ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ 3 ಲಕ್ಷ ಬಡ್ಡಿರಹಿತ ಸಾಲ! ಇಂದೇ ಅರ್ಜಿ ಸಲ್ಲಿಸಿ

Story Highlights

Loan Scheme : ಬ್ಯುಸಿನೆಸ್ ಮಾಡುವ ಪ್ಲಾನ್ ಹೊಂದಿರುವ ಮಹಿಳೆಯರು, ಈ ಒಂದು ಯೋಜನೆಯ ಮೂಲಕ ಸಾಲ ಪಡೆದು, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.

Loan Scheme : ಈಗಿನ ಕಾಲದಲ್ಲಿ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬ್ಯುಸಿನೆಸ್ (Own Business) ಮಾಡುತ್ತಾರೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಹೀಗೆ ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಪ್ರಗತಿ ಕಾಣುತ್ತಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯರಾಗಿರಬೇಕು ಎನ್ನುವುದು ಸರ್ಕಾರದ ಆಸೆ ಕೂಡ ಹೌದು, ಹಾಗಾಗಿ ಮಹಿಳೆಯರು ಸ್ವಂತ ಉದ್ಯೋಗ ಮಾಡಲಿ, ಸ್ವಂತ ಬ್ಯುಸಿನೆಸ್ ಮಾಡಲಿ ಎಂದು ಯೋಜನೆಗಳನ್ನು ಜಾರಿಗೆ ತರುತ್ತದೆ.

ಇದೀಗ ಸರ್ಕಾರವು ಮಹಿಳೆಯರು ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡುವುದಕ್ಕೆ, 3 ಲಕ್ಷದವರೆಗು ಬಡ್ಡಿರಹಿತ ಸಾಲ (Loan) ನೀಡುವುದಕ್ಕೆ ಮುಂದಾಗಿದೆ. ಈ ಸಾಲವನ್ನು ಉದ್ಯೋಗಿನಿ ಯೋಜನೆಯ ಮೂಲಕ ನೀಡಲಾಗುತ್ತದೆ.

ಬ್ಯುಸಿನೆಸ್ ಮಾಡುವ ಪ್ಲಾನ್ ಹೊಂದಿರುವ ಮಹಿಳೆಯರು, ಈ ಒಂದು ಯೋಜನೆಯ ಮೂಲಕ ಸಾಲ ಪಡೆದು, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ…

ಮತ್ತೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್; ಕೂಡಲೇ ಅರ್ಜಿ ಸಲ್ಲಿಸಿ

ಉದ್ಯೋಗಿನಿ ಯೋಜನೆಯ ಉದ್ದೇಶ:

ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಅವರ ಬಳಿ ಸಾಕಷ್ಟು ಹಣ ಇಲ್ಲದೇ ಇದ್ದಾಗ ಸಾಲ ಪಡೆಯಬೇಕಾಗುತ್ತದೆ. ಆ ಪರಿಸ್ಥಿತಿಯಲ್ಲಿ ಲೇವಾದೇವಿ ಸಂಸ್ಥೆಗಳಲ್ಲಿ ಹೆಚ್ಚಿನ ಬಡ್ಡಿ ಕೇಳುತ್ತಾರೆ, ಹಾಗಾಗಿ ಬಡ್ಡಿ ಕಟ್ಟುವುದಕ್ಕೆ ತಪ್ಪಿಸಿ, ಮಹಿಳೆಯರು ತಮ್ಮ ಕನಸಿನ ಬ್ಯುಸಿನೆಸ್ ಶುರು ಮಾಡಲಿ ಎನ್ನುವುದು ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿರುವುದರ ಹಿಂದಿನ ಮುಖ್ಯ ಉದ್ದೇಶ ಆಗಿದೆ.

ಉದ್ಯೋಗಿನಿ ಯೋಜನೆಯ ವಿಶೇಷತೆ:

*ಈ ಯೋಜನೆಗೆ ಯಾವುದೇ ಮಹಿಳೆ ಅರ್ಹತೆ ಹೊಂದಿದ್ದರೂ ಅವರಿಗೆ ಬಡ್ಡಿ ಇಲ್ಲದೇ ಸಾಲ ಸೌಲಭ್ಯವನ್ನು (Loan Facility) ಸರ್ಕಾರದ ಕಡೆಯಿಂದ ನೀಡಲಾಗುತ್ತದೆ.
*ಈ ಯೋಜನೆ ಇಂದ ಬೇರೆ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಗೆ Loan ಪಡೆಯುವ ಅಗತ್ಯ ಇರುವುದಿಲ್ಲ.
*ಮಹಿಳೆಯರು ಅವರ ಸ್ಕಿಲ್ ಗಳನ್ನು ಜಾಸ್ತಿ ಮಾಡಿಕೊಳ್ಳಲು, ಇಡಿಪಿ ತರಬೇತಿಯನ್ನು ಕೂಡ ಕೊಡಲಾಗುತ್ತದೆ.
*SC/ST ವರ್ಗಕ್ಕೆ ಸೇರುವ ವರ್ಗದವರು ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Loan Schemeಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಮೊದಲಿಗೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಿರುವ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು.
*ಬಳಿಕ ಅವುಗಳ ಜೊತೆಗೆ ಬ್ಯಾಂಕ್ ಗೆ ಭೇಟಿ ನೀಡಬೇಕು, ಅಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.
*ಹಾಗೆಯೇ ಬ್ಯಾಂಕ್ ಇಂದ ಫಾರ್ಮ್ ಪಡೆದು, ಅಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
*ಬಳಿಕ ಫಾರ್ಮ್ ಅನ್ನು ಬ್ಯಾಂಕ್ ಗೆ ಸಲ್ಲಿಸಬೇಕು.
*ಅಥವಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಚಿನ್ನಾಭರಣ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ, ಚಿನ್ನದ ಬೆಲೆ ಭಾರೀ ಇಳಿಕೆ! ಇಲ್ಲಿದೆ ದರಗಳ ವಿವರ

ಅಗತ್ಯವಿರುವ ದಾಖಲೆಗಳು:

*ಬರ್ತ್ ಸರ್ಟಿಫಿಕೇಟ್
*ಆಧಾರ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ರೇಷನ್ ಕಾರ್ಡ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋ

ಅರ್ಹತೆಗಳು:

*ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
*ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
*ಭಾರತದವರು ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಬಹುದು
*ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು
*ಅಂಗವಿಕಲ ಮಹಿಳೆಯರು ಮತ್ತು ವಿಧವೆಯರಿಗೆ ವಯೋಮಿತಿ ಇಲ್ಲ
*ವ್ಯಾಪಾರ ಮಾಡುತ್ತಿರುವ ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು
*₹3,00,000 ರೂಪಾಯಿಗಳ ವರೆಗು ಸಾಲ ಪಡೆಯಬಹುದು.

ಜೀರೋ ಡೌನ್ ಪೇಮೆಂಟ್ ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತೆ?

Women will get 3 lakh interest-free loan to start their own business

Related Stories