ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ
ದೊಡ್ಡ ವ್ಯವಹಾರಗಳನ್ನು ಮಾಡುವಾಗ ಬ್ಯಾಂಕಿಗೆ ಹೋಗಿ ಚೆಕ್ (Bank Cheque) ಮೂಲಕ ಹಣಕಾಸಿನ ವ್ಯವಹಾರ ಮಾಡಬೇಕಾಗುತ್ತದೆ
ಇಂದು ಎಲ್ಲಾ ಕಡೆ ಎಲ್ಲರೂ ಕೂಡ ಹಣಕಾಸಿನ ವ್ಯವಹಾರ ಅಂತ ಬಂದಾಗ ಆನ್ಲೈನ್ (online) ಆಯ್ಕೆ ಮಾಡಿಕೊಳ್ಳುತ್ತಾರೆ. ಯಾವ ಬ್ಯಾಂಕ್ (Bank) ಗೂ ಹೋಗಬೇಕಾಗಿಲ್ಲ. ಯಾವ ಮಿಡಿಯೇಟರ್ ಸಹಾಯ ಬೇಕಾಗಿಲ್ಲ.
ಯಾವುದೇ ಬಿಲ್ ಪೇ ಮಾಡುವುದಿದ್ರು ಅಥವಾ ಉಳಿತಾಯ ಯೋಜನೆಯಲ್ಲಿ ಹಣಕಾಸು ಠೇವಣಿ ಮಾಡುವುದಿದ್ದರೂ ಕುಳಿತಲ್ಲೆ ಮೊಬೈಲ್ ನಲ್ಲಿ ಕ್ಷಣಮಾತ್ರದಲ್ಲಿ ಆರ್ಥಿಕ ವಹಿವಾಟುಗಳು ನಡೆಯುತ್ತವೆ..
ಗೂಗಲ್ ಪೇ ಮೂಲಕ ಸಿಗುತ್ತೆ 1 ಲಕ್ಷದವರೆಗೆ ಸಾಲ! ಒಂದೇ ನಿಮಿಷದಲ್ಲಿ ಪಡೆಯಿರಿ
ಆದರೆ ಇಲ್ಲಿ ಒಂದೇ ಒಂದು ತೊಡಕು ಅಂದ್ರೆ ಆನ್ಲೈನ್ ಹೋಗಿ ಮಾಡುವಾಗ ನಿಮಗೆ ಒಂದು ದಿನಕ್ಕೆ ಇಷ್ಟೇ ಹಣಕಾಸಿನ ವ್ಯವಹಾರ ನಡೆಸಬಹುದು ಎನ್ನುವ ಮಿತಿ ಇರುತ್ತೆ. ಹಾಗಾಗಿ ದೊಡ್ಡ ವ್ಯವಹಾರಗಳನ್ನು ಮಾಡುವಾಗ ಬ್ಯಾಂಕಿಗೆ ಹೋಗಿ ಚೆಕ್ (Bank Cheque) ಮೂಲಕ ಹಣಕಾಸಿನ ವ್ಯವಹಾರ ಮಾಡಬೇಕಾಗುತ್ತದೆ..
ಇತ್ತೀಚಿನ ದಿನಗಳಲ್ಲಿ ಚೆಕ್ ಮೂಲಕ ಯಾರು ಅಷ್ಟಾಗಿ ವ್ಯವಹಾರ ಮಾಡುವುದಿಲ್ಲವಾದ್ರೂ, ದೊಡ್ಡ ದೊಡ್ಡ ಬಿಸಿನೆಸ್ (business) ಗಳಲ್ಲಿ ಅಥವಾ ದೊಡ್ಡ ಉದ್ಯಮಗಳ ಡೀಲಿಂಗ್ ಮಾಡಿ ಕೊಳ್ಳುವಾಗ ಅಥವಾ ಸರ್ಕಾರದ ಯೋಜನೆಗಳಿಗೆ ಬೇಕಾಗಿ ಚೆಕ್ ಬಳಕೆ ಮಾಡಬೇಕಾಗುತ್ತದೆ..
ಚೆಕ್ ಬಳಕೆ ಮಾಡುವಾಗ ಇರಲಿ ಗಮನ!
ಬ್ಯಾಂಕ್ ನಲ್ಲಿ ಚೆಕ್ ವಹಿವಾಟು ಮಾಡುವುದಾದರೆ ಕೆಲವು ಪ್ರಮುಖ ಅಂಶಗಳನ್ನು ನೀವು ಗಮನಿಸಬೇಕು. ಯಾಕೆಂದರೆ ಚೆಕ್ಕ ವ್ಯವಹಾರ ಅಷ್ಟು ಸುಲಭವಲ್ಲ ನೀವು ಚೆಕ್ನಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ಕೂಡ ಅದು ನಿಮ್ಮ ಮೇಲೆ ದೊಡ್ಡ ಪರಿಣಾಮ ಬೀರಬಹುದು
ಅದರಲ್ಲೂ ಚೆಕ್ ಬೌನ್ಸ್ ನಂತಹ ಪ್ರಕರಣದಲ್ಲಿ ಸಿಲುಕಿಕೊಂಡರೆ ಮುಗೀತು.. ಬಾರಿ ಪ್ರಮಾಣದ ದಂಡದ ಜೊತೆಗೆ ಜೈಲು ಶಿಕ್ಷೆ ಕೂಡ ಗ್ಯಾರಂಟಿ. ಹಾಗಾಗಿ ಚೆಕ್ ಮೂಲಕ ವ್ಯವಹಾರ ಮಾಡುವವರು ಈ ಎಲ್ಲಾ ವಿಚಾರಗಳ ಬಗ್ಗೆ ಗಮನಹರಿಸುವುದು ಸೂಕ್ತ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ
ಚೆಕ್ ಬೌನ್ಸ್ ಆದರೆ ದಂಡ ವಿಧಿಸಲಾಗುವುದು!
