ಹೆಣ್ಣು ಮಕ್ಕಳಿಗೆ ಇಂತಹ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ಪಾಲು ಸಿಗೋದಿಲ್ಲ! ಇಲ್ಲಿದೆ ಮಾಹಿತಿ

ಬೇರೆ ದೇಶಗಳಲ್ಲಿ ಆಸ್ತಿ (property) ಬಗ್ಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಭಾರತದಲ್ಲಿ ಮಾತ್ರ ಆಸ್ತಿ ವಿಚಾರ ಬಂದ್ರೆ ಸಾಕು. ಮನೆಯವರೆಲ್ಲರೂ ಅಲರ್ಟ್ ಆಗ್ಬಿಡುತ್ತಾರೆ.
ಕೆಲವರಿಗೆ ಆಸ್ತಿ ಪಡೆದುಕೊಳ್ಳುವ ಚಿಂತೆಯಾದರೆ ಇನ್ನು ಕೆಲವರಿಗೆ ಆಸ್ತಿ ಕಳೆದುಕೊಳ್ಳುವ ಚಿಂತೆ. ಆದರೆ ಇದೇ ಆಸ್ತಿ ಬಗ್ಗೆ ಇದೀಗ ಗಂಡು ಮಕ್ಕಳಿಗೆ ಮಾತ್ರವಲ್ಲದೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾಗಿ ಹಂಚಿಕೆ ಆಗಬೇಕು ಎಂದು ಕಾನೂನು ಜಾರಿಗೆ ತರಲಾಗಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
ಈ ಕಾನೂನಿನ ಅನ್ವಯ ತಂದೆ ತಾಯಿ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಪಾಲಿದೆಯೋ ಹೆಣ್ಣು ಮಕ್ಕಳಿಗೂ ಕೂಡ ಅಷ್ಟೇ ಹಕ್ಕಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಹಕ್ಕು ಸಿಗದೇ ಇರಬಹುದು ಅದು ಯಾವ ಸಂದರ್ಭ ಎನ್ನುವುದನ್ನು ನೋಡೋಣ.
ತಂದೆಯ ಸ್ವಯಾರ್ಜಿತ ಆಸ್ತಿ!
ಯಾವುದೇ ಆಸ್ತಿಯಲ್ಲಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳಲು ಆ ಆಸ್ತಿ ನಮಗೆ ಸಂಬಂಧಪಟ್ಟಿದೆ ಎನ್ನುವುದನ್ನು ನೋಡಬೇಕು. ಉದಾಹರಣೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಪಾಲು ಇದ್ದರೂ ಕೂಡ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ (Own Land, Property) ತಂದೆ ಯಾರಿಗೆ ಆಸ್ತಿ ನೀಡಬೇಕು ಎಂದು ಬಯಸುತ್ತಾನೋ ಅವರಿಗೆ ಆಸ್ತಿ ಹೋಗುತ್ತದೆ
ಇದು ಆತನ ಸ್ವಂತ ದುಡಿಮೆಯಿಂದ ಗಳಿಸಿದ್ದು, ಹಾಗಾಗಿ ಸ್ವಯಾರ್ಜಿತ ಆಸ್ತಿ ವಿಚಾರದಲ್ಲಿ ವಿಲ್ ಕನ್ಸಿಡರ್ ಮಾಡಲಾಗುತ್ತದೆ. ವ್ಯಕ್ತಿ ಬದುಕಿರುವಾಗ ವಿಲ್ ಮಾಡಿ ಇಟ್ಟರೆ ವಿಲ್ ನಲ್ಲಿ ಯಾರ ಹೆಸರಿದೆಯೋ ಅದೇ ಹೆಸರಿಗೆ ಆಸ್ತಿ ನೊಂದಾವಣಿ ಆಗಲಿದೆ.
