ಕೇಂದ್ರದಿಂದ ಹೊಸ ವಿದ್ಯುತ್ ಯೋಜನೆ! ಜನಸಾಮಾನ್ಯರಿಗೆ ಸಿಗಲಿದೆ ₹78,000 ತನಕ ಬೆನಿಫಿಟ್
ಕೇಂದ್ರ ಸರಕಾರದ ಸೂರ್ಯ ಘರ್ ಯೋಜನೆ ಅಡಿಯಲ್ಲಿ ನೀವು ಸೋಲಾರ್ ವಿದ್ಯುತ್ ಬಳಕೆ ಮಾಡಿದರೆ ಆಗ ನಿಮಗೆ ವಿದ್ಯುತ್ ಬಿಲ್ ಕಟ್ಟಬೇಕಾದ ಪ್ರಮೇಯ ಬರಲಾರದು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗೃಹಜ್ಯೋತಿ ಯೋಜನೆ (Gruha Jyothi Scheme) ಜಾರಿಗೆ ಬಂದ ಕಾರಣ ಅನೇಕ ಬಡವರ್ಗದ ಜನತೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು (Free Electricity Facility) ಪಡೆಯುವಂತೆ ಆಗಿದೆ. 200 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯಬಹುದಾಗಿದ್ದು ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಆಗ 200 ಯುನಿಟ್ ದಾಟುವ ಕಾರಣ ಪೂರ್ತಿ ಮೊತ್ತ ಅವರೇ ಕಟ್ಟಬೇಕಾಗಿ ಬರಲಿದೆ.
ಹಾಗಾಗಿ ಅನೇಕ ಸಂದರ್ಭಗಳಲ್ಲಿ ಮಧ್ಯಮ ವರ್ಗಕ್ಕೆ, ಕೃಷಿ ಅಂಗಡಿ ಮುಂಗಟ್ಟು ಇತರ ಮೀಟರ್ ಬೋರ್ಡ್ ಒಂದೆ ಆಗಿ ಗೃಹಜ್ಯೋತಿ ಸೌಲಭ್ಯ ಮಿಸ್ ಆಗಿರುವುದು ನಾವು ಕಾಣಬಹುದು.
ನೀವು ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತೀರಿ ಎಂದಾದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವುದು ಬಹಳ ಮುಖ್ಯ, ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ನಿಮಗೆ ಅನುಕೂಲ ಆಗಲಿದೆ.
ಜಸ್ಟ್ ಪಾಸ್ ಆಗಿದ್ರೂ ಸಾಕು ವಿದ್ಯಾರ್ಥಿಗಳಿಗೆ ಸಿಗಲಿದೆ ಎಜುಕೇಷನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
ಈ ಯೋಜನೆ ನೀವು ಬಳಕೆ ಮಾಡುವುದರಿಂದ 200 ಯುನಿಟ್ ವಿದ್ಯುತ್ ಬಿಲ್ (Electricity Bill) ದಾಟಲಾರದು. ಅದರ ಜೊತೆಗೆ ನಿಮ್ಮ ಕೆಲಸ ಕಾರ್ಯ ಕೃಷಿಗೆ ಪಂಪ್ ಬಳಕೆ ಇತ್ಯಾದಿಗೂ ಈ ಸೋಲಾರ್ ವಿದ್ಯುತ್ (Solar Electricity) ಸಹಕಾರಿ ಆಗಲಿದೆ. ಕೇಂದ್ರ ಸರಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿದ್ದು ಈ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಸೋಲಾರ್ ವ್ಯವಸ್ಥೆ (Solar Panel) ಮೂಲಕ ವಿದ್ಯುತ್ ವ್ಯವಸ್ಥೆ ಪಡೆದರೆ ಮನೆಗೆ 300 ಯುನಿಟ್ ತನಕವು ವಿದ್ಯುತ್ ಸಂಗ್ರಹ ಮಾಡಬಹುದಾಗಿದೆ. ನೈಸರ್ಗಿಕ ವಿದ್ಯುತ್ ಬಳಕೆ ಆಗುವ ಕಾರಣ ಸಾಮಾನ್ಯ ವಿದ್ಯುತ್ ಗಳು ಉಳಿತಾಯ ಆಗುತ್ತದೆ, ಜೊತೆಗೆ ರಾಜ್ಯದ ಗೃಹಜ್ಯೋತಿ ಸೌಲಭ್ಯ ಕೂಡ ನಿಮಗೆ ಸಿಕ್ಕು ಕರೆಂಟ್ ಬಿಲ್ ಪಾವತಿ ಮಾಡುವ ಅಗತ್ಯ ಕೂಡ ಬೀಳಲಾರದು.
