ಬ್ಯಾಂಕುಗಳೇ ಕರೆದು ಲೋನ್ ಕೊಡುತ್ತವೆ! ಇಲ್ಲಿದೆ ಸಿಬಿಲ್ ಸ್ಕೋರ್ ಜಾಸ್ತಿ ಮಾಡೋ ಸೀಕ್ರೆಟ್ ಟ್ರಿಕ್
Credit Score : ಸಿಬಿಲ್ ಉತ್ತಮವಾದರೆ ಬ್ಯಾಂಕುಗಳೇ (Banks) ಕರೆದು ಲೋನ್ ಕೊಡುತ್ತವೆ. CIBIL ಸ್ಕೋರ್ ಅನ್ನು 300 ರಿಂದ 900 ರ ನಡುವೆ ನಿರ್ಧರಿಸಲಾಗುತ್ತದೆ.
Credit Score : ಸಾಮಾನ್ಯವಾಗಿ Loan ತಗೆದುಕೊಂಡು ಸರಿಯಾಗಿ ಕಟ್ಟದೆ ಹೋದರೆ CIBIL Score ಕೆಡುತ್ತದೆ ಎನ್ನುವ ವಿಷಯವನ್ನು ಎಲ್ಲರು ಕೂಡ ತಿಳಿದಿದ್ದಾರೆ. ಹೌದು ಈಗಿನ ಸಮಯದಲ್ಲಿ ಬ್ಯಾಂಕುಗಳಂತೂ ಕಡಿಮೆ ಸಿಬಿಲ್ ಸ್ಕೋರ್ ಇದ್ದರೆ ಯಾವ Loan ಕೂಡ ನೀಡಲು ಹಿಂಜರಿಯುತ್ತೆ, ಇಂತಹ ಸಮಯದಲ್ಲಿ ಸಿಬಿಲ್ ಸ್ಕೋರ್ ಮೈನಸ್ ಆಗಿದ್ರೆ ಮುಗಿತು ಕಥೆ ಎನ್ನಬಹುದು.
ಹೌದು, ದೆಹಲಿಯಲ್ಲಿ ನಡೆದ ಘಟನೆಯಲ್ಲಿ ಮೈನಸ್ ಸಿಬಿಲ್ ಸ್ಕೋರ್ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಕೆಲವೇ ತಿಂಗಳಲುಗಳಲ್ಲಿ ತನ್ನ ಸಿಬಿಲ್ ಸ್ಕೋರ್ ಏರಿಸಿಕೊಂಡಿದ್ದ ಬಗೆಯನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಫ್ರೀಯಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ! ಸುಲಭವಾಗಿ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ
ಆಟೋ ಲೋನ್ ತಗೆದುಕೊಂಡು ಸರಿಯಾಗಿ ತುಂಬದ ಕಾರಣ ಆತನ ಸಿಬಿಲ್ ಸ್ಕೋರ್ ಮೈನಸ್ 1 ಎಂದು ತೋರಿಸುತ್ತಿತ್ತು. ಕೂಡಲೇ ಆತ ಸಿಬಿಲ್ ಏರಿಸುವ ಬಗ್ಗೆ ತಿಳಿದುಕೊಂಡಿದ್ದಾನೆ.
ಸಿಬಿಲ್ ಸ್ಕೋರ್ ಏರಿಸೋದು ಹೇಗೆ
CIBIL ಸ್ಕೋರ್ ಉತ್ತಮವಾದಷ್ಟೂ ಸಾಲ ಪಡೆಯುವುದು ಸುಲಭವಾಗುತ್ತದೆ. ಸಿಬಿಲ್ ಉತ್ತಮವಾದರೆ ಬ್ಯಾಂಕುಗಳೇ (Banks) ಕರೆದು ಲೋನ್ ಕೊಡುತ್ತವೆ. CIBIL ಸ್ಕೋರ್ ಅನ್ನು 300 ರಿಂದ 900 ರ ನಡುವೆ ನಿರ್ಧರಿಸಲಾಗುತ್ತದೆ. CIBIL ಸ್ಕೋರ್ 750 ಅಥವಾ ಹೆಚ್ಚಿನದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.
ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ
-1 ಸಿಬಿಲ್ ಸ್ಕೋರ್ ಇದ್ದರೆ ಈ ಕೆಲಸ ಮಾಡಿ
ಮೈನಸ್ ಸಿಬಿಲ್ ಸ್ಕೋರ್ ಇದ್ದವರು ಹೇಗಾದರೂ ಮಾಡಿ ಚಿಕ್ಕಪುಟ್ಟ ಸಾಲ ತಗೆದುಕೊಂಡು ಸರಿಯಾದ EMI ಕಟ್ಟಿ ಸಾಲ ತೀರಿಸಿ ಇದರಿಂದ ಬೇಗ ಸ್ಕೋರ್ ಇಂಪ್ರುವ್ ಆಗುತ್ತದೆ. ಇನ್ನೊಂದು ಉಪಾಯ ಎಂದರೆ ಕೂಡಲೇ ಸಣ್ಣ ಕ್ರೆಡಿಟ್ ಕಾರ್ಡ್ (Credit Card) ಪಡೆದು ಅಥವಾ ಈಗಾಗಲೇ ಇದ್ದ ಕ್ರೆಡಿಟ್ ಕಾರ್ಡ್ ನಲ್ಲಿ EMI ಮಾಡಿಕೊಂಡು ಅದನ್ನು ಕೂಡ ಸರಿಯಾದ ಸಮಯಕ್ಕೆ ಕಟ್ಟುವುದರ ಮೂಲಕ ಬಹಳ ಬೇಗ ಸ್ಕೋರ್ ಇಂಪ್ರುವ್ ಮಾಡಿಕೊಳ್ಳಬಹುದು.
ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್
FD ಮಾಡಿ ಸಾಲ ತಗೆದುಕೊಳ್ಳಿ
ಬಹಳ ವೇಗವಾಗಿ ಸಿಬಿಲ್ ಏರಿಸುವ ಇನ್ನೊಂದು ಮಾರ್ಗವೆಂದರೆ ಬ್ಯಾಂಕ್‌ನಲ್ಲಿ 10,000 ರೂಪಾಯಿಗಳ ಎರಡು ಸಣ್ಣ ಎಫ್‌ಡಿಗಳನ್ನು ಮಾಡುವುದು. ಎಫ್‌ಡಿ ತೆರೆದ ತಕ್ಷಣವೇ ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ FD ಮೇಲೆ ಸಾಲವನ್ನು ತೆಗೆದುಕೊಳ್ಳಿ.
ನಿಮ್ಮ ಎಫ್‌ಡಿಯಲ್ಲಿ ಓವರ್‌ಡ್ರಾಫ್ಟ್ ಅಡಿಯಲ್ಲಿ ನೀವು ಸಾಲ ಹಿಂಪಡೆದ ತಕ್ಷಣ, ನಿಮ್ಮ ಲೋನ್ ಪ್ರಾರಂಭವಾಗುತ್ತದೆ ಮತ್ತು ನೀವು ಸಾಲವನ್ನು ಮರುಪಾವತಿಸುತ್ತಿದ್ದಂತೆ, ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಬೇಗ ಅಪ್ಡೇಟ್ ಆಗುತ್ತೆ
Here’s the secret trick to increase Credit score very fast