ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವವರಿಗೆ ಹೊಸ ರೂಲ್ಸ್, ಜುಲೈ 1ರಿಂದಲೇ ನಿಯಮ ಜಾರಿ
Credit Card : ಇನ್ನುಮುಂದೆ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ನಿಯಮಗಳು ಜಾರಿಗೆ ಬರಲಿದೆ.
Credit Card : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲಗಳು ಸಿಗಲಿದೆ. ಹಾಗಾಗಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ.
ಆದರೆ ಇದೀಗ ಕ್ರೆಡಿಟ್ ಕಾರ್ಡ್ (Credit Card) ಬಳಕೆ ಮಾಡುವವರಿಗೆ ಜುಲೈ 1 ರಿಂದ ಹೊಸ ನಿಯಮ ಅಪ್ಲೈ ಆಗಲಿದ್ದು, ಅವುಗಳನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ.
ಕ್ರೆಡಿಟ್ ಕಾರ್ಡ್ ಗಳನ್ನು ಬಳಕೆ ಮಾಡುವುದರಿಂದ ಹೆಚ್ಚಿನ ಉಪಯೋಗವಿದೆ. ಬಳಕೆದಾರರಿಗೆ ಗಿಫ್ಟ್ ಗಳು ಸಿಗುತ್ತದೆ, ಫ್ಲೈಟ್ ಗಳಲ್ಲಿ ಪ್ರಯಾಣ ಮಾಡುವಾಗ ಪ್ರಯೋಜನವಿದೆ, ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡುವ ವಿಚಾರದಲ್ಲಿ ಕೂಡ ನಿಮಗೆ ಹೆಚ್ಚು ಬೆನಿಫಿಟ್ಸ್ ಸಿಗಲಿದೆ, ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದಕ್ಕೆ ಜನರು ಬಯಸುತ್ತಾರೆ. ಇನ್ನುಮುಂದೆ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ನಿಯಮಗಳು ಜಾರಿಗೆ ಬರಲಿದೆ.
ಮಹಿಳೆಯರಿಗಾಗಿಯೇ ಇರುವ ಪೋಸ್ಟ್ ಆಫೀಸ್ ಯೋಜನೆ ಇದು, ಸುಲಭವಾಗಿ ಹಣ ಗಳಿಸಬಹುದು!
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇನ್ಮುಂದೆ ಹೊಸ ರೂಲ್ಸ್!
ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರು ಪ್ರತಿ ತಿಂಗಳು ಅದರ ಬಿಲ್ (Credit Card Bill) ಪಾವತಿ ಮಾಡಬೇಕು. ಸಾಮಾನ್ಯವಾಗಿ ಎಲ್ಲರೂ Phonpe, Cred, Builddesk, Infibeam Avenue ಈ ಪ್ಲಾಟ್ ಫಾರ್ಮ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿ ಮಾಡುತ್ತಾರೆ.
ಆದರೆ ಜೂನ್ 30ರ ನಂತರ RBI ಜಾರಿಗೆ ಹೊಸ ನಿಯಮಗಳ ಕಾರಣ ಈ ಅಪ್ಲಿಕೇಶನ್ ಗಳ ಮೂಲಕ ಬಿಲ್ ಪಾವತಿ ಮಾಡುವುದಕ್ಕೆ ಸಮಸ್ಯೆ ಉಂಟಾಗಬಹುದು. RBI ಹೊಸ ನಿಯಮಗಳು ಇವುಗಳ ಮೇಲೆ ಪರಿಣಾಮ ಬೀರಲಿದೆ.
ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ 3 ಲಕ್ಷ ಬಡ್ಡಿರಹಿತ ಸಾಲ! ಇಂದೇ ಅರ್ಜಿ ಸಲ್ಲಿಸಿ
RBI ಹೊಸ ನಿಯಮದ ಅನುಸಾರ ಜೂನ್ 30ರ ನಂತರ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಈ ಒಂದು ವ್ಯವಸ್ಥೆಯ ಮೂಲಕವೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
HDFC, ICICI ಮತ್ತು Axis ಬ್ಯಾಂಕ್ ಈ ಮೂರು ಬ್ಯಾಂಕ್ ಗಳು ಒಟ್ಟಾರೆಯಾಗಿ ತಮ್ಮ ಬ್ಯಾಂಕ್ ಮೂಲಕ 5 ಕೋಟಿಗಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡಿದೆ, ಆದರೆ BBPS ಆಕ್ಟಿವ್ ಮಾಡಿಲ್ಲ. ಆದರೆ Phonpe ಮತ್ತು Cred ಈ ಎರಡು ಕೂಡ BBPS ಸದಸ್ಯರಾಗಿದ್ದಾರೆ, ಹಾಗಿದ್ದರು ಇವುಗಳ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ ಮಾಡುವ ಹಾಗಿಲ್ಲ ಎಂದು ಸರ್ಕಾರ ತಿಳಿಸಿದೆ..
ಕೆನರಾ ಬ್ಯಾಂಕ್ ನಲ್ಲಿ ₹3 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಜುಲೈ 1ರಿಂದ ಬಿಗ್ ಚೇಂಜ್:
ಈ ಎಲ್ಲಾ ಸಂಸ್ಥೆಗಳಿಗೆ ಯಾವುದೇ ತೊಂದರೆ ಆಗಬಾರದು, ಗ್ರಾಹಕರಿಗೂ ಸಮಸ್ಯೆ ಆಗಬಾರದು ಎಂದರೆ RBI ಇಂದ ಬರುವ ಎಲ್ಲಾ ನಿಯಮಗಳ ಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕು.
ಜೂನ್ 30ರಂದು RBI ನ ಹಳೆಯ ರೂಲ್ಸ್ ಗಳು ಜಾರಿಯಲ್ಲಿರುವ ಕೊನೆಯ ದಿನ ಆಗಿದೆ. ಇನ್ನು 90 ದಿನಗಳ ಕಾಲ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸಮಯ ಕೊಡಬೇಕು ಎಂದು ಸಂಸ್ಥೆಗಳು RBI ಅನ್ನು ಕೇಳಿಕೊಂಡಿವೆ. ಪ್ರಸ್ತುತ ಇರುವ ಮಾಹಿತಿಯ ಅನುಸಾರ ಒಟ್ಟು 8 ಬ್ಯಾಂಕ್ ಗಳಲ್ಲಿ BPPS ಆಕ್ಟಿವ್ ಆದರೆ, 34 ಬ್ಯಾಂಕ್ ಗಳಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವ ಹಕ್ಕು ಸಿಗುತ್ತದೆ. ಇದು ಸಾಧ್ಯ ಆಗಬೇಕು ಎಂದರೆ RBI ನಿಯಮಗಳ ಪಾಲನೆ ನಡೆಯಬೇಕಾಗಿದೆ.
ಚಿನ್ನಾಭರಣ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ, ಚಿನ್ನದ ಬೆಲೆ ಭಾರೀ ಇಳಿಕೆ! ಇಲ್ಲಿದೆ ದರಗಳ ವಿವರ
New rules for credit card bill payers will come into effect from July 1