ಯಾರಿಗಾದರೂ ಪೂರ್ವಭಾವಿಯಾಗಿ ನೀವು ಚೆಕ್ ವಿತರಣೆ ಮಾಡುವುದಾದರೆ ಮುಖ್ಯವಾಗಿ ನಿಮ್ಮ ಖಾತೆಯಲ್ಲಿ ಅಷ್ಟು ಬ್ಯಾಲೆನ್ಸ್ (Bank Balance) ಇದ್ಯಾ ಇಲ್ವಾ ಎಂಬುದನ್ನು ನೋಡಿಕೊಳ್ಳಬೇಕು.
ಒಂದು ವೇಳೆ ನೀವು ಚೆಕ್ ಕೊಟ್ಟ ಮೊತ್ತಕ್ಕಿಂತ ಕಡಿಮೆ ಬ್ಯಾಲೆನ್ಸ್ ನಿಮ್ಮ ಖಾತೆಯಲ್ಲಿ (Bank Account) ಇದ್ರೆ, ಆಗ ಅದು ಚೆಕ್ ಬೌನ್ಸ್ (cheque bounce) ಪ್ರಕರಣವಾಗಿ ದಾಖಲಾಗಬಹುದು.
ಜೊತೆಗೆ ಸಹಿ ವಿಚಾರದಲ್ಲಿ ಫ್ರೋಡ್ ಮಾಡುವುದು, ಖಾತೆಯ ಸಂಖ್ಯೆಯನ್ನು ತಪ್ಪಾಗಿ ಬರೆಯುವುದು, ಸಹಿ ತಿದ್ದುವುದು ಚೆಕ್ ಅವಧಿ ಮುಕ್ತಾಯದ ನಂತರ ಕೊಡುವುದು ಹೀಗೆ ಹಲವಾರು ವಿಚಾರಗಳಿಂದ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ.
ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ
ಚೆಕ್ ಬೌನ್ಸ್ ಆದ ಸಮಯದಲ್ಲಿ ಬ್ಯಾಂಕ್ ನಿಮ್ಮನ್ನ ಮೊದಲು ಪ್ರಶ್ನಿಸುತ್ತದೆ. ಅದಾದ ನಂತರ ನಿಮ್ಮ ಮೇಲೆ ಪೊಲೀಸ್ ಕೇಸ್ ದಾಖಲಿಸಬಹುದು. ಸಣ್ಣ ಪ್ರಮಾಣದ ಚೆಕ್ ಬೌನ್ಸ್ ಕೇಸ್ ಆಗಿದ್ರೆ 150 ರೂಪಾಯಿ ಗಳಿಂದ ಆರಂಭವಾಗಿ 800 ವರೆಗೆ ದಂಡ ವಿಧಿಸಬಹುದು.
ಆದರೆ ಇದೇ ದೊಡ್ಡ ಮೊತ್ತದ ಮೊತ್ತ ಹೊಂದಿರುವ ಚೆಕ್ ಆಗಿದ್ದು ಅದು ಬೌನ್ಸ್ ಪ್ರಕರಣಕ್ಕೆ ದಾಖಲಾಗಿದ್ದರೆ, ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಚೆಕ್ ನಲ್ಲಿ ಇದ್ದಮೊತ್ತಕ್ಕಿಂತ ದುಪ್ಪಟ್ಟು ಹಣವನ್ನು ನೀವು ದಂಡವಾಗಿ ಪಾವತಿಸಬೇಕಾಗಬಹುದು.
ಚೆಕ್ ಬೌನ್ಸ್ ಆದ್ರೆ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲು!
ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 8081 ಸೆಕ್ಷನ್ 138 ರ ಅಡಿಯಲಿ ಪ್ರಕರಣ ದಾಖಲಾಗಬಹುದು. ಚೆಕ್ ಬೌನ್ಸ್ ಸಮಯದಲ್ಲಿ ಒಂದು ತಿಂಗಳ ಒಳಗೆ ಚೆಕ್ ನೀಡಿದ ವ್ಯಕ್ತಿಗೆ ಈಗಲೂ ನೋಟಿಸ್ ಕಳುಹಿಸಲಾಗುತ್ತದೆ. ಹಾಗೂ ನೋಟಿಸ್ ಸಿಕ್ಕ 15 ದಿನಗಳಲ್ಲಿ ಆತ ಉತ್ತರಿಸಬೇಕು.
ಇಲ್ಲವಾದರೆ ಪ್ರಕರಣವನ್ನು ದಾಖಲಿಸಿ ಆತನಿಗೆ ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಕೆಲವೊಮ್ಮೆ ಎರಡನ್ನೂ ವಿಧಿಸಲಾಗುತ್ತದೆ. ಇನ್ನು ಕೆಲವೊಮ್ಮೆ ದಂಡ ಅಥವಾ ಜೈಲು ಶಿಕ್ಷೆ 2ರಲ್ಲಿ ಒಂದನ್ನು ವಿಧಿಸಲಾಗುವುದು. ಹಾಗಾಗಿ ನೀವು ಯಾರಿಗಾದರೂ ಚೆಕ್ ನೀಡುವುದಕ್ಕೂ ಮೊದಲು ಈ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಿ.
ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ
Do you know what the punishment is if your Cheque bounce, Know the Law