ಹಾಗಾಗಿ ಕೇಂದ್ರ ಸರಕಾರದ ಸೂರ್ಯ ಘರ್ ಯೋಜನೆ ಅಡಿಯಲ್ಲಿ ನೀವು ಸೋಲಾರ್ ವಿದ್ಯುತ್ ಬಳಕೆ ಮಾಡಿದರೆ ಆಗ ನಿಮಗೆ ವಿದ್ಯುತ್ ಬಿಲ್ ಕಟ್ಟಬೇಕಾದ ಪ್ರಮೇಯ ಬರಲಾರದು.
ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?
ಈ ಅರ್ಹತೆ ಇರಬೇಕು
*ಭಾರತೀಯ ಪ್ರಜೆಯಾಗಿರಬೇಕು ಮತ್ತು ಅದಕ್ಕೆ ಸಂಬಂಧ ಪಟ್ಟ ವಿಳಾಸ ಹಾಗೂ ವೈಯಕ್ತಿಕ ದಾಖಲೆ ನೀಡಬೇಕು.
*ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಈ ಸೌಲಭ್ಯ ಇರಲಾರದು.
*ವಾರ್ಷಿಕ ಆದಾಯ ತೆರಿಗೆ ಪಾವತಿ ಮಾಡುವವರು ಸರಕಾರದ ಈ ಯೋಜನೆ ಅಡಿಯಲ್ಲಿ ಸೋಲಾರ್ ಅಳವಡಿಸಿಕೊಳ್ಳಲು ಅನರ್ಹರಾಗುತ್ತಾರೆ.
*ವಾರ್ಷಿಕ 1.50 ಲಕ್ಷಕ್ಕಿಂತ ಹೆಚ್ಚಿಜ ಆದಾಯ ಇರುವವರು ಅನರ್ಹರಾಗುತ್ತಾರೆ.
*ಆಧಾರ್ ಕಾರ್ಡ್, ನಿವಾಸದ ಪ್ರಮಾಣ ಪತ್ರ, ರೇಶನ್ ಕಾರ್ಡ್,ವಿದ್ಯುತ್ ಬಿಲ್, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಿದರೆ ಅರ್ಹ ಫಲಾನುಭವಿಗಳಿಗೆ ಸೋಲಾರ್ ಅಳವಡಿಕೆ ಮಾಡಲು ಸಹಾಯಧನ ಸಿಗುವುದು.
5 ವರ್ಷದ ಮಗು ಇರೋ ಪೋಷಕರಿಗೆ ಪೋಸ್ಟ್ ಆಫೀಸ್ ಭರ್ಜರಿ ಸುದ್ದಿ! ಸಿಗುತ್ತೆ ಯೋಜನೆಯ ಬೆನಿಫಿಟ್
ಸಬ್ಸಿಡಿ ಸೌಲಭ್ಯ
ಆಯ್ಕೆಯಾದ ಫಲಾನುಭವಿಗಳಿಗೆ ಸೋಲಾರ್ ಪ್ಯಾನಲ್ ಬಳಕೆ ಮಾಡಲು 78,000 ರೂಪಾಯಿ ಸಬ್ಸಿಡಿ ಕೂಡ ನೀಡಲಾಗುವ ಕಾರಣ ಹೆಚ್ಚಿನ ಖರ್ಚು ಇಲ್ಲದೇ ಸೋಲಾರ್ ಅನ್ನು ಬಳಕೆ ಮಾಡಬಹುದು.
ಇದಕ್ಕೆ ಅರ್ಜಿ ಸಲ್ಲಿಸಲು https://www.pmsuryaghar.gov.in ವೆಬ್ ಸೈಟ್ ಗೆ ಭೇಟಿ ನೀಡಿ. ಆ ಬಳಿಕ apply for rooftop solar ಎಂದು ಬರಲಿದೆ. ಅದರಲ್ಲಿ ನಿಮ್ಮ ರಾಜ್ಯ , ಜಿಲ್ಲೆ, ವಿದ್ಯುತ್ ಸಂಪರ್ಕ ವ್ಯಾಪ್ತಿ ಎಲ್ಲ ಮಾಹಿತಿ ಫಿಲಪ್ ಮಾಡಬೇಕು.
ಬಳಿಕ ಅಲ್ಲಿ ಅರ್ಜಿ ಸಲ್ಲಿಕೆ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಿದರೆ ಅದನ್ನು ಪರಿಶೀಲಿಸಿ ಅರ್ಹರಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ ಮಾಡಲು ಸಬ್ಸಿಡಿ ನೀಡಲಾಗುತ್ತದೆ
New Electricity Scheme from the center, get benefit up to 78,000