ಬ್ಯಾಂಕ್ ದರೋಡೆ ಆದರೆ ಬ್ಯಾಂಕಿನಲ್ಲಿ ನೀವು ಇಟ್ಟ ಹಣಕ್ಕೆ ಗ್ಯಾರಂಟಿ ಇದೆಯಾ?
- ಬ್ಯಾಂಕ್ ದರೋಡೆ ಮಾಡಿದ್ರೆ ನೀವು ಠೇವಣಿ ಇಟ್ಟ ಹಣಕ್ಕೆ ಏನು ಗ್ಯಾರಂಟಿ
- ಬ್ಯಾಂಕ್ ಲೋಕನಲ್ಲಿ ಇಟ್ಟ ಹಣವನ್ನು ಬ್ಯಾಂಕ್ ಗ್ರಾಹಕರಿಗೆ ವಂಚಿಸದೆ ಹಿಂತಿರುಗಿಸಬೇಕು
- ಬ್ಯಾಂಕಿನಲ್ಲಿ ಠೇವಣಿ ಇಡುವಾಗ ವಿಮೆ ಬಗ್ಗೆ ತಿಳಿದುಕೊಳ್ಳಿ
ರಾಜ್ಯದಲ್ಲಿ ಇತ್ತೀಚಿಗೆ ಬ್ಯಾಂಕ್ ಲೂಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್, ಮಂಗಳೂರು ಮೊದಲಾದ ಕಡೆ ಹಾಡುಹಗಲೇ ದುಷ್ಕರ್ಮಿಗಳು ಸುಲಭವಾಗಿ ಬ್ಯಾಂಕ್ ಲೂಟಿ ಮಾಡಿಕೊಂಡು ಹೋಗಿದ್ದಾರೆ. ಸಿ ಸಿ ಕ್ಯಾಮೆರಾದಲ್ಲಿ ಇಂತಹ ಕೆಲವು ಘಟನೆಗಳು ಕ್ಯಾಪ್ಚರ್ ಆಗಿದೆ ಇದರಿಂದಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ.
ಹೌದು, ಬ್ಯಾಂಕ್ ಲೂಟಿ ಆಯ್ತು ಅಂದ್ರೆ ಎಲ್ಲರಿಗೂ ತಲೆ ಬಿಸಿ ಶುರುವಾಗುತ್ತೆ. ಯಾಕೆಂದರೆ ನಾವು ಕೂಡ ಬಂಗಾರವನ್ನು ಅಥವಾ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುತ್ತೇವೆ. ಬ್ಯಾಂಕ್ ದರೋಡೆ ಆದಾಗ ನಾವು ಇಟ್ಟ ಹಣ ಅಥವಾ ಚಿನ್ನ (Gold) ನಮಗೆ ವಾಪಸ್ ಸಿಗುತ್ತಾ ಎನ್ನುವ ಆತಂಕ ಮೂಡುವುದು ಸಹಜ.
15 ವರ್ಷಕ್ಕೆ ಅಂತ 25 ಲಕ್ಷ ಪರ್ಸನಲ್ ಲೋನ್ ತೆಗೆದುಕೊಂಡರೆ EMI ಎಷ್ಟು ಕಟ್ಟಬೇಕು?
ಬ್ಯಾಂಕ್ ಲೂಟಿ ಆದರೆ ನಮ್ಮ ಹಣ ನಮಗೆ ವಾಪಸ್ ಸಿಗುತ್ತಾ?
ಹೌದು, ಬ್ಯಾಂಕ್ ಲಾಕರ್ ಲೂಟಿ ಆದರೆ ಅಥವಾ ಬ್ಯಾಂಕ್ ಅನ್ನು ಯಾವುದೇ ದರೋಡೆ ಮಾಡಿದರೆ ಅಂತಹ ಸಂದರ್ಭದಲ್ಲಿ ನೀವು ಕಳೆದುಕೊಂಡ ಹಣ ನಿಮಗೆ ವಾಪಸ್ ಸಿಗುತ್ತದೆ. ಇದಕ್ಕೆ ಬ್ಯಾಂಕ್ ನೇರವಾಗಿ ಜವಾಬ್ದಾರಿ ಆಗಿರುತ್ತದೆ.
