ಕೇವಲ ₹7 ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ
Pension Scheme : ಪ್ರತಿಯೊಬ್ಬ ವ್ಯಕ್ತಿಯು ದುಡಿಯುವುದು, ಹಣ ಗಳಿಸುವುದು ತನ್ನ ಸಂಸಾರಕ್ಕಾಗಿ. ತನ್ನ ಸಂಸಾರ ಸದಾ ಕಾಲ ನೆಮ್ಮದಿಯಿಂದ ಇರಬೇಕು ಎನ್ನುವ ಸಲುವಾಗಿ ಹಗಲು-ರಾತ್ರಿ ಕಷ್ಟಪಡುತ್ತಾರೆ.
ಹೀಗೆ ದುಡಿದ ಹಣದಲ್ಲಿ ಸ್ವಲ್ಪವಾದರೂ ಉಳಿತಾಯ (savings) ಮಾಡಬೇಕು. ಉಳಿತಾಯ ಮಾಡಿದ ಹಣವನ್ನು ಉತ್ತಮ ಜಾಗದಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಪ್ರಮಾಣದ ಲಾಭಗಳಿಕೆ ಸಾಧ್ಯ.
ಈಗ ಹೂಡಿಕೆ (investment) ಮಾಡಲು ಅನೇಕ ಅವಕಾಶಗಳಿವೆ. ಆದರೆ ಎಲ್ಲವೂ ನಂಬಲು ಸಾಧ್ಯವಿಲ್ಲ. ನಾವು ಕಷ್ಟಪಟ್ಟು ದುಡಿದ ಹಣವನ್ನು ಯಾರಾದರೂ ಮೋಸ ಮಾಡಿದರೆ ಎನ್ನುವ ಭಾವನೆ ಹಲವರಲ್ಲಿ ಇರುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿ ಮಾಡಿಸಿಲ್ವಾ? ನಾಮಿನಿ ಇಲ್ಲದೆ ಇದ್ರೆ ಏನಾಗುತ್ತೆ ಗೊತ್ತಾ?
ಹಾಗಾಗಿ ಹೂಡಿಕೆ ಮಾಡುವ ವೇಳೆ ಸರ್ಕಾರಿ ಯೋಜನೆಗಳಲ್ಲಿ (government Investment plans) ಹೂಡಿಕೆ ಮಾಡುವುದು ಉತ್ತಮ. ಇಲ್ಲಿ ನಮ್ಮ ಹಣ ಭದ್ರವಾಗಿರುತ್ತದೆ. ಹೀಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ನೀಡುವ ಅನೇಕ ಸರ್ಕಾರಿ ಯೋಜನೆಗಳಿವೆ. ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ (Atal pension scheme) ಯೂ ಒಂದಾಗಿದೆ.
ಮೊದಲೇ ಹೂಡಿಕೆ ಆರಂಭಿಸಿದರೆ ಮಾತ್ರ ನಿವೃತ್ತಿಯ ನಂತರ (after retirement) ಜೀವನವನ್ನು ಸುಖಮಯವಾಗಿ ಕಳೆಯಲು ಸಾಧ್ಯವಾಗುತ್ತದೆ. ಅಲ್ಲದೆ ನಿವೃತ್ತಿಯ ನಂತರವೂ ಸ್ವಾಭಿಮಾನಿಯಾಗಿ ಬದುಕಬಹುದು. ಹಾಗಾಗಿ ಸಣ್ಣ ವಯಸ್ಸಿನಿಂದಲೇ ಹೂಡಿಕೆ ಮಾಡುವುದು ಉತ್ತಮ.
ಹೂಡಿಕೆ ಮಾಡುವ ಮೊದಲು ನಮ್ಮ ಹಣ ಸುರಕ್ಷಿತವೋ ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣ ಭದ್ರವಾಗಿರುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ದಿನವೊಂದಕ್ಕೆ 7 ರೂ. ಹೂಡಿಕೆ ಮಾಡಿದಲ್ಲಿ ನೀವು ನಿವೃತ್ತಿಯ ನಂತರ 5,೦೦೦ ರೂ. ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ.
