ಈ ಯೋಜನೆಯಲ್ಲಿ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ 15,000 ರೂಪಾಯಿ

ಕೇಂದ್ರ ಸರ್ಕಾರದ ಯೋಜನೆಯಿಂದ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್, ರೂ.15,000!

ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ಗೃಹಜ್ಯೋತಿ ಯೋಜನೆ (gruha jyothi scheme) ಅಡಿಯಲ್ಲಿ ಉಚಿತ ವಿದ್ಯುತ್ (free electricity) ಒದಗಿಸುತ್ತಿದೆ ಅದೇ ರೀತಿ ಈಗ ಕೇಂದ್ರ ಸರ್ಕಾರವು ಕೂಡ ಉಚಿತ ವಿದ್ಯುತ್ ಯೋಜನೆಯನ್ನು ಘೋಷಿಸಿದ್ದು, ಇದರಲ್ಲಿ ನೀವು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದು.

ಅಷ್ಟೇ ಅಲ್ಲ ನೀವು ವಿದ್ಯುತ್ ತಯಾರು ಮಾಡಿ ಅದರಿಂದ ಆದಾಯ ಕೂಡ ಗಳಿಸಬಹುದು. ಅದು ಯಾವ ಯೋಜನೆ ಅಂತ ಯೋಚನೆ ಮಾಡ್ತಿದ್ದೀರಾ? ಅದುವೇ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ!

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಈ ಯೋಜನೆಯಲ್ಲಿ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ 15,000 ರೂಪಾಯಿ - Kannada News

ಏನಿದು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ವಾಸಿಸುವ ಜನರಿಗೆ ಉಚಿತ ವಿದ್ಯುತ್ ಒದಗಿಸುವ ಸಲುವಾಗಿ ಪ್ರತಿಯೊಂದು ಮನೆಯ ಮಹಡಿಯ ಮೇಲೆ ಸೋಲಾರ್ ವಿದ್ಯುತ್ (solar electricity) ಅಳವಡಿಸಿ ಕೊಡಲು ಮುಂದಾಗಿದೆ.

ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಸಿಗುತ್ತೆ!

300 ಯೂನಿಟ್ ವರೆಗೆ ನೀವು ಪ್ರತಿ ತಿಂಗಳು ಉಚಿತ ವಿದ್ಯುತ್ ಪಡೆದುಕೊಳ್ಳಲು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ (solar panel) ಅಳವಡಿಸಬಹುದು. ಒಂದು ಕೋಟಿಗೂ ಅಧಿಕ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವ ಗುರಿ ಹೊಂದಿದೆ ಕೇಂದ್ರ ಸರ್ಕಾರ. ಈ ಯೋಜನೆಗೆ ಕೇಂದ್ರ ಸರ್ಕಾರ 75,021 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಈ ಯೋಜನೆಯ ಅಡಿಯಲ್ಲಿ ಎರಡು ವ್ಯಾಟ್ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಿಕೊಂಡರೆ 60% ವರೆಗೆ ಸಬ್ಸಿಡಿ (subsidy ) ಪಡೆಯಬಹುದು. ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ 40% ನಷ್ಟು ಸಬ್ಸಿಡಿ ಸಿಗುತ್ತದೆ. ಪ್ರತಿ ಕುಟುಂಬಕ್ಕೆ ಗರಿಷ್ಠ 78 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿ ಸಿಗುತ್ತದೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ

Solar Panelಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ವಿಳಾಸ ಪುರಾವೆ
ಮನೆ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ 50 ಫಿಟ್ ಜಾಗ ಇರುವ ಬಗ್ಗೆ ಮಾಹಿತಿ
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ

ನಾಟಿ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ ಸಬ್ಸಿಡಿ ಹಣ! ಪ್ರತಿದಿನ 25,000 ಆದಾಯ ಪಕ್ಕಾ

ಅರ್ಜಿ ಸಲ್ಲಿಸುವುದು ಹೇಗೆ?

https://pmsuryaghar.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ನಲ್ಲಿ ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿ ಅಪ್ರೋವ್ ಆದ 30 ದಿನಗಳ ಒಳಗೆ ಸಬ್ಸಿಡಿ ಹಣ ನಿಮ್ಮ ಖಾತೆಗೆ (Bank Account) ಬರಲಿದೆ.

In this scheme you will get 300 units of free electricity along with 15,000 rupees

Follow us On

FaceBook Google News

In this scheme you will get 300 units of free electricity along with 15,000 rupees