ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?

Story Highlights

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಆಗಲಿ, ತಂದೆ ತಾಯಿಗೆ ಹೊರೆ ಆಗದೇ ಇರಲಿ ಎಂದು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಹೆಣ್ಣುಮಕ್ಕಳ ತಂದೆ ತಾಯಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ.

Sukanya samriddhi yojana : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ದೇಶದ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು, ಅವರೆಲ್ಲರು ಉತ್ತಮ ಭವಿಷಯ ರೂಪಿಸಿಕೊಳ್ಳಬೇಕು ಎಂದು ಬಹಳ ಪ್ರಯತ್ನಪಡುತ್ತಿದೆ. ಅದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಆಗಲಿ, ತಂದೆ ತಾಯಿಗೆ ಹೊರೆ ಆಗದೇ ಇರಲಿ ಎಂದು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಹೆಣ್ಣುಮಕ್ಕಳ ತಂದೆ ತಾಯಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ.

5 ವರ್ಷದ ಮಗು ಇರೋ ಪೋಷಕರಿಗೆ ಪೋಸ್ಟ್ ಆಫೀಸ್ ಭರ್ಜರಿ ಸುದ್ದಿ! ಸಿಗುತ್ತೆ ಯೋಜನೆಯ ಬೆನಿಫಿಟ್

ಸುಕನ್ಯಾ ಸಮೃದ್ಧಿ ಯೋಜನೆ:

ಈ ಒಂದು ಯೋಜನೆಯಲ್ಲಿ ಖಾತೆ ತೆರೆದು, ಅತೀಕಡಿಮೆ ಮೊತ್ತವನ್ನು ಹೂಡಿಕೆ ಮಾಡಿದರೆ, ನಿಮ್ಮ ಮಗಳು 18 ವರ್ಷ ತುಂಬುವ ವೇಳೆಗೆ ಅವಳ ವಿದ್ಯಾಭ್ಯಾಸಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಪಡೆದು, ಓದಿಸಬಹುದು. ನಿಮ್ಮ ಮಗುವಿನ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಮದುವೆಯ ಖರ್ಚಿಗೆ ಈ ಯೋಜನೆಯ ಹಣ ಸಹಾಯ ಮಾಡುತ್ತದೆ. ಹಾಗಿದ್ದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆಯುವುದು ಹೇಗೆ? ಇದರಿಂದ ಏನೆಲ್ಲಾ ಸಹಾಯ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

SSY ಖಾತೆ ತೆರೆಯುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಹೆಣ್ಣುಮಕ್ಕಳನ್ನು ಹೊಂದಿರುವ ತಂದೆ ತಾಯಿ ತಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಬಹುದು. ತಂದೆ ತಾಯಿಗೆ ಮಗಳ ಭವಿಷ್ಯ ರೂಪಿಸಲು ಸಹಾಯ ಆಗಲಿ ಎಂದು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಖಾತೆ ತೆರೆದು, ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ, ಉತ್ತಮ ರಿಟರ್ನ್ಸ್ ಪಡೆಯಬಹುದು. ಈ ಯೋಜನೆಯ ಹೂಡಿಕೆಯ ಮಿತಿಯನ್ನು ನಿಗದಿ ಪಡಿಸುವುದು ಪೋಸ್ಟ್ ಆಫೀಸ್ ಆಗಿರುತ್ತದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಿಗ್ ಅಪ್ಡೇಟ್! ಈಗ ಮನೆಯಿಂದಲೇ ಪಡೆಯಿರಿ ಇನ್ನಷ್ಟು ಬೆನಿಫಿಟ್

Sukanya Samriddhi Yojana Scheme Details and Benefitsಪೋಸ್ಟ್ ಆಫೀಸ್ ಇಂದ ಸಿಕ್ಕಿರುವ ಮಾಹಿತಿಯ ಅನುಸಾರ ತಂದೆ ತಾಯಿಯ ವಾರ್ಷಿಕ ಆದಾಯ ಎಷ್ಟಿರುತ್ತದೆ ಎನ್ನುವುದರ ಮೇಲೆ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎನ್ನುವುದು ನಿರ್ಧಾರ ಆಗಲಿದೆ. ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ಕನಿಷ್ಠ 250 ರೂಪಾಯಿ ಹೂಡಿಕೆ ಮಾಡಬಹುದು ಅಥವಾ ಗರಿಷ್ಠ 1.50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. SSY ಅಕೌಂಟ್ ತೆರೆಯಲು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ, ಮಾಹಿತಿ ಪಡೆದು SSY ಖಾತೆ ಶುರು ಮಾಡಬಹುದು.

ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮ:

ನಿಮ್ಮ ಮಗಳು ಸಣ್ಣ ವಯಸ್ಸಿನಲ್ಲಿ ಇದ್ದಾಗಲೇ ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಬಹುದು. 15 ವರ್ಷಗಳ ಕಾಲ ಮಗಳ ಹೆಸರಿನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ, ಮಗಳಿಗೆ 21 ವರ್ಷ ತುಂಬಿದಾಗ ಈ ಯೋಜನೆಯ ಅವಧಿ ಮುಕ್ತಾಯವಾಗುತ್ತದೆ. 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ, 21 ವರ್ಷಗಳವರೆಗೂ ಬಡ್ಡಿ ನಿಮ್ಮದಾಗುತ್ತದೆ. ಈ ಯೋಜನೆಯಲ್ಲಿ ಮಾಡುವ ಹೂಡಿಕೆಗೆ 8.2% ಬಡ್ಡಿ ಸಿಗುತ್ತದೆ. ನಿಮ್ಮ ಮಗುವಿಗೆ 10 ವರ್ಷ ತುಂಬುವುದರ ಒಳಗೆ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬೇಕು. ಒಂದು ಮನೆಯ 2 ಹೆಣ್ಣುಮಗುವಿಗೆ ಇದರಲ್ಲಿ ಖಾತೆ ತೆರೆಯುವ ಅವಕಾಶ ಇರುತ್ತದೆ.

Sukanya samriddhi yojana Details and Benefits

Related Stories