5 ವರ್ಷದ ಮಗು ಇರೋ ಪೋಷಕರಿಗೆ ಪೋಸ್ಟ್ ಆಫೀಸ್ ಭರ್ಜರಿ ಸುದ್ದಿ! ಸಿಗುತ್ತೆ ಯೋಜನೆಯ ಬೆನಿಫಿಟ್
ಕಡಿಮೆ ಹೂಡಿಕೆಯಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಸಹಾಯ ಆಗುತ್ತದೆ. ನೀವು ಸಹ ನಿಮ್ಮ ಮಕ್ಕಳ ಹೆಸರಿನಲ್ಲಿ ಈ ಯೋಜನೆಯ ಖಾತೆ (Post Office Account) ತೆರೆಯಬಹುದು.
ಮಕ್ಕಳನ್ನು ಹೊಂದಿರುವ ಎಲ್ಲಾ ತಂದೆ ತಾಯಿಯರಿಗೂ ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಡಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕಾಗಿ ಬಹಳ ಕಷ್ಟವನ್ನು ಪಡುತ್ತಾರೆ. ಒಂದು ವೇಳೆ ನೀವು ಕೂಡ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದು ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಡಬೇಕು ಎಂದು ಬಯಸುತ್ತಿದ್ದರೆ ನಿಮಗಾಗಿ ಸರ್ಕಾರದ ಕಡೆಯಿಂದ ಒಂದು ಒಳ್ಳೆಯ ಯೋಜನೆಯನ್ನು ತರಲಾಗಿದೆ. ಈ ಯೋಜನೆಯ ಮೂಲಕ ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಹಾಯ ಆಗಲಿದೆ.
ಹೌದು, 5 ವರ್ಷದ ಮಕ್ಕಳನ್ನು ಹೊಂದಿರುವ ತಂದೆ ತಾಯಿಯರಿಗೆ ಇದೊಂದು ಗುಡ್ ನ್ಯೂಸ್ ಆಗಿದೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಹೆಸರು ಬಾಲ್ ಜೀವನ್ ಬಿಮಾ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಯಾವ ರೀತಿ ಸಹಾಯ ಸಿಗುತ್ತದೆ? ಎಲ್ಲವನ್ನು ತಿಳಿಸುತ್ತೇವೆ, ಈ ಲೇಖನವನ್ನು ಪೂರ್ತಿಯಾಗಿ ಓದಿ..
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಿಗ್ ಅಪ್ಡೇಟ್! ಈಗ ಮನೆಯಿಂದಲೇ ಪಡೆಯಿರಿ ಇನ್ನಷ್ಟು ಬೆನಿಫಿಟ್
ಬಾಲ್ ಜೀವನ್ ಬಿಮಾ ಯೋಜನೆ:
ಇದು ಪೋಸ್ಟ್ ಆಫೀಸ್ ವತಿಯಿಂದ ಜಾರಿಗೆ ಬಂದಿರುವ ಯೋಜನೆ ಆಗಿದೆ. ಈ ಒಂದು ಯೋಜನೆಯಲ್ಲಿ ನೀವು ಕಡಿಮೆ ಉಳಿತಾಯ (Savings) ಮಾಡಿ, ಹೆಚ್ಚು ಲಾಭ ಪಡೆಯಬಹುದು. ನಿಮ್ಮ ಮಕ್ಕಳ ಶಿಕ್ಷಣ (Education) ಮತ್ತು ಮದುವೆಗೆ ಈ ಯೋಜನೆಯ ಹಣ ಸಹಾಯ ಮಾಡುತ್ತದೆ. ದಿನಕ್ಕೆ ಕೇವಲ 6 ರೂಪಾಯಿ ಉಳಿತಾಯ ಮಾಡುವ ಹಾಗೆ ಪ್ರೀಮಿಯಂ ಮೊತ್ತ ಶುರುವಾಗುತ್ತದೆ. ಕಡಿಮೆ ಹೂಡಿಕೆಯಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಸಹಾಯ ಆಗುತ್ತದೆ. ನೀವು ಸಹ ನಿಮ್ಮ ಮಕ್ಕಳ ಹೆಸರಿನಲ್ಲಿ ಈ ಯೋಜನೆಯ ಖಾತೆ (Post Office Account) ತೆರೆಯಬಹುದು.
ಪೋಸ್ಟ್ ಆಫೀಸ್ ಬಾಲ್ ಬಿಮಾ ಯೋಜನೆಯ ವಿಶೇಷತೆ:
*ಈ ಒಂದು ಯೋಜನೆಯು ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಸಹ ನೀಡುತ್ತದೆ.
