ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವ ಹುದ್ದೆ? ಸಂಬಳ ಎಷ್ಟು? ಇಲ್ಲಿದೆ ಮಾಹಿತಿ

Story Highlights

ಇದೀಗ ಕೆನರಾ ಬ್ಯಾಂಕ್ (Canara Bank) ಗುಡ್ ನ್ಯೂಸ್ ನೀಡಿದ್ದು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಹಾಗಾಗಿ ಆಸಕ್ತಿ ಇದ್ದವರು ಅರ್ಜಿ ಹಾಕಬಹುದು.

Canara Bank Recruitment : ದುಡಿಮೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಮೂಲ ಅಂಶ, ಹೌದು, ಸರಿಯಾದ ಉದ್ಯೋಗ ಇದ್ದರೆ ಮಾತ್ರ ಇಂದು ಜೀವನ ನಡೆಸಲು ಸಾಧ್ಯ.‌ ಅದರಲ್ಲೂ ಈ ಆಧುನಿಕ‌ ಯುಗದಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಮನೆಯಲ್ಲಿ ಎಲ್ಲರು ದುಡಿದರೂ ಸಾಕಾಗಲ್ಲ‌ ಎನ್ನುವವರೆ ಹೆಚ್ಚು.‌

ಅದರೆ ಇಂದು ವಿದ್ಯಾವಂತರಿಗೂ ಉದ್ಯೋಗ ಸಿಗುವುದು ಕಷ್ಟವೇ, ಇಂದು ಶಿಕ್ಷಣ ಪಡೆದು ಕೆಲಸ ಇಲ್ಲದೆ ಖಾಲಿ ಇದ್ದವರು ಬಹಳಷ್ಟು ಮಂದಿ ಇದ್ದಾರೆ. ಇದಕ್ಕಾಗಿ ಇದೀಗ ಕೆನರಾ ಬ್ಯಾಂಕ್ (Canara Bank) ಗುಡ್ ನ್ಯೂಸ್ ನೀಡಿದ್ದು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಹಾಗಾಗಿ ಆಸಕ್ತಿ ಇದ್ದವರು ಅರ್ಜಿ ಹಾಕಬಹುದು.

ಬ್ಯಾಂಕುಗಳೇ ಕರೆದು ಲೋನ್ ಕೊಡುತ್ತವೆ! ಇಲ್ಲಿದೆ ಸಿಬಿಲ್ ಸ್ಕೋರ್ ಜಾಸ್ತಿ ಮಾಡೋ ಸೀಕ್ರೆಟ್ ಟ್ರಿಕ್

ಯಾವ ಹುದ್ದೆ?

ಹೌದು, ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್ಸ್ ಮತ್ತು ಅಡ್ಮಿನಿಸ್ಟ್ರೇಷನ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅಭ್ಯರ್ಥಿಗಳು ಜೂನ್ 30ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಈ ಷರತ್ತು ಇದೆ

*ಬಿಕಾಂ ಪದವಿ ಪಡೆದಿರುವ, ಕಂಪ್ಯೂಟರ್ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಜ್ಞಾನ ಇರುವವರು ಅರ್ಜಿ ಹಾಕಬಹುದು.

*ಆದರೆ ಅರ್ಜಿ ಸಲ್ಲಿಸುವವರು ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

*ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 28 ವರ್ಷ, ಎಸ್ ಸಿ ಎಸ್ ಟಿ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ವಯಸ್ಸು ನಿಗದಿಪಡಿಸಲಾಗಿದೆ

*ಶೈಕ್ಷಣಿಕ ಅರ್ಹತೆ ಮತ್ತು ಅನುಭವ, ಮತ್ತು ಸಂದರ್ಶನದ ಮೂಲಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.

ಫ್ರೀಯಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ! ಸುಲಭವಾಗಿ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ

Canara Bankದಾಖಲೆ ಅಗತ್ಯವಾಗಿಬೇಕು‌

*ವಿದ್ಯಾರ್ಥಿಯ ಅಂಕಪಟ್ಟಿ
*ಆಧಾರ್ ಕಾರ್ಡ್
*ಫೋಟೋ
*ಅನುಭವದ ಪ್ರಮಾಣ ಪತ್ರ
*ವಯಸ್ಸಿನ ಪ್ರಮಾಣ ಪತ್ರ ಇತ್ಯಾದಿ‌

ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ

ಆಯ್ಕೆಯಾದ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ (Canara Bank Job) ಲೆಕ್ಕಪತ್ರ ಮತ್ತು ಆಡಳಿತ ಪ್ರಕ್ರಿಯೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000 ರೂ. ವೇತನ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಇತರ ಸೌಲಭ್ಯ ಇರಲಿದೆ.

ಅಭ್ಯರ್ಥಿಗಳು ಕೆನರಾ ಬ್ಯಾಂಕ್‌ನ ವೆಬ್‌ಸೈಟ್‌ https://canarabank.com/pages/Recruitment ಇಲ್ಲಿ ಅರ್ಜಿ ಹಾಕಬಹುದಾಗಿದೆ.

Apply Today For Canara Bank Recruitment 2024

Related Stories