10ನೇ ತರಗತಿ ಪಾಸ್ ಆಗಿದ್ರೆ ಸಾಕು ಸಿಗಲಿದೆ ಸರ್ಕಾರಿ ಕೆಲಸ, ಪೋಸ್ಟ್ ಆಫೀಸ್ ಹುದ್ದೆ! ಅರ್ಜಿ ಸಲ್ಲಿಸಿ
ರಾಷ್ಟ್ರಾದ್ಯಂತ ಪೋಸ್ಟ್ ಆಫೀಸ್ ನಲ್ಲಿ ಸುಮಾರು 50,000 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರದ ಕಡೆಯಿಂದ ಆದೇಶ ಬಂದಿದೆ.
Post Office Recruitment : ಸರ್ಕಾರಿ ಕಚೇರಿಯಲ್ಲಿ ಕೆಲಸ ಪಡೆಯಬೇಕು ಎನ್ನುವುದು ಎಲ್ಲರ ಕನಸು. ಆದರೆ ಹಲವರಿಗೆ ಮನೆಯ ಸಮಸ್ಯೆಗಳಿಂದ ಹೆಚ್ಚಿಗೆ ಓದುವುದಕ್ಕೆ ಆಗಿರುವುದಿಲ್ಲ. ಕೆಲವರು 10ನೇ ತರಗತಿಗೆ ಓದನ್ನು ನಿಲ್ಲಿಸುವ ಪರಿಸ್ಥಿತಿ ಎದುರಾಗಿರುತ್ತದೆ. ಅಂಥವರು ತಾವು ಓದುವುದಕ್ಕೆ ಆಗಲಿಲ್ಲ ಒಳ್ಳೆಯ ಕೆಲಸ ಸಿಗುವುದಿಲ್ಲ, ಸರ್ಕಾರೀ ಕೆಲಸ ಅಂತೂ ಕನಸಿನ ಮಾತು ಎಂದುಕೊಂಡಿರುತ್ತಾರೆ. ಆದರೆ ನೀವು ಚಿಂತೆ ಮಾಡಬೇಕಿಲ್ಲ.
ಇದೀಗ ಕೇಂದ್ರ ಸರ್ಕಾರಕ್ಕೆ ಸೇರಿದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. 10ನೇ ತರಗತಿ ಪಾಸ್ ಆಗಿದ್ರೆ ಸಾಕು, ನೀವು ಈ ಹುದ್ದೆಗೆ (Job) ಅಪ್ಲೈ ಮಾಡಲು ಅರ್ಹತೆ ಪಡೆಯುತ್ತೀರಿ.
ಹೌದು, ರಾಷ್ಟ್ರಾದ್ಯಂತ ಪೋಸ್ಟ್ ಆಫೀಸ್ ನಲ್ಲಿ ಸುಮಾರು 50,000 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರದ ಕಡೆಯಿಂದ ಆದೇಶ ಬಂದಿದೆ.
ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಪೋಸ್ಟ್ ಆಫೀಸ್ ಹುದ್ದೆಗೆ ಸಂಬಂಧಿಸಿದ ಹಾಗೆ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ 10ನೇ ತರಗತಿ ಪಾಸ್ ಆಗಿರುವವರು ಅರ್ಹತೆ ಪಡೆಯುತ್ತಾರೆ. ಈಗಾಗಲೇ ಈ ನೇಮಕಾತಿ ನಡೆಯಬೇಕಿತ್ತು, ಎಲೆಕ್ಷನ್ ನಡೆಯುತ್ತಿದ್ದ ಕಾರಣ ನೇಮಕಾತಿ ತಡವಾಯಿತು. ಇದೀಗ ಶೀಘ್ರದಲ್ಲೇ ಈ ನೇಮಕಾತಿ ನಡೆಯಲಿದೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದ್ದು, ಹುದ್ದೆಗಳಿಗೆ ಅಪ್ಲೈ ಮಾಡುವುದು ಹೇಗೆ ಎಂದು ತಿಳಿಯೋಣ..
60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ
ಹುದ್ದೆಗೆ ಬೇಕಿರುವ ಅರ್ಹತೆ:
*ಅರ್ಜಿ ಸಲ್ಲಿಸುವ ವ್ಯಕ್ತಿ ನಮ್ಮ ದೇಶದ ಪ್ರಜೆಯೇ ಆಗಿರಬೇಕು. ಹಾಗೆಯೇ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
*18 ರಿಂದ 40 ವರ್ಷಗಳ ಒಳಗೆ ಇರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
*ಆದರೆ ವಯೋಮಿತಿಯಲ್ಲಿ ಮೀಸಲಾತಿ ಇದ್ದು, ಸಡಿಲಿಕೆ ಇರುತ್ತದೆ.
*ಅರ್ಜಿದಾರರಿಗೆ ಅವರಿಗೆ ಹತ್ತಿರ ಇರುವ ಪೋಸ್ಟ್ ಆಫೀಸ್ ನಲ್ಲಿಯೇ ಪೋಸ್ಟಿಂಗ್ ಸಿಗುತ್ತದೆ.
*ಮೀಸಲಾತಿ ಮತ್ತು 10ನೇ ತರಗತಿಯಲ್ಲಿ ಪಡೆದಿರುವ ಮಾರ್ಕ್ಸ್ ನ ಅನುಸಾರ ಅಭ್ಯರ್ಥಿಗಳಿಗೆ ಕೆಲಸ ಸಿಗುತ್ತದೆ.
ಖಾಲಿ ಇರುವ ಹುದ್ದೆಗಳು:
*ಗ್ರಾಮೀಣ ಡಾಕ್ ಸೇವಕ್
*ಬ್ರಾಂಚ್ ಪೋಸ್ಟ್ ಮಾಸ್ಟರ್
*ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್
ಕೇಂದ್ರದಿಂದ ಹೊಸ ವಿದ್ಯುತ್ ಯೋಜನೆ! ಜನಸಾಮಾನ್ಯರಿಗೆ ಸಿಗಲಿದೆ ₹78,000 ತನಕ ಬೆನಿಫಿಟ್
ವೇತನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಕೆಲಸಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 10,000 ಇಂದ 12,000 ವರೆಗು ತಿಂಗಳ ವೇತನ (Salary) ಇರುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಪ್ರೊಮೋಷನ್ ಸಹ ಸಿಗುವ ಸಾಧ್ಯತೆ ಇರುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು, ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಇಂದ ಅರ್ಜಿ ಪಡೆದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಸೈಬರ್ ಸೆಂಟರ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
If you pass 10th class, you will get a post office Job, Know the Details