ಮಹಿಳೆಯರಿಗಾಗಿಯೇ ಇರುವ ಪೋಸ್ಟ್ ಆಫೀಸ್ ಯೋಜನೆ ಇದು, ಸುಲಭವಾಗಿ ಹಣ ಗಳಿಸಬಹುದು!

ಎಲ್ಲಾ ಮಹಿಳೆಯರು ಹೂಡಿಕೆ ಮಾಡಲೇಬೇಕಾದ ಪೋಸ್ಟ್ ಆಫೀಸ್ ಯೋಜನೆ ಇದು! ಇಂದೇ ಹೂಡಿಕೆ ಶುರು ಮಾಡಿ

Bengaluru, Karnataka, India
Edited By: Satish Raj Goravigere

Post Office Scheme : ಹೂಡಿಕೆ ಮಾಡುವುದಕ್ಕೆ, ಒಳ್ಳೆಯ ರಿಟರ್ನ್ಸ್ ಪಡೆಯುವುದಕ್ಕೆ ಸುರಕ್ಷಿತವಾದ ಅತ್ಯುತ್ತಮ ಆಯ್ಕೆ ಪೋಸ್ಟ್ ಆಫೀಸ್ ಎಂದರೆ ತಪ್ಪಲ್ಲ. ಇಲ್ಲಿ ಎಲ್ಲಾ ವಯೋಮಾನಕ್ಕೆ ಸೇರಿದವರಿಗೂ ಸಹ ಉತ್ತಮವಾದ ಹೂಡಿಕೆಯ ಯೋಜನೆಗಳಿವೆ ಜೊತೆಗೆ ಒಳ್ಳೆಯ ರಿಟರ್ನ್ಸ್ ಕೂಡ ಸಿಗಲಿದೆ.

ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದು ಮಹಿಳೆಯರು ಹೂಡಿಕೆ ಮಾಡಲು ಜಾರಿಗೆ ತಂದಿರುವ ವಿಶೇಷ ಯೋಜನೆ ಆಗಿದ್ದು, ಇದರ ಬಗ್ಗೆ ಪೂರ್ತಿಯಾಗಿ ತಿಳಿಯೋಣ..

you will get 16 lakhs In this post office Savings scheme

ಈ ಯೋಜನೆಯ ಮೂಲಕ ಎಲ್ಲಾ ಬಡ ಮಕ್ಕಳಿಗೆ ಸಿಗಲಿದೆ ಉಚಿತ ಲ್ಯಾಪ್ ಟಾಪ್! ಇಂದೇ ಅಪ್ಲೈ ಮಾಡಿ

ಯಾರೆಲ್ಲಾ ಹೂಡಿಕೆ ಮಾಡಬಹುದು?

*ಭಾರತ ದೇಶಕ್ಕೆ ಸೇರಿದ ಎಲ್ಲಾ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
*ವಯೋಮಿತಿ ಎನ್ನುವ ಅಂಶ ಇಲ್ಲಿಲ್ಲ, ಎಲ್ಲಾ ವಯಸ್ಸಿನವರು ಹೂಡಿಕೆ ಮಾಡಬಹುದು
*18 ವರ್ಷ ತುಂಬದ ಹೆಣ್ಣುಮಗುವಾದರೆ ತಂದೆ ತಾಯಿ ಮಕ್ಕಳ ಹೆಸರೀ ಖಾತೆ ತೆರೆಯಬಹುದು.

ಬಡ್ಡಿ ಎಷ್ಟು?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಸೆಕ್ಷನ್ 80ಸಿ ಅಡಿಯಲ್ಲಿ ಇದು ಬರಲಿದೆ. ಆದರೆ ಈ ಯೋಜನೆಯಲ್ಲಿ ಸಿಗುವ ಬಡ್ಡಿಗೆ ನೀವು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ಗ್ರಾಹಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಈ ಯೋಜನೆಗೆ ಸರ್ಕಾರದ ಕಡೆಯಿಂದ 7.5% ಬಡ್ಡಿ ನಿಗದಿ ಮಾಡಲಾಗಿದೆ. ಬರುವ ಆದಾಯದ ಮೇಲೆ ಟಿಡಿಎಸ್ ನಿಗದಿ ಮಾಡಲಾಗಿದೆ. 3 ತಿಂಗಳಿಗೆ ಒಮ್ಮೆ ಬಡ್ಡಿ ಮೊತ್ತ ಪೋಸ್ಟ್ ಆಫೀಸ್ ಖಾತೆಗೆ ಬರಲಿದ್ದು, ಹೂಡಿಕೆಯ ಮುಕ್ತಾಯದ ಅವಧಿಯಲ್ಲಿ ಬಡ್ಡಿ ಮೊತ್ತವನ್ನು ಪಡೆಯಬಹುದು.

ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ 3 ಲಕ್ಷ ಬಡ್ಡಿರಹಿತ ಸಾಲ! ಇಂದೇ ಅರ್ಜಿ ಸಲ್ಲಿಸಿ

Post Office Schemeಈ ಯೋಜನೆಯಲ್ಲಿ 2 ವರ್ಷದ ಅವಧಿಗೆ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮೆಚ್ಯುರಿಟಿ ವೇಳೆಗೆ 2.32 ಲಕ್ಷ ರೂಪಾಯಿ ಆದಾಯ ನಿಮ್ಮದಾಗುತ್ತದೆ. ಈ ಮೊತ್ತ Fixed Deposit ರೀತಿ ಕೆಲಸ ಮಾಡುತ್ತದೆ.

ಒಂದು ವೇಳೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಭರ್ತಿ ಮಾಡಿ, ಅದನ್ನು ಸಲ್ಲಿಸಬೇಕು. ಜೊತೆಗೆ ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ (Pan Card) ನೀಡಬೇಕು. ಚೆಕ್ ಮತ್ತು ಪೇ ಸ್ಲಿಪ್ ಎರಡನ್ನು ಸಹ ನೀಡಬೇಕು.

ಮತ್ತೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ನಲ್ಲಿ (Bank) ಸಹ ಈ ಯೋಜನೆಯ ಖಾತೆ ತೆರೆಯಬಹುದು. ಈ ಯೋಜನೆಗೆ ಕೆಲವು ಮುಖ್ಯ ನಿಯಮಗಳು ಸಹ ಇದ್ದು, ಅವುಗಳನ್ನು ಪಾಲಿಸಬೇಕು, ಒಂದು ವೇಳೆ ಎಮರ್ಜೆನ್ಸಿ ಪರಿಸ್ಥಿತಿ ಎದುರಾದಾಗ ಖಾತೆ ತೆರೆದಿರುವವರು ಮಧ್ಯದಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಖಾತೆಯನ್ನು ಕ್ಲೋಸ್ ಮಾಡಬಹುದು.

ಆದರೆ ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ, ಗರಿಷ್ಠ 2 ಲಕ್ಷ ಹೂಡಿಕೆ ಮಾಡಬಹುದು. ಇಲ್ಲಿ ಎರಡು ಖಾತೆಗಳನ್ನು ಸಹ ತೆರೆಯಬಹುದು, ಆದರೆ ಎರಡನೇ ಖಾತೆ ತೆರೆಯುವ ಮೊದಲು 3 ತಿಂಗಳು ಗ್ಯಾಪ್ ಇರಬೇಕು, ಈ ಅಕೌಂಟ್ ಶುರು ಮಾಡಿ 1 ವರ್ಷವಾದ ಮೇಲೆ 40% ಮೊತ್ತವನ್ನು ವಾಪಸ್ ಪಡೆಯಬಹುದು.

ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

This is a Best post office scheme for women, earn money easily