ಜಸ್ಟ್ ಪಾಸ್ ಆಗಿದ್ರೂ ಸಾಕು ವಿದ್ಯಾರ್ಥಿಗಳಿಗೆ ಸಿಗಲಿದೆ ಎಜುಕೇಷನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

Story Highlights

ಈ ಸ್ಕಾಲರ್ಶಿಪ್ ಗೆ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಇಂದು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ

education scholarship : ಶಿಕ್ಷಣ ಎನ್ನುವುದು ಈಗ ಮೂಲಭೂತ ಹಕ್ಕುಗಳಲ್ಲಿ ಒಂದು ಎಂದರೆ ತಪ್ಪಲ್ಲ. ಒಂದು ಮಗು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರೆ ಶಿಕ್ಷಣ ಅತ್ಯಗತ್ಯ. ಹಾಗಾಗಿ ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ತಂದೆ ತಾಯಿ ಆರ್ಥಿಕವಾಗಿ ಸಬಲರಾಗಿಲ್ಲದೆ ಇದ್ದಾಗ, ಕಷ್ಟದಲ್ಲಿ ಇದ್ದಾಗ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಕಷ್ಟವೇ ಆಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಇರುವ ತಂದೆ ತಾಯಿಗಳಿಗೆ ಹಾಗೂ ಕಷ್ಟದಲ್ಲಿರುವ ಮಕ್ಕಳಿಗೆ ಸರ್ಕಾರದ ಕಡೆಯಿಂದ ಸಹಾಯ ಸಿಗುತ್ತದೆ.

ಮಕ್ಕಳು ಚೆನ್ನಾಗಿ ಓದಲು ಬೇಕಾದ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಕೂಡ ನೀಡಲಾಗುತ್ತದೆ. ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವುದು, ಉಚಿತ ಯೂನಿಫಾರ್ಮ್, ಉಚಿತ ಶೂ ಇವುಗಳನ್ನೆಲ್ಲ ಸರ್ಕಾರ ಒದಗಿಸುತ್ತಿದೆ.

ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?

ಅದರ ಜೊತೆಗೆ ಮಕ್ಕಳ ಓದಿಗೆ ಸಹಾಯ ಆಗಲಿ ಎಂದು ಸ್ಕಾಲರ್ಶಿಪ್ ಮೂಲಕ ಸಹಾಯಧನವನ್ನು ಕೂಡ ನೀಡಲಾಗುತ್ತದೆ. ಇಂದು ನಿಮಗೆ ಅಂಥದ್ದೇ ಒಂದು ಸ್ಕಾಲರ್ಶಿಪ್ ಬಗ್ಗೆ ತಿಳಿಸಲಿದ್ದೇವೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ.

ಸ್ಕಾಲರ್ಶಿಪ್ ಎಂದರೆ ರಾಂಕ್ ಬರುವ ಸ್ಟೂಡೆಂಟ್ ಗಳಿಗೆ (Students) ಹೆಚ್ಚಾಗಿ ಕೊಡಲಾಗುತ್ತದೆ. ಆದರೆ ಎಲ್ಲಾ ವಿದ್ಯಾರ್ಥಿಗಳಿಂದಲು ಕೂಡ ರಾಂಕ್ ಬರಲು ಸಾಧ್ಯವಿಲ್ಲ, ಆದರೆ ಅವರಿಗೂ ಕೂಡ ಪ್ರೋತ್ಸಾಹದ ಅಗತ್ಯವಿರುತ್ತದೆ.

ಇಂದು ನಾವು ನಿಮಗೆ ತಿಳಿಸುತ್ತಿರುವುದು ಆ ಥರದ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಶಿಪ್ ಆಗಿದ್ದು, ಈ ಸ್ಕಾಲರ್ಶಿಪ್ ಗೆ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಇಂದು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ…

5 ವರ್ಷದ ಮಗು ಇರೋ ಪೋಷಕರಿಗೆ ಪೋಸ್ಟ್ ಆಫೀಸ್ ಭರ್ಜರಿ ಸುದ್ದಿ! ಸಿಗುತ್ತೆ ಯೋಜನೆಯ ಬೆನಿಫಿಟ್

ಅಗತ್ಯವಿರುವ ದಾಖಲೆಗಳು:

*ಅಡ್ರೆಸ್ ಪ್ರೂಫ್
*ಮಾರ್ಕ್ಸ್ ಕಾರ್ಡ್
*ಬರ್ತ್ ಸರ್ಟಿಫಿಕೇಟ್
*ಫೋನ್ ನಂಬರ್
*ಬ್ಯಾಂಕ್ ಪಾಸ್ ಬುಕ್
*ಆಧಾರ್ ಕಾರ್ಡ್
*ಪಾಸ್ ಪೋರ್ಟ್ ಸೈಜ್ ಫೋಟೋ

Education Scholarshipಯಾವ ಇಲಾಖೆಯಲ್ಲಿ ಸ್ಕಾಲರ್ಶಿಪ್ ಸಿಗುತ್ತದೆ?

*ಸಮಾಜ ಕಲ್ಯಾಣ ಇಲಾಖೆ
*ಬುಡಕಟ್ಟು ಕಲ್ಯಾಣ ಇಲಾಖೆ
*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
*ಕಾರ್ಮಿಕ ಇಲಾಖೆ
*ಎಸ್ಸಿ/ಎಸ್ಟಿ, ಓಬಿಸಿ, ಇಬಿ ಇಂಥ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಿಗ್ ಅಪ್ಡೇಟ್! ಈಗ ಮನೆಯಿಂದಲೇ ಪಡೆಯಿರಿ ಇನ್ನಷ್ಟು ಬೆನಿಫಿಟ್

ಅರ್ಹತೆಗಳು:

*ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಭಾರತದ ಪ್ರಜೆ ಆಗಿರಬೇಕು
*ಕಳೆದ ವರ್ಷ ಮಿನಿಮಮ್ 50% ಅಂಕ ಪಡೆದು ಪಾಸ್ ಆಗಿರಬೇಕು
*ವಿದ್ಯಾರ್ಥಿಯ ಫ್ಯಾಮಿಲಿಯ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು
*ಸ್ಕಾಲರ್ಶಿಪ್ ಪಡೆಯುವ ವಿದ್ಯಾರ್ಥಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ssp.karnataka.gov.in ಈ ಲಿಂಕ್ ಗೆ ಭೇಟಿ ನೀಡಿ. ಆಧಾರ್ ನಂಬರ್, ಹಾಗೂ ಇನ್ನಿತರ ಮಾಹಿತಿ ನೀಡುವ ಮೂಲಕ ರಿಜಿಸ್ಟರ್ ಮಾಡಿ. ಕ್ಯಾಪ್ಚ ಕೋಡ್ ಎಂಟರ್ ಮಾಡುವ ಮೂಲಕ, ಅಪ್ಲಿಕೇಶನ್ ಹಾಕಿ. ನಂತರ ನಿಮ್ಮ ತಂದೆ ತಾಯಿಯ ಆಧಾರ್ ನಂಬರ್ ಹಾಕಿ, ಫೋನ್ ನಂಬರ್ ಅನ್ನು ಹಾಕಿ ಅಪ್ಲಿಕೇಶನ್ submit ಮಾಡಿ. ನಂತರ ನಿಮಗೆ ಐಡಿ ಮತ್ತು ಪಾಸ್ವರ್ಡ್ ನಿಮ್ಮ ಫೋನ್ ನಂಬರ್ ಗೆ ಬರುತ್ತದೆ.

Even if you have just passed, enough students will get education scholarship

Related Stories