಬೇಕು.
ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
20 lakh loan for women to start business from State Bank