ಸಡನ್ ಹಾಗಿ ಅಕೌಂಟ್ಗೆ ಕೋಟಿ ಹಣ ಬಂದ್ರೆ ಏನ್ ಮಾಡ್ತೀರಾ? ಏನ್ ಮಾಡಬೇಕು ಗೋತ್ತಾ? - Bank Account
ನಿಮ್ಮ ಖಾತೆಗೆ ಏಕಾಏಕಿ ಕೋಟಿ ರೂಪಾಯಿ ಜಮಾ ಆದರೆ ಆ ಹಣಕ್ಕೆ ಕೈ ಹಾಕುವುದು ಅಪಾಯಕಾರಿ. ಕಾನೂನು ಸಮಸ್ಯೆ ತಪ್ಪಿಸಲು ತಕ್ಷಣ ಬ್ಯಾಂಕ್ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡುವುದು ಅಗತ್ಯ.

- ಅಕೌಂಟ್ಗೆ ಕೋಟಿ ಬಂದ್ರೆ ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಿ
- RBI ಪೋರ್ಟಲ್ ಹಾಗೂ ಸೈಬರ್ ಕ್ರೈಂ ಮೂಲಕ ದೂರು ನೀಡಿ
- ಪಾಸ್ವರ್ಡ್ ಬದಲಾಯಿಸಿ, ಟು-ಫ್ಯಾಕ್ಟರ್ ಸೆಕ್ಯೂರಿಟಿ ಆನ್ ಮಾಡಿ
unexpected Money : ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಹಣ ವರ್ಗಾವಣೆ ಕೂಡ ದಾಖಲಾಗಿ ಉಳಿಯುತ್ತದೆ. ನಿಮ್ಮ ಖಾತೆಗೆ (Bank Account) ಏಕಾಏಕಿ ಕೋಟಿಯಷ್ಟು ಹಣ ಬಂದ್ರೆ, ಅದನ್ನು ಖರ್ಚು ಮಾಡುವುದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು.
ಇತ್ತೀಚೆಗೆ ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ಇಂತಹ ಘಟನೆ ನಡೆದಿದೆ. ಮರಣ ಹೊಂದಿದ ಮಹಿಳೆಯ ಖಾತೆಗೆ ಕೋಟಿ ರೂಪಾಯಿ ಜಮಾ ಆಗಿದ್ದು, ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇಂತಹ ಸಂದರ್ಭದಲ್ಲಿ, ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವುದು ಅಥವಾ ಬಳಸುವುದು ಗಂಭೀರ ಕಾನೂನು ಸಮಸ್ಯೆ ಉಂಟುಮಾಡಬಹುದು, ಜೈಲಿನ ಶಿಕ್ಷೆಯೂ ಅನುಭವಿಸಬೇಕಾಗಬಹುದು.
ಇದನ್ನೂ ಓದಿ: ಲೋನ್ ಮುಗಿಸಿದ್ರೂ ಸಿಬಿಲ್ ಸ್ಕೋರ್ ಏರಿಕೆ ಆಗಿಲ್ವಾ? ಹಾಗಾದ್ರೆ ಇದೇ ಕಾರಣ
ಅಂತಹ ಹಣ ಜಮಾ ಆದ ಕೂಡಲೇ ನಿಮ್ಮ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆಪ್ನ ‘ಹೆಲ್ಪ್’ ವಿಭಾಗದಲ್ಲಿ ದೂರು ದಾಖಲಿಸಿ. ಟ್ರಾನ್ಸಾಕ್ಷನ್ ಐಡಿ ಸೇರಿಸಲು ಮರೆಯಬೇಡಿ. ಬಯಸಿದರೆ ನೇರವಾಗಿ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿಯನ್ನು ನೀಡಬಹುದು.
ಕಾನೂನು ಸಮಸ್ಯೆ ತಪ್ಪಿಸಲು RBI ಪೋರ್ಟಲ್ (https://cms.rbi.org.in) ಮೂಲಕವೂ ದೂರು ನೀಡಬಹುದು. ಅಲ್ಲಿ “Submit Complaint” ಮೇಲೆ ಕ್ಲಿಕ್ ಮಾಡಿ, ವಿವರಗಳನ್ನು ಭರ್ತಿ ಮಾಡಿದ ನಂತರ ದೂರು ರೆಫರೆನ್ಸ್ ನಂಬರ್ ಪಡೆಯಲಾಗುತ್ತದೆ. ಇದನ್ನು ಭವಿಷ್ಯದ ತನಿಖೆಗಳಿಗೆ ಕಾಪಾಡಿಟ್ಟುಕೊಳ್ಳಿ.
ಇದನ್ನೂ ಓದಿ: ಒಮ್ಮೆ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000 ಸಿಗುತ್ತೆ! ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ಕೆಲವೊಮ್ಮೆ ಹ್ಯಾಕರ್ಗಳು ಹಣ ಜಮಾ ಮಾಡಿ ಖಾತೆ ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಾಸ್ವರ್ಡ್ಗಳನ್ನು ತಕ್ಷಣ ಬದಲಿಸಿ, ಟು-ಫ್ಯಾಕ್ಟರ್ ಸ್ಕ್ಯೂರಿಟಿ ಆನ್ ಮಾಡಿ. ಇದರಿಂದ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.
ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಅನುಮಾನವಾದರೆ, https://cybercrime.gov.in ಪೋರ್ಟಲ್ನಲ್ಲಿ ಸೈಬರ್ ಕ್ರೈಮ್ ದೂರು ದಾಖಲಿಸಬಹುದು. ಅಲ್ಲಿ “Report Other Cyber Crime” ವಿಭಾಗದಲ್ಲಿ ವಿವರ ನೀಡಿ FIR ಅಥವಾ NCR ಸಲ್ಲಿಸಬಹುದು.
ಇದನ್ನೂ ಓದಿ: ಬರಿ ₹7,000ಕ್ಕೆ ಹೈಕ್ಲಾಸ್ LED ಟಿವಿಗಳು! ಡಿಸ್ಕೌಂಟ್ ಮೇಳ, ಆಫರ್ ಬಿಟ್ಟೋರು ಉಂಟಾ
ಇದೇ ರೀತಿ, ಯಾರಾದರೂ ಮೃತಪಟ್ಟರೆ ಅವರ ಬ್ಯಾಂಕ್ ಹಾಗೂ ಯುಪಿಐ ಖಾತೆಗಳನ್ನು ತಕ್ಷಣ ಮುಚ್ಚುವುದು ಅಗತ್ಯ. ಇಲ್ಲದಿದ್ದರೆ ಅವುಗಳನ್ನು ಮೋಸ ಅಥವಾ ಹವಾಲಾ ಕಾರ್ಯಗಳಿಗೆ ದುರುಪಯೋಗ ಮಾಡಬಹುದಾಗಿದೆ.
If 1 Crore Suddenly Lands in Your Account, Do This Immediately