ಆದರೆ ಯಾವುದೇ ಪ್ರವಾಹ ಅಥವಾ ಭೂಕಂಪದಂತಹ ಪ್ರಕೃತಿ ವಿಕೋಪಕ್ಕೆ ಬ್ಯಾಂಕ್ ನಾಶವಾದರೆ ಆಗ ನಿಮ್ಮ ಹಣಕ್ಕೆ ಬ್ಯಾಂಕ್ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಬ್ಯಾಂಕ್ ಖಾತೆಯನ್ನು (Bank Account) ಯಾರಾದರೂ ಹ್ಯಾಕ್ ಮಾಡಿದರೆ ಅಥವಾ ನಿಮಗೆ ಬ್ಯಾಂಕ್ನಿಂದ ವಂಚನೆ ಆದ್ರೆ ನೀವು ದೂರು ಸಲ್ಲಿಸುವ ಮೂಲಕ ಬ್ಯಾಂಕಿನಿಂದ ಹಣವನ್ನು ವಾಪಸ್ ಪಡೆದುಕೊಳ್ಳಬಹುದು. ನಿಮಗೆ ಯಾವುದೇ ರೀತಿಯ ವಂಚನೆಯ ಅನುಮಾನ ಬಂದಲ್ಲಿ ಫೆಡರಲ್ ಟ್ರೆಡ್ ಕಮಿಷನ್ ಗೆ ವರದಿ ಮಾಡಬೇಕು.
DICGC: ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಎನ್ನುವುದು ಆರ್ ಬಿಐನ ಒಂದು ಭಾಗವಾಗಿದ್ದು, ಬ್ಯಾಂಕ್ ದಿವಾಳಿ ಆದರೆ ಅಥವಾ ಬ್ಯಾಂಕ್ ಗ್ರಾಹಕರಿಗೆ ಮೋಸ ಮಾಡಿದರೆ ನಿಮ್ಮ ಹಣವನ್ನು ರಕ್ಷಿಸುವ ಜವಾಬ್ದಾರಿಯನ್ನ ಹೊರುತ್ತದೆ ಅದಕ್ಕಾಗಿಯೇ ಬ್ಯಾಂಕ್ ಠೇವಣಿಗೆ ವಿಮೆ ಮಾಡಿಸಲಾಗುತ್ತದೆ.
ನಮ್ಮ ದೇಶದಲ್ಲಿ ಚಾಲ್ತಿಯಲ್ಲಿತ್ತು 10,000 ರೂಪಾಯಿ ನೋಟು! ಈ ವಿಚಾರ ನಿಮಗೆ ಗೊತ್ತಾ?
ಬ್ಯಾಂಕ್ ಠೇವಣಿಯ ಮೇಲೆ ವಿಮೆ!
ಉಳಿತಾಯ ಖಾತೆ, ಎಫ್ ಡಿ, (Fixed Deposit) ಕರೆಂಟ್ ಅಕೌಂಟ್, ಮರುಕಳಿಸುವ ಠೇವಣಿ (RD) ಹೀಗೆ ಮೊದಲಾದ ಯೋಜನೆಗಳಲ್ಲಿ ನೀವು ಠೇವಣಿ ಇಟ್ಟರೆ ಡಿಐಸಿಜಿಸಿ ವಿಮೆಗೆ ಒಳಪಡುತ್ತದೆ. ಆದರೆ ಕೆಲವು ಠೇವಣಿಗಳು ಮಾತ್ರ ಈ ವಿಮೆಗೆ ಸಂಬಂಧಪಟ್ಟಿರುವುದಿಲ್ಲ. ಹೀಗಾಗಿ ಬ್ಯಾಂಕಿನಲ್ಲಿ ದರೋಡೆ ಆದ ಸಂದರ್ಭದಲ್ಲಿ ನೀವು ಇಟ್ಟ ಠೇವಣಿ ಹಣ ಅಥವಾ ಲಾಕರ್ ನಲ್ಲಿ ಇಟ್ಟ ಪ್ರಮುಖ ವಸ್ತುಗಳು ಹಿಂತಿರುಗಿ ನಿಮಗೆ ಸಿಗಬಹುದು
If a Bank Is Robbed, Is Your Money in the Bank Guaranteed