ವಿವಿಧ ಬ್ಯಾಂಕ್‌ಗಳಲ್ಲಿ ಎಜುಕೇಶನ್ ಲೋನ್ ಮೇಲಿನ ಬಡ್ಡಿ ದರಗಳ ಸಂಪೂರ್ಣ ಮಾಹಿತಿ
ಅಟಲ್ ಪಿಂಚಣಿ ಯೋಜನೆ: (Atal pension scheme)
ತೆರಿಗೆ ಪಾವತಿದಾರರಲ್ಲದ (nontax payers) 18ರಿಂದ 40 ವರ್ಷದೊಳಗಿನ ಎಲ್ಲರೂ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದುದು. ಪ್ರತಿ ದಿನ 7 ರೂ. ಹೂಡಿಕೆ ಮಾಡುವ ಮೂಲಕ ನಿವೃತ್ತಿಯ ನಂತರ ಪ್ರತಿ ತಿಂಗಳು 5,000 ರೂ. ತೆಗೆದುಕೊಳ್ಳಬಹುದು. ಒಬ್ಬ ವ್ಯಕ್ತಿ 18ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಿದರೆ 6೦ನೇ ವಯಸ್ಸಿನಲ್ಲಿ ಆತ 5೦೦೦ ರೂ. ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಆತ ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡಬೇಕಾಗುತ್ತದೆ.

ಎಷ್ಟು ಹೂಡಿಕೆ ಮಾಡಬೇಕು? (Investment amount)
18 ವರ್ಷಕ್ಕೆ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ತಿಂಗಳಿಗೆ 210 ರೂ. ಹೂಡಿಕೆ ಮಾಡಬೇಕಾಗುತ್ತದೆ. ಹಾಗಾದರೆ 19 ರಿಂದ 40 ವರ್ಷದೊಳಗಿನವರು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳೊಣ.
ಚಿನ್ನದ ಬೆಲೆ ಇಳಿಕೆ, ರಾತ್ರೋರಾತ್ರಿ ಚಿನ್ನಾಭರಣ ದರಗಳು ಕುಸಿತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
19 ವರ್ಷ ವಯಸ್ಸಿನವರು ಪ್ರತಿ ತಿಂಗಳು 228 ರೂ., 2೦ ವರ್ಷದವರು 248 ರೂ., 21 ವರ್ಷದವರು ಪ್ರತಿ ತಿಂಗಳು 269 ರೂ., 22 ವರ್ಷದವರು ಪ್ರತಿ ತಿಂಗಳು 292 ರೂ., 23 ವರ್ಷದವರು ಪ್ರತಿ ತಿಂಗಳು 318 ರೂ., 24 ವರ್ಷದವರು ಪ್ರತಿ ತಿಂಗಳು 346 ರೂ., 25 ವರ್ಷದವರು ಪ್ರತಿ ತಿಂಗಳು 372 ರೂ, 26 ವರ್ಷದವರು ಪ್ರತಿ ತಿಂಗಳು 409 ರೂ., 27 ವರ್ಷದವರು ಪ್ರತಿ ತಿಂಗಳು 446 ರೂ., 28 ವರ್ಷದವರು ಪ್ರತಿ ತಿಂಗಳು 485 ರೂ., 29 ವರ್ಷದವರು ಪ್ರತಿ ತಿಂಗಳು 529 ರೂ., 3೦ ವರ್ಷದವರು 577 ರೂ., 31 ವರ್ಷದವರು 63೦ ರೂ., 32 ವರ್ಷದವರು 689 ರೂ., 33 ವರ್ಷದವರು 752 ರೂ., 34 ವರ್ಷದವರು 824 ರೂ., 35 ವರ್ಷದವರು 902 ರೂ., 36 ವರ್ಷದವರು 99೦ ರೂ., 37 ವರ್ಷದವರು 1೦87 ರೂ, 38 ವರ್ಷದವರು 1196 ರೂ., 39 ವರ್ಷದವರು 1318 ರೂ. ಹಾಗೂ 4೦ ವರ್ಷದವರು ಪ್ರತಿ ತಿಂಗಳು 1454 ರೂ. ಹೂಡಿಕೆ ಮಾಡಬೇಕಾಗುತ್ತದೆ.
ಸ್ವಂತ ಮನೆ, ಕಡಿಮೆ ಬಡ್ಡಿಗೆ ಹೋಮ್ ಲೋನ್ ಬೇಕಾ? ಈ ಸಲಹೆಗಳನ್ನು ಅನುಸರಿಸಿ ಸಾಕು
ಈ ರೀತಿ ನೀವು ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡುತ್ತಾ ಬಂದರೆ ವೃದ್ಧಾಪ್ಯದ ಜೀವನವನ್ನು ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದೆ ನೆಮ್ಮದಿಯಿಂದ ಕಳೆಯುವಂತೆ ನೋಡಿಕೊಳ್ಳಬಹುದು ಹಾಗಾಗಿ ಅಟಲ್ ಪಿಂಚಣಿ ಯೋಜನೆಯಲ್ಲಿ ಇಂದಿನಿಂದಲೇ ಹೂಡಿಕೆ ಆರಂಭಿಸಿ.
If you invest just 7 rupees, you will get a pension of 5000 rupees every month