ಇಲ್ಲಿ ಯಾರು ಕೂಡ ಆಸ್ತಿ ತನ್ನದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ತಂದೆ ಯಾರಿಗೆ ಕೊಡುತ್ತಾರೋ ಅವರಿಗೆ ಆಸ್ತಿ ಸಲ್ಲಿಕೆ ಆಗುತ್ತದೆ. ತಂದೆ, ವಿಲ್ ನಲ್ಲಿ ಮಗ, ಮಗಳು, ಹೆಂಡತಿ ಅಥವಾ ಮೂರನೇ ವ್ಯಕ್ತಿಯನ್ನು ಹಕ್ಕುದಾರರನ್ನಾಗಿ ಮಾಡಬಹುದು. ಹಾಗೂ ಆ ವ್ಯಕ್ತಿ ಬದುಕಿರುವವರೆಗೂ ಆಸ್ತಿಯಲ್ಲಿ ಪಾಲು ಮಾಡಲು ಸಾಧ್ಯವಿಲ್ಲ.
ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ದಾನವಾಗಿ ಸಿಕ್ಕರೆ!
ತಂದೆಗೆ ಯಾವುದೇ ಆಸ್ತಿ ದಾನವಾಗಿ ಸಿಕ್ಕರೆ ಅಥವಾ ತನ್ನಲ್ಲಿರುವ ಆಸ್ತಿಯನ್ನು ಬೇರೆಯವರಿಗೆ ದಾನ ಮಾಡಿದರೆ ಆಗ ಹೆಣ್ಣು ಮಕ್ಕಳಿಗೆ ಅಂತಹ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಬಿಡುಗಡೆ ಆಗಿದ್ದರೆ ದಾನದಿಂದ ಸಿಕ್ಕ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ.
ಪಿಂಚಣಿ ನಿಯಮಗಳಲ್ಲಿ ಬದಲಾವಣೆ; ಏಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ!
ಈ ವರ್ಷಕ್ಕಿಂತ ಮೊದಲೇ ಆಸ್ತಿ ಹಂಚಿಕೆ ಆಗಿದ್ದರೆ!
ಹೆಣ್ಣು ಮಕ್ಕಳಿಗೂ ತಂದೆ ತಾಯಿಯ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎನ್ನುವ ಕಾನೂನು ಬಂದಿದ್ದು 2005ರಲ್ಲಿ. ಹಾಗಾಗಿ 2004 ಅಥವಾ ಅದಕ್ಕಿಂತ ಹಿಂದೆ ಆಸ್ತಿ ಹಂಚಿಕೆಯಾಗಿದ್ದು ಅದರಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಟ್ಟಿಲ್ಲ ಎಂದಾದರೆ ಮತ್ತೆ ಅವರು ಆಸ್ತಿಯಲ್ಲಿ ಪಾಲು ಕೇಳುವಂತಿಲ್ಲ. ಜೊತೆಗೆ ಆಸ್ತಿ ಬೇಡ ಎಂದು ಹೆಣ್ಣು ಮಕ್ಕಳು ಬರೆದುಕೊಟ್ಟಿದರೆ ಮತ್ತೆ ಬೇಕು ಎಂದು ಕಾನೂನಿನ ಮೊರೆ ಹೋಗುವಂತಿಲ್ಲ.
ಇವಿಷ್ಟು ಪ್ರಮುಖ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಆಸ್ತಿಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ರೀತಿಯ ಕಾನೂನುಗಳು ಇವೆ, ಹಾಗಾಗಿ ನೀವು ಯಾವ ರೀತಿಯ ಆಸ್ತಿ ಜೊತೆಗೆ ವ್ಯವಹರಿಸುತಿದ್ದೀರಿ ಎಂಬುದನ್ನು ನೋಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟ ಕಾನೂನಿನ ಪ್ರಕಾರ ನೀವು ಯಾವುದೇ ನಿರ್ಣಯ ತೆಗೆದುಕೊಳ್ಳಬಹುದು.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ
Daughter do not get a share in such property for any reason
ದಾನವಾಗಿ ಸಿಕ್ಕರೆ!



