ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ
Subsidy loan : ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಎಲ್ಲರೂ ಕಾಣುವುದು ಸಹಜ. ಶ್ರೀಮಂತನಿರಬಹುದು, ಮಧ್ಯಮ ವರ್ಗದವರಿರಬಹುದು, ಬಡವರಿರಬಹುದು ಹೀಗೆ ಯಾರು ಬೇಕಾದರೂ ತಮ್ಮದೇ ಆಗಿರುವ ಸ್ವಂತ ಸೂರು ಬೇಕು ಎನ್ನುವ ಕನಸು ಕಾಣಬಹುದು.
ಕಂಡಿರುವ ಕನಸನ್ನು ನನಸಾಗಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿದೆಯೇ? ಖಂಡಿತ ಇಲ್ಲ, ಇದೆಲ್ಲ ನಮ್ಮಂತವರಿಗೆ ಅಲ್ಲ ಎಂದು ಅಂದುಕೊಳ್ಳುವವರು ಸರ್ಕಾರ ಜಾರಿಗೆ ತಂದಿರುವ ಈ ವಸತಿ ಯೋಜನೆಯ ಬಗ್ಗೆ ತಿಳಿದುಕೊಳ್ಳಲೇಬೇಕು.
ಬಡವರು ಕೂಡ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುವ ವಸತಿ ಯೋಜನೆ ಇದಾಗಿದೆ.
ರೈತರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಈ ಯೋಜನೆಯಲ್ಲಿ ಸಿಗಲಿದೆ 90% ವರೆಗೂ ಸಬ್ಸಿಡಿ
ಬಡವರಿಗಾಗಿ ವಸತಿ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ!
ಇನ್ನೇನು ಲೋಕಸಭಾ ಎಲೆಕ್ಷನ್ ಹತ್ರ ಬರ್ತಾ ಇದೆ ದಿನಾಂಕ ಕೂಡ ಘೋಷಣೆ ಆಗಿದೆ, ಈ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದೆ ಯಾವ ರೀತಿಯ ಯೋಜನೆ ಜಾರಿಗೆ ಬರಬಹುದು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಈಗ ಪ್ರತಿಯೊಬ್ಬ ಬಡವನು ಕೂಡ ಸಮಾಜದಲ್ಲಿ ಸ್ಥಾನಮಾನ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಅವರಿಗೆ ಒಂದು ಸ್ವಂತ ಸೂರು ನಿರ್ಮಾಣ ಮಾಡಿ ಕೊಡಲು ಮುಂದಾಗಿದೆ.
2024 ಫೆಬ್ರುವರಿ ತಿಂಗಳಿನಲ್ಲಿ ಮಧ್ಯಂತರ ಬಜೆಟ್ ಘೋಷಣೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹೊಸ ವಸತಿ ಯೋಜನೆಯ ಬಜೆಟ್ ಮಂಡಿಸಿದ್ದಾರೆ. ಪ್ರಧಾನಮಂತ್ರಿಯವರ ವಸತಿ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಎಲ್ಲಾ ಖಾಸಗಿ ವಲಯದ ಬ್ಯಾಂಕ್ಗಳು (Banks) ವಾಣಿಜ್ಯ ಸಂಸ್ಥೆಗಳ ಜೊತೆಗೆ ಸರ್ಕಾರ ಮಾತುಕತೆ ನಡೆಸಿದೆ.
ಹೆಣ್ಣು ಮಕ್ಕಳಿಗೆ ಇಂತಹ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ಪಾಲು ಸಿಗೋದಿಲ್ಲ! ಇಲ್ಲಿದೆ ಮಾಹಿತಿ
ಬಜೆಟ್ ನಲ್ಲಿ ಹೆಚ್ಚು ಹಣ ಮೀಸಲು ಇಟ್ಟಿರುವ ಯೋಜನೆ ಅಂದ್ರೆ ಅದು ವಸತಿ ಯೋಜನೆ. ದೇಶದಲ್ಲಿ ಇರುವ 1.4 ಶತಕೋಟಿ ಜನಸಂಖ್ಯೆಯಲ್ಲಿ ಗ್ರಾಮೀಣ ಅಥವಾ ಹಳ್ಳಿಯ ಭಾಗದಲ್ಲಿ ವಾಸಿಸುವ ಶೇಕಡ 20ರಷ್ಟು ಜನರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಕನಸು ಹೊಂದಿದೆ ಕೇಂದ್ರ ಸರ್ಕಾರ.
ಅದೇ ರೀತಿ ನಗರ ಪ್ರದೇಶಗಳಲ್ಲಿ 1.5 ಮಿಲಿಯನ್ ಜನರಿಗೆ ಸ್ವಂತ ಸೂರು ಇಲ್ಲ. ಇದೆಲ್ಲದರ ಪರಿಹಾರಕ್ಕಾಗಿ ವಸತಿ ಯೋಜನೆಗೆ ಸರ್ಕಾರ ಬಹಳ ದೊಡ್ಡ ಮೊತ್ತದ ಹಣವನ್ನು ಬಿಡುಗಡೆ ಮಾಡಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
2023 – 24ನೇ ಸಾಲಿನಲ್ಲಿ 790 ಶತ ಕೋಟಿ ರೂಪಾಯಿಗಳನ್ನು ವಸತಿ ಯೋಜನೆಗಾಗಿ ಬಿಡುಗಡೆ ಮಾಡಲಾಗಿತ್ತು. ಇದೀಗ 2024 25ನೇ ಸಾಲಿನ ವಸತಿ ಯೋಜನೆಗಾಗಿ 15% ನಷ್ಟು ಹಣವನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದ್ದು, 1,013 ಶತ ಕೋಟಿ ರೂಪಾಯಿಗಳನ್ನು ಅನುದಾನವಾಗಿ ಇಡಲಾಗಿದೆ. ಹೆಚ್ಚುವರಿ ಹಣವನ್ನ ಘೋಷಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಕರ್ಯಗಳನ್ನು ಒದಗಿಸಿಸಲು ಈ ಹಣವನ್ನು ವಿನಿಯೋಗಿಸಲಾಗುವುದು.
2014ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಾರಿಗೆ ತಂದ ಬಳಿಕ 40 ಮಿಲಿಯನ್ ಕಾಂಕ್ರೀಟ್ ಮನೆ ನಿರ್ಮಾಣ ಮಾಡಿಕೊಡುವ ಗುರಿಯನ್ನು ಸಾಧಿಸಲಾಗಿದೆ. ನಿಜ 2025ರ ಹೊತ್ತಿಗೆ ಕೋಟಿ ಮನೆ ನಿರ್ಮಾಣ ಮಾಡಿ ಕೊಡುವ ಗುರಿ ಹೊಂದಿದೆ ಕೇಂದ್ರ ಸರ್ಕಾರ.. ಈ ಹಿನ್ನೆಲೆಯಲ್ಲಿ ದೇಶದಲ್ಲಿ ವಾಸಿಸುವ ಸಾಕಷ್ಟು ಜನ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳುವ ಕನಸನ್ನು ನನಸಾಗಿಸಿಕೊಳ್ಳಬಹುದು.
ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
Housing scheme for the poor, Subsidy loan for building own house
Our Whatsapp Channel is Live Now 👇