ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ

Bank Minimum Balance : ಬ್ಯಾಂಕು (Bank) ಗಳಲ್ಲಿ ನಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದೇ ರೀತಿಯ ಖಾತೆಯನ್ನು ತೆರೆಯಲು ಅವಕಾಶ ಇದೆ, ಉದಾಹರಣೆಗೆ ಉಳಿತಾಯ ಖಾತೆ, ಸ್ಯಾಲರಿ ಖಾತೆ, ಜಂಟಿ ಖಾತೆ, ಚಾಲ್ತಿ ಖಾತೆ ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಖಾತೆ ತೆರೆಯಲು ಅವಕಾಶ ಇದೆ.

ನಾವು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಅಗತ್ಯ ಇರುವ ಹಾಗೂ ಪ್ರತಿಯೊಬ್ಬರು ತೆರೆಯಬಹುದಾದ ಒಂದು ಖಾತೆ ಅಂದ್ರೆ ಅದು ಉಳಿತಾಯ ಖಾತೆ (savings account). ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (minimum balance) ಅಂದ್ರೆ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಬಹಳ ಮುಖ್ಯ.

ಹಳೆಯ 100 ರೂಪಾಯಿ ನೋಟುಗಳು ಬ್ಯಾನ್ ಆಗುತ್ತಾ? ಆರ್‌ಬಿಐ ಸ್ಪಷ್ಟನೆ ಇಲ್ಲಿದೆ!

ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದರೆ ಹೆಚ್ಚುವರಿ ಶುಲ್ಕ (extra fee) ಪಾವತಿಸಬೇಕಾಗುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರ್‌ಬಿಐ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದ್ದು ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಬ್ಯಾಂಕ್ ಖಾತೆ ಹೊಂದಿರುವವರಿಗೆ ಆರ್‌ಬಿಐನಿಂದ ಹೊಸ ರೂಲ್ಸ್!

ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಖಾತೆ (Bank Account) ತೆರೆದ ನಂತರ ಅದರಲ್ಲಿ ಮಿನಿಮಂ ಬ್ಯಾಲೆನ್ಸ್ (minimum balance) ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದು ಬ್ಯಾಂಕಿನಿಂದ ಬ್ಯಾಂಕ್ಗೆ ವ್ಯತ್ಯಾಸ ಇರುತ್ತದೆ

ಕೆಲವು ಬ್ಯಾಂಕುಗಳಲ್ಲಿ ಸಾವಿರ ರೂಪಾಯಿ ಮಿನಿಮಂ ಬ್ಯಾಲೆನ್ಸ್ ಆಗಿದ್ರೆ ಇನ್ನೂ ಕೆಲವು ಬ್ಯಾಂಕುಗಳಲ್ಲಿ ಹತ್ತು ಸಾವಿರ ರೂಪಾಯಿಗಳವರೆಗಿನ ಮಿನಿಮಂ ಬ್ಯಾಲೆನ್ಸ್ ಇರುವ ರೂಲ್ಸ್ ಕೂಡ ಇದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ

ಈಗ ಆರ್‌ಬಿಐ ಮಿನಿಮಂ ಬ್ಯಾಲೆನ್ಸ್ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಯಾವುದೇ ನಿಷ್ಕ್ರಿಯಗೊಂಡಿರುವ ಖಾತೆಯ ಮೇಲೆ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎನ್ನುವ ಕಾರಣಕ್ಕೆ ಬ್ಯಾಂಕುಗಳು ದಂಡ ವಿಧಿಸುವಂತಿಲ್ಲ.

ಎರಡು ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನು ನೀವು ಹೊಂದಿದ್ದು, ಅದರಲ್ಲಿ ಯಾವುದೇ ರೀತಿ ಹಣಕಾಸಿನ ವಹಿವಾಟು ಮಾಡದಿದ್ದರೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದೆ ಇರುವ ಕಾರಣಕ್ಕೆ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಬ್ಯಾಂಕು ಕೇಳುವಂತಿಲ್ಲ.

Bank Accountಏಪ್ರಿಲ್ 1ರಿಂದ ಹೊಸ ನಿಯಮ ಜಾರಿ!

ಯಾವುದೇ ಸ್ಕಾಲರ್ಶಿಪ್ (scholarship) ಪಡೆಯುವುದಕ್ಕಾಗಿ ಅಥವಾ ನೇರ ಹಣ ವರ್ಗಾವಣೆಗಾಗಿ ಖಾತೆ ತೆರೆದಿದ್ದರೆ ಅದನ್ನು ನಿಷ್ಕ್ರಿಯಗೊಳಿಸುವ (deactivated account) ಹಾಗಿಲ್ಲ ಎಂದು ಆರ್ಬಿಐ ತಿಳಿಸಿದೆ.

ಇಂಥ ಖಾತೆಯನ್ನು ಎರಡು ವರ್ಷಗಳ ಕಾಲ ಬಳಕೆ ಮಾಡದೇ ಇದ್ದರೂ ಕೂಡ ನಿಷ್ಕ್ರಿಯ ಎಂದು ಪರಿಗಣಿಸುವ ಹಾಗಿಲ್ಲ. ಮತ್ತು ಇಂತಹ ಖಾತೆಗೆ ನಿಷ್ಕ್ರಿಯ ಶುಲ್ಕವು ಕೂಡ ವಿಧಿಸಲಾಗುವುದಿಲ್ಲ ಎಂದು ಆರ್‌ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದುಕೊಳ್ಳುವುದಕ್ಕೆ ಅಥವಾ ನೇರವಾಗಿ ಹಣ ಜಮಾ ಆಗುವ ಕಾರಣಕ್ಕೆ ಬ್ಯಾಂಕ್ ಖಾತೆ ತೆರೆದಿರುತ್ತಾರೆ. ಇಂಥವರು ಎರಡು ವರ್ಷಗಳವರೆಗೂ ಖಾತೆಯನ್ನು ಬಳಕೆ ಮಾಡದೆ ಎರಡು ವರ್ಷಗಳ ನಂತರ ಮತ್ತೆ ಬ್ಯಾಂಕ್ ಖಾತೆಯನ್ನು ಆಕ್ಟಿವ್ ಮಾಡಲು ಬಂದರೆ ಅಂತವರಿಗೆ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ ರೂಲ್ಸ್ ಅನ್ವಯವಾಗುವುದಿಲ್ಲ.

ಹಾಗೂ ಮತ್ತೆ ಖಾತೆಯನ್ನು ಅಪ್ಡೇಟ್ ಮಾಡಿ ಕೊಳ್ಳುವುದಕ್ಕೆ ಬ್ಯಾಂಕ್ ನವರು ಶುಲ್ಕವನ್ನು ಕೇಳುವಂತಿಲ್ಲ. ಆರ್ ಬಿ ಐ (RBI) ನ ಈ ಹೊಸ ನಿಯಮ ಹಲವರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!

What is the minimum balance in your bank account, Rule Changed

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories