ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Story Highlights

Fixed Deposit : ಕೆನರಾ ಬ್ಯಾಂಕ್ ಕಡೆಯಿಂದ FD ಗಳ ಮೇಲೆ ಬಡ್ಡಿದರವನ್ನು ಹೆಚ್ಚಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ವಿಶೇಷವಾಗಿ 444 ದಿನಗಳ FD ಮೇಲೆ ಸಾಮಾನ್ಯ ಜನರಿಗೆ 7.25% ಬಡ್ಡಿದರ ಸಿಗಲಿದೆ.

Fixed Deposit : ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು ಕೆನರಾ ಬ್ಯಾಂಕ್ (Canara Bank) ಆಗಿದೆ. ಈ ಒಂದು ಬ್ಯಾಂಕ್ ನಲ್ಲಿ ಗ್ರಾಹಕರಿಗೆ ನೀಡುವ ಸೇವೆ ಉತ್ತಮವಾಗಿದೆ ಎಂದು ಜನರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಗಳಲ್ಲಿ ಇದು ಕೂಡ ಒಂದು ಎಂದು ಹೇಳಿದರೆ ತಪ್ಪಲ್ಲ. ಕೆನರಾ ಬ್ಯಾಂಕ್ ನಲ್ಲಿ ತಮ್ಮ ಗ್ರಾಹಕರಿಗೆ ಅನುಕೂಲ ಅಗುವಂಥ ಹಲವು ಯೋಜನೆಗಳಿವೆ.

ಈ ಬ್ಯಾಂಕ್ ನಲ್ಲಿ FD ಯೋಜನೆಗಳ ಸೌಲಭ್ಯ ಪ್ರಮುಖವಾದದ್ದು, ಹಲವು ದಿನಗಳ ಹೂಡಿಕೆಗೆ FD ಯೋಜನೆಗಳಿದ್ದು, ಉತ್ತಮವಾದ ಹೂಡಿಕೆಯ ಆಯ್ಕೆಯನ್ನು ಸಹ ಹೊಂದಿದೆ.

ಚಿನ್ನಾಭರಣ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ, ಚಿನ್ನದ ಬೆಲೆ ಭಾರೀ ಇಳಿಕೆ! ಇಲ್ಲಿದೆ ದರಗಳ ವಿವರ

ಒಂದು ವೇಳೆ ನೀವು ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಅದರಲ್ಲೂ 444 ದಿನಗಳ FD ಯೋಜನೆಯನ್ನು ಹೊಂದಿದ್ದರೆ, ನಿಮಗಾಗಿ ಬ್ಯಾಂಕ್ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಅಷ್ಟಕ್ಕೂ ಆ ಗುಡ್ ನ್ಯೂಸ್ ಏನು? ಗ್ರಾಹಕರಿಗೆ ಯಾವ ರೀತಿ ಅನುಕೂಲ ಸಿಗುತ್ತದೆ? ತಿಳಿಸುತ್ತೇವೆ ನೋಡಿ..

ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ನಲ್ಲಿ ನೀವು Fixed Deposit ಹೂಡಿಕೆ ಮಾಡಿದರೆ, ಮೆಚ್ಯುರ್ ಆಗುವ ವೇಳೆಗೆ ನಿಮಗೆ ಉತ್ತಮವಾದ ಬಡ್ಡಿ ಮೊತ್ತ ಸಿಗುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಸಹ ಅದೇ ರೀತಿ FD ಮೇಲೆ ಉತ್ತಮ ಆದಾಯ ಸಿಗಲಿದೆ.

ಇದೀಗ ಕೆನರಾ ಬ್ಯಾಂಕ್ ಕಡೆಯಿಂದ FD ಗಳ ಮೇಲೆ ಬಡ್ಡಿದರವನ್ನು ಹೆಚ್ಚಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ವಿಶೇಷವಾಗಿ 444 ದಿನಗಳ FD ಮೇಲೆ ಸಾಮಾನ್ಯ ಜನರಿಗೆ 7.25% ಬಡ್ಡಿದರ ಸಿಗಲಿದೆ. 444 ದಿನಗಳ FD ಯೋಜನೆಯಲ್ಲಿ 3 ಲಕ್ಷ ಹೂಡಿಕೆ ಮಾಡಿದರೆ, 7.25% ಬಡ್ಡಿದರ ನಿಮ್ಮದು.

ಈ ಬ್ಯಾಂಕುಗಳಲ್ಲಿ ನೀವು ಅಡವಿಟ್ಟ ಚಿನ್ನಕ್ಕೆ ಅತಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ! ಪಟ್ಟಿ ಪರಿಶೀಲಿಸಿ

Canara bank Fixed Depositಇದರಲ್ಲಿ ಲಾಭ ಹೇಗೆ ಸಿಗುತ್ತದೆ ಎಂದು ನೋಡುವುದಾದರೆ, 444 ದಿನಗಳ FD ಯೋಜನೆಯಲ್ಲಿ ನೀವು ₹3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 444 ದಿನಗಳ ನಂತರ ಯೋಜನೆ ಮೆಚ್ಯುರ್ ಆಗುವ ವೇಳೆಗೆ ₹3.27 ಲಕ್ಷ ರೂಪಾಯಿಗಳು ಬಡ್ಡಿ ಸೇರಿಸಿ ನಿಮ್ಮ ಕೈ ಸೇರುತ್ತದೆ.

ಬೇರೆ ಎಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿ ನೋಡಿದರೆ, ಇದು ಹೆಚ್ಚಿನ ಬಡ್ಡಿದರ ಹಾಗೂ ಸಿಗುತ್ತಿರುವ ರಿಟರ್ನ್ಸ್ ಆಗಿದೆ. ಹಾಗಾಗಿ ಕೆನರಾ ಬ್ಯಾಂಕ್ ಗ್ರಾಹಕರು ಈ ಯೋಜನೆಯಲ್ಲಿ ಹೂಡಿಕ್ಡ್ ಮಾಡಬಹುದು.

ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವ ಹುದ್ದೆ? ಸಂಬಳ ಎಷ್ಟು? ಇಲ್ಲಿದೆ ಮಾಹಿತಿ

ಒಂದು ವೇಳೆ ನೀವು ಕೂಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರಾಗಿದ್ದು, FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ಈ 444 ದಿನಗಳ ಯೋಜನೆಯಲ್ಲಿ ಹೂಡಿಕೆ ಮಾಡಿ. ಬರುವ ರಿಟರ್ನ್ಸ್ ಇಂದ ನಿಮ್ಮ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಂಪಾದನೆ ಮಾಡುವಾಗ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದ್ದು, ನಿಮ್ಮ ಹಣ ಸುರಕ್ಷಿತವಾಗಿಯೂ ಇರುತ್ತದೆ.

how much interest you will get on a fixed Deposit of 3 lakh in Canara Bank

Related Stories