*ತಂದೆ ತಾಯಿಯ ಇಬ್ಬರು ಮಕ್ಕಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.
*5 ರಿಂದ 20 ವರ್ಷಗಳ ಒಳಗಿನ ಮಕ್ಕಳಿರುವ ತಂದೆ ತಾಯಿ ಈ ಖಾತೆಯನ್ನು ತೆರೆಯಬಹುದು.
*ಈ ಯೋಜನೆಯಲ್ಲಿ ಗರಿಷ್ಠ 1 ಲಕ್ಷದವರೆಗೂ ಹೂಡಿಕೆ ಮಾಡಬಹುದು. ತಂದೆ ತಾಯಿ ಅವರ ಆದಾಯದ ಅನುಸಾರ ಹೂಡಿಕೆಯ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
*ತಂದೆಯ ವಯಸ್ಸ್ 45 ವರ್ಷಗಳ ಒಳಗಿರಬೇಕು
*ಒಂದು ವೇಳೆ ತಂದೆ ತಾಯಿ ಮರಣ ಹೊಂದಿದರೆ ಪ್ರೀಮಿಯಂ ಕಟ್ಟಬೇಕಿಲ್ಲ
*ಯೋಜನೆಯ ಅವಧಿ ಮುಗಿದ ಬಳಿಕ ಬೋನಸ್ ಮತ್ತು ಯೋಜನೆಯ ಪೂರ್ತಿ ಹಣ ಸಿಗಲಿದೆ
*ಇಲ್ಲಿ ಸಾಲ (Loan) ಸಿಗುವುದಿಲ್ಲ, ಈ ಯೋಜನೆಯ ಜವಾಬ್ದಾರಿ ತಂದೆ ತಾಯಿಯದ್ದಾಗಿರುತ್ತದೆ.
*5 ವರ್ಷ ಸರಿಯಾಗಿ ಪ್ರೀಮಿಯಂ ಕಟ್ಟಿದರೆ, ಉತ್ತಮ ಸೌಲಭ್ಯವಿದೆ.
ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ
ಹಳ್ಳಿ ಮಕ್ಕಳಿಗೆ ಹೆಚ್ಚಿನ ಪ್ರಯೋಜನ:
*ಆಕಸ್ಮಾತ್ ಮಗು ಮರಣ ಹೊಂದಿದರೆ ತಂದೆ ತಾಯಿಗೆ ಆರ್ಥಿಕ ಭದ್ರತೆ ಸಿಗುತ್ತದೆ.
*ಪ್ರತಿದಿನ ಕಡಿಮೆ ಹೂಡಿಕೆ ಮಾಡಿ, ಮುಂದೆ ದೊಡ್ಡ ಲಾಭ ಪಡೆಯಬಹುದು.
*ಮಗುವನ್ನು ಓದಿಸಲು ಈ ಹಣ ಸಹಾಯ ಮಾಡುತ್ತದೆ.
*ನಿಮ್ಮ ಮಗುವಿನ ಉನ್ನತ ಶಿಕ್ಷಣ ಅಥವಾ ಮದುವೆ ಎಲ್ಲದಕ್ಕೂ ಈ ಹಣವನ್ನು ಬಳಸಿಕೊಳ್ಳಬಹುದು.
ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್
ಅಗತ್ಯವಿರುವ ದಾಖಲೆಗಳು:
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಅಡ್ರೆಸ್ ಪ್ರೂಫ್
*ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
*ಏಜ್ ಪ್ರೂಫ್
*ತಂದೆ ತಾಯಿಯ ಆಧಾರ್ ಕಾರ್ಡ್
*ಮೆಟ್ರಿಕ್ಯುಲೇಶನ್ ಸರ್ಟಿಫಿಕೇಟ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಬೇಕು.
*ಬಾಲ್ ಜೀವನ್ ಬಿಮಾ ಯೋಜನೆಯ ಬಗ್ಗೆ ಕೇಳಿದರೆ, ಅಧಿಕಾರಿಗಳು ಪೂರ್ತಿ ಮಾಹಿತಿ ನೀಡುತ್ತಾರೆ.
*ಅವರಿಂದ ಅಪ್ಲಿಕೇಶನ್ ಫಾರ್ಮ್ ಪಡೆದು, ಅದನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಬೇಕು.
*ಬಳಿಕ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆ ಶುರು ಮಾಡಬಹುದು.
Post Office Scheme Bal Jeevan Bima Yojana Details