ಎಲ್ಲರಿಗೂ ಫ್ರೀ ಸರ್ವಿಸ್ ಕೊಡುವ Google Pay, PhonePe ಗೆ ಪ್ರಾಫಿಟ್ ಎಲ್ಲಿಂದ ಬರುತ್ತೆ?
UPI ಮೂಲಕ ಪಾವತಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ Google Pay, PhonePe ಬಳಕೆದಾರರಿಂದ ಯಾವುದೇ ಶುಲ್ಕ ವಸೂಲಿ ಮಾಡದೇ ಕೋಟಿ ಕೋಟಿ ಲಾಭ ಗಳಿಸುತ್ತವೆ. ಆ ರಹಸ್ಯವೇನು?

- Google Pay, PhonePe ಲಾಭದ ಗುಟ್ಟು
- ಯುಪಿಐ ಪಾವತಿಯಲ್ಲಿ ಶುಲ್ಕವಿಲ್ಲ
- ಜಾಹೀರಾತು, ಸಾಫ್ಟ್ವೇರ್ ಸೇವೆ, ಸ್ಪೀಕರ್ ಆದಾಯ
Google Pay, PhonePe Profit : ಬೆಂಗಳೂರು ಸೇರಿದಂತೆ ದೇಶದಾದ್ಯಂತ ಜನರು ಈಗ ಕೈಯಲ್ಲಿ ನಗದು ಹಿಡಿಯುವುದನ್ನು ಮರೆತು, Google Pay, PhonePe ಮಾದರಿಯ ಆಪ್ಗಳ ಮೂಲಕವೇ ಪಾವತಿಗಳನ್ನು ಮುಗಿಸುತ್ತಿದ್ದಾರೆ.
ಕೇವಲ ಒಂದು ರೂಪಾಯಿಯಿಂದ ಲಕ್ಷ ರೂಪಾಯಿವರೆಗೆ ವ್ಯವಹಾರಗಳು ಇವುಗಳ ಮೂಲಕ ನಡೆಯುತ್ತಿವೆ. ಆದರೆ ಇವು ವ್ಯವಹಾರಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಹಾಗಿದ್ದರೆ ಈ ಕಂಪನಿಗಳು ಕೋಟಿಗಳ ಲಾಭ ಹೇಗೆ ಪಡೆಯುತ್ತವೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡುತ್ತದೆ.
ಇದನ್ನೂ ಓದಿ: ದಿನಕ್ಕೆ 2 ರೂಪಾಯಿ! ಜಿಯೋ 11 ತಿಂಗಳ ಅನ್ಲಿಮಿಟೆಡ್ ಕಾಲಿಂಗ್, 2GB ಡೇಟಾ ಪ್ಲಾನ್ ಬಿಡುಗಡೆ
ಮೊದಲು ಗಮನಿಸಬೇಕಾದದ್ದು, ಇವು ನೀಡುವ ವಾಯ್ಸ್-ಆಪರೇಟೆಡ್ ಸ್ಪೀಕರ್ ಸೇವೆ. “ನಿಮಗೆ ₹100 ಬಂದಿದೆ” ಎಂದು ಅಂಗಡಿಯಲ್ಲಿ ಕೇಳುವ ಈ ಸ್ಪೀಕರ್ಗಳು ಉಚಿತವಲ್ಲ. ಅಂಗಡಿಕಾರರು ತಿಂಗಳಿಗೆ ₹100 ಪಾವತಿಸಿ ಇವುಗಳನ್ನು ಬಳಸುತ್ತಾರೆ. ದೇಶದ ಮೂವತ್ತ ಲಕ್ಷಕ್ಕೂ ಹೆಚ್ಚು ಅಂಗಡಿಗಳಲ್ಲಿ ಈ ಸಾಧನಗಳಿವೆ. ಇದರಿಂದ ಮಾತ್ರವೇ ವರ್ಷಕ್ಕೆ ₹360 ಕೋಟಿ ಆದಾಯ ಬರುತ್ತದೆ.
ಅಷ್ಟೇ ಅಲ್ಲ, ನಾವು ಪಾವತಿ ಮಾಡಿದಾಗ ಬರುವ ಸ್ಕ್ರಾಚ್ ಕಾರ್ಡ್ ಮತ್ತು ಆಫರ್ಗಳು ಕೂಡ ಬಿಸಿನೆಸ್ ಮಾದರಿಯ ಭಾಗ. ನಾನಾ ಬ್ರಾಂಡ್ಗಳು ತಮ್ಮ ಜಾಹೀರಾತುಗಳನ್ನು ಈ ಆಪ್ಗಳಲ್ಲಿ ತೋರಿಸಲು ಕೋಟಿ ಕೋಟಿ ಹಣ ಹೂಡುತ್ತವೆ. ನಾವು ಪಡೆಯುವ ಕ್ಯಾಶ್ಬ್ಯಾಕ್ ಹಿಂದೆ ಕಂಪನಿಗಳಿಗೆ ಡಬಲ್ ಲಾಭ ದೊರಕುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಎಷ್ಟು ಬಂಗಾರ ಇಡಬಹುದು? ಇದಕ್ಕಿಂತ ಹೆಚ್ಚಿದ್ದರೆ ಸಂಕಷ್ಟ ತಪ್ಪಿದ್ದಲ್ಲ!
ಇದಕ್ಕೆ ಸೇರ್ಪಡೆಯಾಗಿ, ಇವು ಭವಿಷ್ಯದಲ್ಲಿ ಸಾಫ್ಟ್ವೇರ್ ಸರ್ವೀಸ್ (SaaS) ಹಾಗೂ ಸಣ್ಣ ವ್ಯಾಪಾರಿಗಳಿಗೆ ರೀಟೇಲ್ ಲೋನ್ (Retail Loan) ಸೇವೆ ನೀಡುವ ಮೂಲಕ ಇನ್ನಷ್ಟು ಆದಾಯ ಸಂಪಾದನೆ ಮಾಡಲಿವೆ.
ಹೀಗೆ, ವ್ಯವಹಾರ ಶುಲ್ಕವಿಲ್ಲದಿದ್ದರೂ ವಿಭಿನ್ನ ಮಾದರಿಗಳ ಮೂಲಕ Google Pay, PhonePe ಮುಂತಾದ ಆಪ್ಗಳು ಬೃಹತ್ ಲಾಭವನ್ನು ಗಳಿಸುತ್ತಿವೆ.
How UPI Apps Earn Billions Without Charging Users




